Advertisement

ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮುಖ್ಯ

01:30 PM Jul 19, 2019 | Team Udayavani |

ತೀರ್ಥಹಳ್ಳಿ: ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೂಡ ಕಾನೂನಿನ ನೆರವು ನೀಡಲು ಕಾನೂನು ಸೇವಾ ಪ್ರಾಧಿಕಾರ ಯಾವಾಗಲೂ ಸಿದ್ದವಿದೆ. ಶೋಷಿತರು, ಬಡವರು ಆರ್ಥಿಕವಾಗಿ ಹಿಂದುಳಿದವರು ಇದರ ಪ್ರಯೋೕಜನವನ್ನ ಪಡೆಯಬೇಕು. ಸಮಾಜದಲ್ಲಿ ನಡೆಯುವ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಅರಿವು ಅಗತ್ಯ ಎಂದು ತೀರ್ಥಹಳ್ಳಿ ನ್ಯಾಯಾಲಯದ ನ್ಯಾಯಾಧೀಶೆ ಗೀತಾಂಜಲಿ ಹೇಳಿದರು.

Advertisement

ತಾಲೂಕಿನ ಕೋಣಂದೂರಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತೀರ್ಥಹಳ್ಳಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ಪೊಲೀಸ್‌ ಇಲಾಖೆ ಇವರ ಸಹಯೋಗದಲ್ಲಿ ರೋಟರಿ ಭವನದಲ್ಲಿ ಆಯೋಜಿಸಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನೈಸರ್ಗಿಕ ದುರಂತಕ್ಕೀಡಾದವರಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ದೊರೆಯುವ ಕಾನೂನು ಸೇವೆಗಳು ಮತ್ತು ಸರ್ಕಾರಿ ಸೌಲಭ್ಯಗಳನ್ನು ಪ್ರತಿಯೊಬ್ಬ ನಾಗರಿಕರು ಪಡೆದುಕೊಳ್ಳಬೇಕು. ಕಾನೂನಿನ ಅರಿವನ್ನು ಅರ್ಥ ಮಾಡಿಕೊಂಡು ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿದ್ದ ತೀರ್ಥಹಳ್ಳಿ ವಕೀಲರ ಸಂಘದ ಉಪಾಧ್ಯಕ್ಷ ಎಂ. ಎನ್‌. ರಮೇಶ್‌ ಮಾತನಾಡಿ, ಹಲವು ವರ್ಷಗಳ ಯಾವುದೇ ಅರಿವು ಕಾರ್ಯಾಗಾರಗಳು ನಡೆಯುತ್ತಿರಲಿಲ್ಲ. ನಮ್ಮ ಸಂವಿದಾನದಲ್ಲಿರುವ ವಿಚಾರಗಳ ಬಗ್ಗೆ ಪ್ರತಿಯೊಬ್ಬರೂ ತಿಳಿಯಬೇಕು. ಕಾನೂನಿನ ಅಡಿಯಲ್ಲಿ ಎಲ್ಲರೂ ಸಮಾನರು ಎಂದು ತಿಳಿಸಿದರು.

ಕಂದಾಯ ಇಲಾಖೆಯ ವತಿಯಿಂದ ತಹಶೀಲ್ದಾರ್‌ ಆನಂದ ನಾಯಕ್‌, ಪ್ರಕೃತಿ ವಿಕೋಪದಿಂದ ದುರಂತಗಳಾದಾಗ ಸರ್ಕಾರದಿಂದ ಸಿಗುವ ಪರಿಹಾರಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮವನ್ನುದ್ದೇಶಿಸಿ ಸರ್ಕಲ್ ಇನ್ಸ್‌ಪೆಕ್ಟರ್‌ ಎಚ್. ಎಸ್‌. ಸುರೇಶ್‌ ಮತ್ತು ಸರ್ಕಾರಿ ಅಭಿಯೋಜಕರಾದ ಬಿನು ಡಿ. ಮಾತನಾಡಿದರು

Advertisement

ಹೆಚ್ಚುವರಿ ವ್ಯವಹಾರ ನ್ಯಾಯಾಧೀಶರಾದ ನಿವೇದಿತಾ ಎನ್‌., ಕೋಣಂದೂರು ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪ್ರಫುಲ್ಚಂದ್ರ, ಉಪಾಧಕ್ಷೆ ಗಾಯತ್ರಿ ಸುಧಾಕರ್‌ ಶೆಟ್ಟಿ, ಗ್ರಾಪಂ ಸದಸ್ಯ ಸತೀಶ್‌ ಶೆಟ್ಟಿ, ಕೆ. ಎಂ. ಮೋಹನ್‌ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ವಿನಾಯಕ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next