Advertisement

Theerthahalli: ಹಬ್ಬಗಳನ್ನು ಒಟ್ಟಾಗಿ ಸಹಬಾಳ್ವೆ, ಶಾಂತಿಯಿಂದ ಆಚರಿಸಲು ಡಿವೈಎಸ್ಪಿ ಮನವಿ

01:10 PM Sep 15, 2023 | Kavyashree |

ತೀರ್ಥಹಳ್ಳಿ: ಮುಂಬರುವ ಗೌರಿ-ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಎಲ್ಲರೂ ಸಹಬಾಳ್ವೆಯಿಂದ ಮತ್ತು ವಿಜೃಂಭಣೆಯಿಂದ ಆಚರಿಸೋಣ ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಿ ಕೆಲಸ ಮಾಡೋಣ ಎಂದು ಡಿವೈಎಸ್ ಪಿ ಗಜಾನನ  ವಾಮನ ಸುತಾರ ಹೇಳಿದರು.

Advertisement

ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಸೆ.14ರ ಗುರುವಾರ ನಡೆದ ವಿವಿಧ ಗಣಪತಿ ಸಂಘಟನಾ ಕಮಿಟಿಯವರು ಮತ್ತು ಮುಖಂಡರು ಸಾರ್ವಜನಿಕ ಸಭೆ ನಡೆಸಿ ಮಾತನಾಡಿ, ಹಬ್ಬಗಳು ವ್ಯವಸ್ಥಿತವಾಗಿ ನಡೆಯುವಲ್ಲಿ ಹಬ್ಬದ ಆಯೋಜಕರ, ಹಿರಿಯರ ಮತ್ತು ಮುಖಂಡರ ಜವಾಬ್ದಾರಿ ಪ್ರಮುಖವಾಗಿರುತ್ತದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ  ಹಬ್ಬವನ್ನು ಆಚರಿಸುವಲ್ಲಿ ಆಯೋಜಕರು ಮತ್ತು ಮುಖಂಡರು ಮುಖ್ಯ ಜವಾಬ್ದಾರಿ ನಿಭಾಯಿಸಬೇಕಿರುತ್ತದೆ ಎಂದರು.

ಸಾರ್ವಜನಿಕರ ಹಿತಾಸಕ್ತಿಯಿಂದ ಹಬ್ಬದ ಆಚರಣೆ ಮತ್ತು ಮೆರವಣಿಗೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳಿಂದ ಅನುಮತಿ ಪಡೆಯುವ ಕಾರ್ಯವನ್ನು ಸುಲಭ ಮಾಡುವ ಹಿನ್ನೆಲೆ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತಂದಿದ್ದು, ತೀರ್ಥಹಳ್ಳಿಯ ತಾಲೂಕು ಕಚೇರಿಯಲ್ಲಿ ಏಕಗವಾಕ್ಷಿ ವ್ಯವಸ್ಥೆಯು ಕಾರ್ಯ ನಿರ್ವಹಿಸುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದರು.

ಈ ಸಂದರ್ಭದಲ್ಲ ತಹಶೀಲ್ದಾರ್ ಲಿಂಗರಾಜ್,  ಅಶ್ವತ್ ಗೌಡ, ಪ.ಪಂ ಅಧ್ಯಕ್ಷ ರಹಮತುಲ್ಲ ಅಸಾದಿ ಸೇರಿ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next