Advertisement

ಕೋವಿಡ್ ಪರಿಹಾರ ನಿಧಿಗೆ 15 ಲಕ್ಷ ರೂ. ದೇಣಿಗೆ

01:25 PM Jun 07, 2020 | Naveen |

ತೀರ್ಥಹಳ್ಳಿ: ಕ್ಷೇತ್ರದ ಜನತೆ ಪ್ರಧಾನ ಮಂತ್ರಿ ಕೋವಿಡ್‌-19 ರ ಪರಿಹಾರ ನಿಧಿ ಗೆ 15 ಲಕ್ಷ ರೂ. ಧನ ಸಹಾಯ ನೀಡಿದ್ದಾರೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ ನಾಯಕ್‌ ತಿಳಿಸಿದರು.

Advertisement

ಶನಿವಾರ ಪಟ್ಟಣದ “ಪ್ರೇರಣಾ’ದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಒಂದು ವರ್ಷದ ಸಾಧನೆಯ ಕರಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಮಾಸ್ಕ್ ತಯಾರಿಸಿ ಹಂಚುವ ಕಾರ್ಯದಲ್ಲೂ ಕೂಡ ನಮ್ಮ ತಾಲೂಕು ಮಾದರಿಯಾಗಿದೆ. ತಾಲೂಕು ಮಹಿಳಾ ಮೋರ್ಚಾದ ಸವಿತಾ ಉಮೇಶ್‌, ವಿದ್ಯಾ ನಾರಾಯಣ್‌, ಕೆಂದಾಳಬೈಲು ನಿತ್ಯಾನಂದ, ಹೊಳೆಕೊಪ್ಪ ರವೀಂದ್ರ ಸೇರಿದಂತೆ ಹಲವಾರು ಜನರು ಸುಮಾರು 24 ಸಾವಿರ ಮಾಸ್ಕ್ಗಳನ್ನು ಹೊಲಿದು ಸಾರ್ವಜನಿಕರಿಗೆ ಹಂಚಿದ್ದಾರೆ. ಮುಂದಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ವಿದ್ಯಾರ್ಥಿಗಳಿಗೂ ಮಾಸ್ಕ್ ಗಳನ್ನು ನೀಡುವ ಕೆಲಸ ಮಾಡುತ್ತೇವೆ ಎಂದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಕೋವಿಡ್‌- ಸಮಯದಲ್ಲಿ ತಾಲೂಕು ಆಡಳಿತದ ಜೊತೆಗೆ ನಮ್ಮ ಕಾರ್ಯಕರ್ತರು ಉತ್ತಮ ಸೇವೆ ಸಲ್ಲಿಸಿದ್ದಾರೆ. ತಾಲೂಕು ಆಡಳಿತ, ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪೌರ ಕಾರ್ಮಿಕರ ಸೇವೆ ಮಾದರಿಯಾಗಿದೆ. ತಾಲೂಕಿಗೆ 300 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆಯಾಗಿ ಲಾಕ್‌ಡೌನ್‌ ಕಾರಣದಿಂದಾಗಿ ಸ್ಥಗಿತವಾಗಿತ್ತು. ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಕಾಮಗಾರಿ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಲಾಕ್‌ಡೌನ್‌ ಸಮಯದಲ್ಲಿ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದಿದ್ದಾರೆ. ನನ್ನನ್ನು ಟೀಕಿಸುವವರು ಜ್ಞಾನೇಂದ್ರರಿಗೆ ಜೇಬೇ ಇಲ್ಲ ಎಂದು ಹೇಳುತ್ತಿದ್ದಾರೆ. ನಾನು ಅವರ ಹಾಗೆ ಶರ್ಟಿನ ತುಂಬಾ ಜೇಬು ಹೊಲಿಸಿಕೊಂಡಿರುವ ವ್ಯಕ್ತಿಯಲ್ಲ. ನನ್ನ 42 ವರ್ಷದ ರಾಜಕಾರಣದಲ್ಲಿ ಬಡವರ ಪರ , ಜನಪರವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ ಎಂದರು.

ಬಿಜೆಪಿ ಧುರೀಣ ನಾಗರಾಜ್‌ ಶೆಟ್ಟಿ ಮಾತನಾಡಿದರು. ಜಿಪಂ ಸದಸ್ಯ ಕೆ.ಬಿ. ಶ್ರೀನಿವಾಸ್‌, ತಾಪಂ ಸದಸ್ಯ ಸಾಲೇಕೊಪ್ಪ ರಾಮಚಂದ್ರ, ಗೀತಾ ಸದಾನಂದ ಶೆಟ್ಟಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹರಿಕೃಷ್ಣ, ಕೆ. ಮೋಹನ್‌, ರಮ್ಯಾ ಅನಿಲ್‌, ಆರ್‌. ಮದನ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next