Advertisement

ಮಲೆನಾಡ ಚಿರಾಪುಂಜಿ ಆಗುಂಬೆಯಲ್ಲೇ ನೀರಿನ ಸಮಸ್ಯೆ: ಟಾಸ್ಕ್ ಫೋರ್ಸ್ ಸಭೆಯಲ್ಲಿ ಚರ್ಚೆ

03:37 PM Nov 28, 2023 | Kavyashree |

ತೀರ್ಥಹಳ್ಳಿ: ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಎಂಬ ಹೆಗ್ಗಳಿಕೆಯೊಂದಿಗೆ ಮಲೆನಾಡ ಚಿರಾಪುಂಜಿ ಎಂದೇ ಖ್ಯಾತಿ ಪಡೆದಿರುವ ಆಗುಂಬೆಯಲ್ಲೇ ಈ ಬಾರಿ ಅತೀ ಹೆಚ್ಚು ನೀರಿನ ಸಮಸ್ಯೆ ಆಗಲಿದೆ. ಅದಕ್ಕಾಗಿ ಟ್ಯಾಂಕರ್ ವ್ಯವಸ್ಥೆ ಆಗಬೇಕಿದೆ ಎಂದು ಅಧಿಕಾರಿಗಳು ಶಾಸಕ ಆರಗ ಜ್ಞಾನೇಂದ್ರ ಅವರಿಗೆ ತಿಳಿಸಿದರು.

Advertisement

ನ.28ರ ಮಂಗಳವಾರ ತಾಲೂಕು ಕಚೇರಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಬರದಿಂದ ಒದಗುವ ಸಮಸ್ಯೆಗಳ ಕುರಿತು ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಾತನಾಡಿದ ಅವರು ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು, ಗ್ರಾಮಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಹೆಚ್ಚಿನ ಗಮನ ವಹಿಸಬೇಕು. ಎಲ್ಲಾ ಕೆಲಸ ಶಾಸಕನಾಗಿ ನಾನು ಮಾಡಲು ಆಗುವುದಿಲ್ಲ. ಕೆಲವು ಕಡೆ ನೀರಿಗಾಗಿ ತುರ್ತು ಕಾಮಗಾರಿ ನಡೆಸಿ ಇಲ್ಲದಿದ್ದರೆ ಟ್ಯಾಂಕರ್ ವ್ಯವಸ್ಥೆ ಮಾಡಿ ಎಂದು ಹೇಳಿದರು.

ಈ ಬಾರಿ ಆಗುಂಬೆ, ಮೇಗರವಳ್ಳಿ, ಕೋಣಂದೂರು,  ಕುಡುಮಲ್ಲಿಗೆ, ಗುಡ್ಡೆಕೊಪ್ಪ, ಬಸವಾನಿ ಸೇರಿದಂತೆ ಹಲವಾರು ಗ್ರಾಮಪಂಚಾಯಿತಿಗಳಿಗೆ ನೀರಿನ ಸಮಸ್ಯೆ ಎದುರಾಗಿದ್ದು, ಇನ್ನೂ ಎರಡು ತಿಂಗಳುಗಳಲ್ಲಿ ನೀರಿನ ಸಮಸ್ಯೆ ಉಲ್ಬಣವಾಗುವ ಸಾಧ್ಯತೆ ಇದೆ. ಈಗಾಗಲೇ ಜಲಜೀವನ್ ಮಿಷನ್ ಅಡಿಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದ್ದು, ಅದರ ಬಗ್ಗೆ ಗ್ರಾಮಪಂಚಾಯತ್ ಅಧಿಕಾರಿಗಳು ಗಮನ‌ ವಹಿಸಿ ಜನರಿಗೆ ತೊಂದರೆ ಆಗದಂತೆ ನೀರಿನ ವ್ಯವಸ್ಥೆ ಮಾಡಿಕೊಡಬೇಕೆಂದು ತಿಳಿಸಿದರು.

ಶಾಸಕರ ಎದುರು ಅಧಿಕಾರಿಗಳು ಸೈಲೆಂಟ್!

ಜನರ ಕಷ್ಟಕ್ಕೆ ಸ್ಪಂದನೆ ಮಾಡಬೇಕಾದ ಅಧಿಕಾರಿಗಳು ಗ್ರಾ.ಪಂ. ವ್ಯಾಪ್ತಿಯಲ್ಲಿ ಕೆಲವೊಂದು ನಿರ್ಣಯಗಳನ್ನು ತೆಗೆದುಕೊಂಡು ಟಾಸ್ಕ್ ಫೋರ್ಸ್ ಸಭೆಯಲ್ಲಿ ಹೇಳಲಾಗದೆ ಸೈಲೆಂಟ್ ಆದ ಘಟನೆ ಕಂಡು ಬಂತು.

Advertisement

ಬಸವಾನಿ ಗ್ರಾಮಪಂಚಾಯಿತಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಗ್ರಾಮಪಂಚಾಯಿತಿ ಸದಸ್ಯರು ಬೇಡ ಎಂದು ನಿರ್ಣಯ ಮಾಡಿದ್ದಾರೆ ಎಂಬ ವಿಷಯ ಅಲ್ಲಿನ ಪಿಡಿಓ ಹೇಳಿದಕ್ಕೆ ಶಾಸಕರು ಗರಂ ಆದರು.

ಈ ಬಗ್ಗೆ ಮಾತನಾಡಿದ ಅವರು, ಜನರಿಗೆ ಶುದ್ಧ ಕುಡಿಯುವ ನೀರು ಕೊಡಲು 360 ಕೋಟಿ ಯೋಜನೆಯಲ್ಲಿ ಬಹುಗ್ರಾಮ ಕುಡಿಯುವ ಯೋಜನೆ ತಂದರೆ ಬೇಡ ಎನ್ನುವುದಾದರೆ ಜನರಿಗೆ ಸದಸ್ಯರೇ ಕುಡಿಯುವ ನೀರನ್ನು ಕೊಡಲು ಹೇಳಿ ಎಂದ ಅವರು, ನಿಮ್ಮನ್ನು ಇಟ್ಟುಕೊಂಡು ಕೆಲಸ ಮಾಡಲು ಆಗುವುದಿಲ್ಲ. ನಿಮ್ಮನೆಲ್ಲಾ ಬದಲಾವಣೆ ಮಾಡಬೇಕು. ಇಲ್ಲದಿದ್ದರೆ ಜನರಿಗೆ ಈ ಬಾರಿ ಕುಡಿಯುವ ನೀರು ಕೊಡಲು ಅಸಾಧ್ಯ ಎಂದು ಗರಂ ಆದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಜಕ್ಕಣ್ಣ ಗೌಡ ಸೇರಿದಂತೆ ಅನೇಕ ಅದಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next