Advertisement

ನಾಳೆಯಿಂದ ಥಿಯೇಟರ್‌ ಒಲಿಂಪಿಕ್ಸ್‌

12:27 PM Feb 19, 2018 | Team Udayavani |

ಬೆಂಗಳೂರು: ರಾಷ್ಟ್ರೀಯ ನಾಟಕ ಶಾಲೆ ವತಿಯಿಂದ ಫೆ.20ರಿಂದ ಮಾ.6ರವರೆಗೆ ರವೀಂದ್ರ ಕಲಾಕ್ಷೇತ್ರ ಮತ್ತು ಮಲ್ಲತ್ತ ಹಳ್ಳಿಯ ಕಲಾಗ್ರಾಮದಲ್ಲಿ ಎಂಟನೇ ಆವೃತ್ತಿಯ ಥಿಯೇಟರ್‌ ಒಲಿಂಪಿಕ್ಸ್‌ ನಡೆಯಲಿದೆ.

Advertisement

ವಿಶ್ವದ ಅತಿದೊಡ್ಡ ರಂಗಭೂಮಿ ಉತ್ಸವ ಇದಾಗಿದ್ದು, ಹದಿನೈದು ದಿನಗಳ ಕಾಲ ನಡೆಯಲಿದೆ. ದೇಶದ 17 ನಗರಗಳು ಈ ಜಾಗತಿಕ ರಂಗೋತ್ಸವದ ಅತಿಥ್ಯ ವಹಿಸಲಿವೆ. ಇಲ್ಲಿ ನಡೆಯುವ 450 ಪ್ರದರ್ಶನಗಳು, 250 ವೇದಿಕೆ ಪ್ರದರ್ಶನಗಳಲ್ಲಿ ಸುಮಾರು 25 ಸಾವಿರ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್‌.ಆರ್‌.ವಿಶುಕುಮಾರ್‌ ತಿಳಿಸಿದರು.

ಉತ್ಸವದಲ್ಲಿ 12 ನಾಟಕಗಳು ಪ್ರದರ್ಶನಗೊಳ್ಳಲಿವೆ.ಹೊಸ ರೀತಿಯ ನಾಟಕ ಕಟ್ಟುವ ಬಗ್ಗೆ ಅಭಿಲಾಷ್‌ ಪಿಳ್ಳೆ„ ಅವರಿಂದ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಾವೆಲ್ಲಾ ಒಂದು ಎಂಬ ಭಾವನೆ ಮೂಡಿಸಲು ಒಂದೇ ಧ್ವಜವನ್ನು ಹಿಡಿಯುವ ಮೂಲಕ ಸ್ನೇಹ ಧ್ವಜ ಎಂಬ ವಿಷಯದೊಂದಿಗೆ ನಾಟಕ ಪ್ರದರ್ಶನವಾಗಲಿದೆ.

ಸಮಾರಂಭಕ್ಕೆ ಸಚಿವೆ ಉಮಾಶ್ರೀ ಚಾಲನೆ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಒಂದು ಟಿಕೆಟ್‌ಗೆ 50 ರೂ. ನಿಗದಿಪಡಿಸಿದ್ದು, ಆನ್‌ಲೈನ್‌ ಮೂಲಕವೂ ಟಿಕೆಟ್‌ ಕಾಯ್ದಿರಿಸಬಹುದು. ಮಾಹಿತಿಗಾಗಿ ಮೊ. 83759 66782, 98219 87950 ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next