Advertisement

ತೀರ್ಥಹಳ್ಳಿ; ದಾಖಲಾತಿಗಾಗಿ ರೈತರ ಪರದಾಟ

04:19 PM Sep 25, 2019 | Team Udayavani |

ತೀರ್ಥಹಳ್ಳಿ: ಇಲ್ಲಿನ ತಾಲೂಕು ತಹಶೀಲ್ದಾರ್‌ ಕಚೇರಿಯಲ್ಲಿ ಅಗತ್ಯ ದಾಖಲಾತಿ ಹಾಗೂ ಸವಲತ್ತುಗಳಿಗೆ ಪೂರಕ ಅರ್ಜಿಯೊಂದಿಗೆ ಅಗತ್ಯ ದಾಖಲಾತಿ ಹೊಂದಿಸಿ ಫಲಾನುಭಗಳು ತಾಲೂಕು ಕಚೇರಿಯ ವಿವಿಧ ವಿಭಾಗಗಳಲ್ಲಿ ಅರ್ಜಿ ಸಲ್ಲಿಸಿದರೆ, ಅರ್ಜಿಯೊಂದಿಗೆ ಲಗತ್ತಿಸಲಾದ ದಾಖಲಾತಿಗಳು ಮಾಯವಾಗುತ್ತಿದ್ದು, ಇದರಿಂದಾಗಿ ಅರ್ಜಿದಾರ ಫಲಾನುಭವಿಗಳು ಪರದಾಡುವಂತಾಗಿದೆ ಎಂಬ ದೂರುಗಳು ಕೇಳಿ ಬಂದಿವೆ.

Advertisement

ಆಹಾರ ಮತ್ತು ನಾಗರಿಕ ಸರಬರಾಜು (ಫುಡ್‌ ಸೆಕ್ಷನ್‌) ವಿಭಾಗದಲ್ಲಿ ಬಡವರು, ಹಿಂದುಳಿದ ವರ್ಗದವರು, ಕೂಲಿ ಕಾರ್ಮಿಕರು, ಪರಿಶಿಷ್ಟ ಜಾತಿ/ ಪಂಗಡದವರು ಸರ್ಕಾರ ನೀಡಲಾಗುತ್ತಿದ್ದ ಪಡಿತರ ಚೀಟಿ ಹೊಂದಲು ಅರ್ಜಿಯೊಂದಿಗೆ ಆದಾಯ ಪ್ರಮಾಣಪತ್ರ, ಆಧಾರ್‌ ಕಾರ್ಡ್‌ ಮುಂತಾದ ಅಗತ್ಯ ದಾಖಲೆ ಲಗತ್ತಿಸಿ ಕೊಟ್ಟಿದ್ದರೂ, ಅರ್ಜಿಯೊಂದಿಗೆ ಲಗತ್ತಿಸಲಾದ ಅಗತ್ಯ ದಾಖಲಾತಿ ಪರಿಶೀಲಿಸಿ ಪಡೆದಿರುತ್ತಾರಾದರೂ, ಪಡಿತರ ಚೀಟಿ ಪಡೆಯಲು ಕಚೇರಿಗೆ ಹೋಗಿ ಅರ್ಜಿದಾರರು ಪಡಿತರ ಚೀಟಿ ಕೇಳಲು ಮುಂದಾದರೆ, ಅರ್ಜಿ ತೆಗೆದು ಪರಿಶೀಲಿಸಿ, ಆದಾಯ ಪ್ರಮಾಣ ಪತ್ರ ತರುವಂತೆ ಇಲ್ಲವೇ ಆಧಾರ್‌ ಕಾರ್ಡ್‌ ತರುವಂತೆ ತಾಕೀತು ನೀಡುತ್ತಾರೆ ಎಂದು ಫಲಾನುಭವಿಯೋರ್ವ ಅಳಲು ತೋಡಿಕೊಂಡಿದ್ದಾನೆ.

ಈ ಹಿಂದೆ ಎರಡೂ¾ರು ಬಾರಿ ತಾಪಂ ಸದಸ್ಯರನ್ನು, ಕೆಲ ರಾಜಕೀಯ ಮುಖಂಡರ ಮೂಲಕ ಪ್ರಭಾವ ಬೀರಿದರೂ ಪಡಿತರ ಚೀಟಿಗಾಗಿ ಪರದಾಡುತ್ತಿರುವ ಅಮಾಯಕರ ಗೋಳು ಹೇಳತೀರದಾಗಿದೆ ಎಂದು ಕೆಲವರು ಗೋಳು ತೋಡಿಕೊಂಡಿದ್ದಾರೆ.

ತಾಲೂಕು ಕಚೇರಿಯ ಕಡತಗಳ ವಿಲೇವಾರಿ ವಿಭಾಗ, ರೆಕಾರ್ಡ್‌ ರೂಂ, ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ ಮುಂತಾದ ವಿಭಾಗಗಳಲ್ಲಿ ಟಿಪ್ಪಣಿ ಕಾಫಿ, ಸರ್ವೇ ಸ್ಕೆಚ್‌ ಮುಂತಾದವುಗಳಿಗೆ ಅಗತ್ಯ ದಾಖಲಾತಿ ಇಟ್ಟು ಅರ್ಜಿ ಸಲ್ಲಿಸಿದರೆ ರೈತರು ನಿತ್ಯ ತಾಲೂಕು ಕಚೇರಿಗೆ ಅಲೆದರು ರೈತರಿಗೆ ಸೂಕ್ತ ಮಾಹಿತಿ ದೊರೆಯುತ್ತಿಲ್ಲ. ಈ ಸಂಬಂಧ ಅಧಿಕಾರಿಗಳಿಗೆ ಹಾಗೂ ಸಂಬಂಧ ಪಟ್ಟ ಇಲಾಖೆಗೆ ರೈತರು ಗಮನಕ್ಕೆ ತಂದರು ನಾಳೆ ಬನ್ನಿ ಎಂಬ ಹಾರಿಕೆ ಉತ್ತರಕ್ಕೆ ಸಾರ್ವಜನಿಕರು ಬೇಸತ್ತಿದ್ದಾರೆ. ತಾಲೂಕು ಕಚೇರಿ ಈ ಅವ್ಯವಸ್ಥೆಯ ಬಗ್ಗೆ ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸಬೇಕು ಎಂಬುದು ರೈತ ಸಮುದಾಯದ ಆಗ್ರಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next