Advertisement

Theerthahalli: ರಾಮೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ “ಮಹಾರುದ್ರ  ಹೋಮ”

01:18 PM Sep 01, 2023 | Kavyashree |

ತೀರ್ಥಹಳ್ಳಿ: ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ʼಮಹಾರುದ್ರ ಪುರಶ್ಚರಣ ಹೋಮ ನಡೆಸಲು ಸಂಕಲ್ಪಿಸಲಾಗಿದೆ.

Advertisement

ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರಾದ ಉಭಯ ಜಗದ್ಗುರುಗಳ ಪೂರ್ಣಾನುಗ್ರಹದಿಂದ ಶ್ರೀ ಶೋಭಕೃತ್‌ನಾಮ ಸಂವತ್ಸರದ ಶ್ರಾವಣ ಬಹುಳ ಏಕಾದಶಿ ಸೇ.10 ರ ಭಾನುವಾರ ಮತ್ತು ದ್ವಾದಶಿ ಸೇ.11 ರ ಸೋಮವಾರ ಶ್ರೀ ರಾಮೇಶ್ವರ ದೇವರ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥವಾಗಿ ʼಮಹಾರುದ್ರ ಪುರಶ್ಚರಣ ಹೋಮ ನಡೆಸಲಾಗುವುದು.

ಭಕ್ತಾದಿಗಳು ಈ ದೇವತಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ತನು-ಮನ-ಧನದೊಂದಿಗೆ ಸಹಕರಿಸಿ, ಶ್ರೀ ಸ್ವಾಮಿಯ ತೀರ್ಥಪ್ರಸಾದವನ್ನು ಸ್ವೀಕರಿಸಿ,ಶ್ರೀ ರಾಮೇಶ್ವರ ದೇವರ ಕೃಪಾನುಗ್ರಹಕ್ಕೆ ಪಾತ್ರರಾಗಲು  ಸೊಪ್ಪುಗುಡ್ಡೆ ರಾಘವೇಂದ್ರ ಕೋರಿದ್ದಾರೆ.

ದೇವಸ್ಥಾನದ ಕಾರ್ಯಕ್ರಮಗಳ ವಿವರ:

ಸೆ.10ರ ಭಾನುವಾರ ಶ್ರಾವಣ ಬಹುಳ ಏಕಾದಶಿ ಬೆಳಗ್ಗೆ ಗಂಟೆ 8-00 ಕ್ಕೆ ʼಫಲನ್ಯಾಸ, ದೇವತಾ ಪ್ರಾರ್ಥನೆ” ತುಂಗಾ ನದಿಯಿಂದ “ಆಕ್ರೋದಕ ಅನಯನ” ಗಣಹೋಮ, “ಮಹಾರುದ್ರ ಪುರಶ್ಚರಣ” ಹೋಮ ಪ್ರಾರಂಭ, ಮಧ್ಯಾಹ್ನ 01.30 ಕ್ಕೆ ʼಮಹಾಮಂಗಳಾರತಿʼ ಆಗಲಿದೆ.

Advertisement

ಸೆ. 11ರ ಸೋಮವಾರ ಶ್ರಾವಣ ಬಹುಳ ದ್ವಾದಶಿ ಬೆಳಗ್ಗೆ ಗಂಟೆ 8 ಗಂಟೆಯಿಂದ “ಪುಣ್ಯಾಹ” “ಮಹಾರುದ್ರ ಪುರಶ್ಚರಣೆ ಹೋಮ” ಹಾಗೂ ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ, ಪ್ರಸಾದ ವಿನಿಯೋಗ” ನಂತರ ಸಾರ್ವಜನಿಕ “ಅನ್ನಸಂತರ್ಪಣೆ” ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next