Advertisement

ರಂಗಮಂದಿರಗಳಿಗೆ ಬರ: ವಿಷಾದ

12:58 PM Feb 24, 2017 | Team Udayavani |

ಧಾರವಾಡ: ಕಲೆಯ ತವರೂರು ಧಾರವಾಡದಲ್ಲಿ ರಂಗ ಮಂದಿರಗಳಿಗೆ ಬರವಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಜಗುಚಂದ್ರ ಕೂಡ್ಲ ವಿಷಾದ ವ್ಯಕ್ತಪಡಿಸಿದರು. ಕರ್ನಾಟಕ ನಾಟಕ ಅಕಾಡೆಮಿ ಪ್ರಾಯೋಜಕತ್ವದಲ್ಲಿ ನಾವೀಕಾ ರಂಗಭೂಮಿ ಸಂಸ್ಥೆ ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಯಾರು ಹೊಣೆ ನಾಟಕ ಪ್ರದರ್ಶನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 

Advertisement

ಇಲ್ಲಿ ನಾಟಕ ಬರೆಯಲು ನಾಟಕಕಾರರಿದ್ದಾರೆ, ಅಭಿನಯಿಸಲು ಕಲಾವಿದರಿದ್ದಾರೆ, ನೋಡಲು ಪ್ರೇಕ್ಷಕರಿದ್ದಾರೆ, ನಿರ್ಮಾಣ ಮಾಡಲು ಅನೇಕ ಆಸಕ್ತರಿದ್ದಾರೆ, ಸಂಘ-ಸಂಸ್ಥೆಗಳಿವೆ. ಆದರೆ ಸರಿಯಾದ ರಂಗಮಂದಿರಗಳಿಲ್ಲ. ರಂಗ ಮಂದಿರಗಳಿದ್ದರೂ ಕೈಗೆಟುಕುವ ದರಗಳಲ್ಲಿ ಲಭ್ಯವಿಲ್ಲ. ಎಲ್ಲ ರಂಗ ಮಂದಿರಗಳ ಆಡಳಿತ ವರ್ಗದವರು ವ್ಯಾಪಾರ ಮನೋಭಾವ ಹೊಂದಿದ್ದಾರೆ ಎಂದರು. 

ಕಲಾಭವನ, ಸೃಜನಾ ರಂಗಮಂದಿರ, ಪಾಟೀಲ ಪುಟ್ಟಪ್ಪ ಸಭಾಭವನ, ಆಲೂರ ವೆಂಕಟರಾವ್‌ ಭವನ, ಡಾ|ಅಂಬೇಡ್ಕರ ಭವನ, ಕವಿವಿ ಗೋಲ್ಡನ್‌ ಜುಬಿಲಿ ಭವನ, ಕೃಷಿ ವಿವಿ ಅಡಿಟೋರಿಯಂ ಮುಂತಾದವುಗಳು ಕಲಾವಿದರ ಪಾಲಿಗೆ ಕೈಗೆಟುಕದಂತಾಗಿವೆ ಎಂದರು. ಅತಿಥಿಯಾಗಿದ್ದ ಪ್ರಕಾಶ ಉಡಿಕೇರಿ ಮಾತನಾಡಿ, ರಂಗಮಂದಿರಗಳ ಆಡಳಿತ ಮಂಡಳಿಯಲ್ಲಿ ರಂಗಾಸಕ್ತರು ಇಲ್ಲದೇ ಇರುವುದೇ ಈ ಕೊರತೆಗೆ ಕಾರಣ. 

ಆದರೆ ವಿದ್ಯಾವರ್ಧಕ ಸಂಘದ ಬಗ್ಗೆ ಹೇಳುವುದಾದರೆ ನಾವೀಗಾಗಲೇ ರಂಗ ತಜ್ಞರಿಂದ ವರದಿ ಪಡೆದಿದ್ದು ಅದರ ಅನುಷ್ಠಾನ ಪ್ರಗತಿಯಲ್ಲಿದೆ ಎಂದರು.ರಂಗಕರ್ಮಿ ವತ್ಸಲಾ ಕುಲಕರ್ಣಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ|ಲಿಂಗರಾಜ ಅಂಗಡಿ ಮಾತನಾಡಿ, ರಂಗಭೂಮಿ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವುದು ಸತ್ಯ ಸಂಗತಿ ಎಂದರು. 

ನಾರಾಯಣಾಚಾರಿ ಹೊಸಳ್ಳಿ ಪ್ರಾರ್ಥಿಸಿದರು. ಆರತಿ ದೇವಶಿಖಾಮಣಿಸ್ವಾಗತಿಸಿದರು. ಸೋಮಶೇಖರ ಜಾಡರ ಪ್ರಾಸ್ತಾವಿಕ ಮಾತನಾಡಿದರು. ಮೇಘನಾ ಬ್ಯಾಹಟ್ಟಿ ನಿರೂಪಿಸಿದರು. ಸೋಮಶೇಖರ ಜಾಡರ ರಚಿಸಿದ, ಯುವ ನಿರ್ದೇಶಕಿ ಆರತಿ ದೇವಶಿಖಾಮಣಿ ನಿರ್ದೇಶನದಲ್ಲಿ “ಯಾರು ಹೊಣೆ’ ನಾಟಕ ಪ್ರದರ್ಶನಗೊಂಡಿತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next