Advertisement

“ಮಕ್ಕಳಿಗ್ಯಾಕವ್ವ ಮದುವೆ’ಬೀದಿ ನಾಟಕ ಪ್ರದರ್ಶನ

06:39 PM Jan 28, 2021 | Team Udayavani |

ಚನ್ನಪಟ್ಟಣ: ಉತ್ತಮ ಜೀವನ ನಿರ್ವಹಿಸುವ ಶಕ್ತಿಯನ್ನು ಶಿಕ್ಷಣ ತುಂಬುತ್ತದೆ. ಮಾನಸಿಕ ಪಕ್ವತೆಗೆ ಶಿಕ್ಷಣ ಅತ್ಯಗತ್ಯ ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಕೆ. ಮಂಜುಳಾ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ನೀಲಕಂಠನಹಳ್ಳಿಯ ಶ್ರೀ ಯಲ್ಲಮ್ಮ ಗುರುಮೂರ್ತಿ ದೇವಾ ಲಯದ ಆವರಣದಲ್ಲಿ ರಾಂಪುರದ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್‌ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ಮಹಿಳಾ ಸಂಘದಿಂದ ಏರ್ಪಡಿಸಿದ್ದ ಮಕ್ಕಳಿಗ್ಯಾಕವ್ವ ಮದುವೆ ಎಂಬ ಬೀದಿ ನಾಟಕ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತ ನಾಡಿ ದರು. ಗಂಡು ಮಕ್ಕಳಿಗೆ ಸರಿ ಸಮ ನಾಗಿ ಹೆಣ್ಣು ಮಕ್ಕಳಿಗೂ ಶಿಕ್ಷಣ ನೀಡಬೇಕು. ದೈಹಿಕ ಮತ್ತು ಮಾನಸಿಕ ಸದೃಢತೆ ಇಲ್ಲದ ಬಾಲೆಯರಿಗೆ ವಿವಾಹಮಾಡು ವುದು ಅಪರಾಧ. ಮದುವೆ ಶಿಕ್ಷೆಯಾಗ ದಂತೆ ಜಾಗ್ರತೆ ವಹಿಸಬೇಕು ಎಂದರು.

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗುರುಮೂರ್ತಿ ಮಾತನಾಡಿ, ಹೆಣ್ಣು ಮಕ್ಕಳು ಭಾರವೆಂಬ ಮನೋ ಭಾವ ತೊಲಗಬೇಕು. ಮೌಡ್ಯದಿಂದ ಹೊರ ಬರದ ಹೊರತು ಸಾಮಾಜಿಕ ಪ್ರಗತಿ ಸಾಧ್ಯವಿಲ್ಲ ಎಂದು ತಿಳಿಸಿದರು.

ಮುಖ್ಯ ಶಿಕ್ಷಕ ಎಸ್‌. ತಿಮ್ಮರಾಜು ಮಾತನಾಡಿ, ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಕೆಳಹಂತ  ದಿಂದಲೂ ಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ಕೊಡ  ಬೇಕು. ಶಿಕ್ಷಣದಿಂದ ಪಡೆದ ಮೌಲ್ಯವನ್ನು ಅಳವಡಿಸಿಕೊಂಡಾಗ ಸಾರ್ಥಕತೆ ಪಡೆಯಬಹುದು ಎಂದರು. ನೇಗಿಲಯೋಗಿ ರಂಗ ತಂಡದ ವಿಜಯ್‌ ರಾಂಪುರ ಪ್ರಾಸ್ತಾವಿಕ ನುಡಿಯಾಡಿದರು.

ಇದನ್ನೂ ಓದಿ:ಶಿಕ್ಷಣದಿಂದ ಉತ್ತಮ ಜೀವನ ಸಾಧ್ಯ

Advertisement

ಹಿರಿಯ ಜಾನಪದ ಗಾಯಕ ಚೌ.ಪು. ಸ್ವಾಮಿ, ಯುವ ಕವಿಗಳಾದ ಅಬ್ಬೂರು ಶ್ರೀನಿವಾಸ್‌ ಮತ್ತು ತುಳಸೀಧರ ಬಾಲ್ಯ ವಿವಾಹದ ಕುರಿತು ಜಾಗೃತಿ ಮೂಡಿಸುವ ಗೀತೆ ಗಳನ್ನು ಹಾಡಿದರು. ಡಾ.ಬಿ.ಆರ್‌.ಅಂಬೇಡ್ಕರ್‌ ಮಹಿಳಾ ಸಂಘದ ಅಧ್ಯಕ್ಷೆ ಪುಷ್ಪಲೀಲಾ, ಪದಾಧಿಕಾರಿಗಳಾದ ವರಲಕ್ಷ್ಮಿ, ರೇಣುಕಾ, ಗ್ರಾಪಂ ಸದಸ್ಯ ರಾದ ಅನಿತಾ, ಅಣ್ಣಯ್ಯ, ವಾಟರ್‌ ಸಪ್ಲೆ„ಯರ್‌ ಕುಮಾರ್‌, ಉಮೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next