Advertisement
ಇಲ್ಲಿನ ಬ್ರಾಹ್ಮಣ ಕುಟುಂಬದ ಪ್ರಸನ್ನ ಎಂಬುವವರ ಮನೆಯಲ್ಲಿ ಸುಮಾರು ನೂರಾರು ವರ್ಷಗಳ ಹಿಂದಿನ ಅಲ್ಲದೆ ಕಾಡಿನಲ್ಲಿ ಸಿಕ್ಕಿದ ಜಿಂಕೆ ಕೊಂಬು ಹಾಗೂ ಕೋಣದ ಕೊಂಬುಗಳನ್ನು ಮನೆಯಲ್ಲಿ ಇಟ್ಟುಕೊಂಡಿದ್ದರು ಆದರೆ ಈ ವಿಚಾರ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು ಇಂದು ಬೆಳಿಗ್ಗೆ ಮನೆಗೆ ಬಂದ ಅಧಿಕಾರಿಗಳ ತಂಡ ಮನೆಯಲ್ಲಿದ್ದ ಪುರಾತನ ಕಾಲದ ಜಿಂಕೆ ಕೊಂಬು, ಹಾಗೂ ಕಾದುಕೊಂಡದ ಕೊಂಬನ್ನು ವಶಕ್ಕೆ ಪಡೆದುಕೊಂಡಿದ್ದಾರೆ, ಆ ಬಳಿಕ ಕೊಂಬುಗಳನ್ನು ಮನೆಯಲ್ಲಿ ಇಟ್ಟುಕೊಂಡಿದ್ದ ಆರೋಪದ ಮೇಲೆ ಕುಟುಂಬದಲ್ಲಿ ವಯಸ್ಸಾಗಿರುವ ಅನಾರೋಗ್ಯಕ್ಕೆ ಒಳಗಾಗಿದ್ದ ಯಜಮಾನನ್ನು ಬಂಧಿಸಲು ಮುಂದಾಗಿದ್ದಾರೆ ಆದರೆ ಈ ವಿಚಾರ ಮಾಜಿ ಗೃಹ ಸಚಿವರ ಗಮನಕ್ಕೆ ಬಂದಿದ್ದು ಕೂಡಲೇ ಗೃಹ ಸಚಿವರು ಘಟನಾ ಸ್ಥಳಕ್ಕೆ ದೌಡಾಯಿಸಿ ಅರಣ್ಯ ಅಧಿಕಾರಿಗಳ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮನೆಯ ಯಜಮಾನನ್ನು ಬಂಧಿಸುವುದಾದರೆ ಮೊದಲು ನನ್ನನ್ನು ಬಂಧಿಸಿ ಎಂದು ಗ್ರಾಮಸ್ಥರ ಜೊತೆ ಸೇರಿ ಅರಣ್ಯ ಅಧಿಕಾರಿಗಳ ನಡೆ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ.
Advertisement
ಜಿಂಕೆ ಕೊಂಬು ಪತ್ತೆ… ಯಜಮಾನನ್ನು ಬಂಧಿಸಲು ಮುಂದಾದ ಅಧಿಕಾರಿಗಳ ಕ್ರಮಕ್ಕೆ ಗರಂ ಆದ ಶಾಸಕ
02:45 PM Nov 01, 2023 | sudhir |