Advertisement
ಮೊದಲ ಹಂತದಲ್ಲಿ – ಪಾರಂಪರಿಕ ದೇವಾಲಯ ರಂಗ ಪ್ರವೇಶ. ಇದು ಭರತನಾಟ್ಯ ಇತಿಹಾಸದಲ್ಲಿ ಬಹುಶಃ ನೂರು ವರ್ಷಗಳ ಹಿಂದೆ ಇದ್ದ ರಂಗಪ್ರವೇಶ ವಿಧಾನ. ಈಗ ಇದು ಪುನರುಜ್ಜೀವನ ಪಡೆದು ಇತಿಹಾಸ ನಿರ್ಮಿಸಿತು.
Related Articles
Advertisement
ಲಾಲ್‌ಗುಡಿ ಜಯರಾಮನ್ ಅವರ ಶ್ರೀ ಕೃಷ್ಣ ನ ಕುರಿತಾದ ಪದವರ್ಣ ಕೃತಿಯಲ್ಲಿ ಕಲಾವಿದೆಯ ಸರ್ವಾಂಗ ನೃತ್ಯ-ನೃತ್ತ-ನಾಟ್ಯ ಪ್ರತಿಭೆ ಸುಂದರವಾಗಿ ಪ್ರಕಟವಾಯಿತು. ಕಲಾವಿದನಿಗೆ ಪಂಥಾಹಾ³ನದಂತಿರುವ ವಿಭಾಗ ಮತ್ತು ಈ ಕೃತಿಯಲ್ಲಿ ವಿದುಷಿ ವಾಣಿಶ್ರೀಯ ನೃತ್ಯ ಸಾಮರ್ಥ್ಯದ ಪ್ರೌಢವಾದ ಪರಿಣತಿ ಚೆನ್ನಾಗಿ ಪ್ರಕಾಶಕ್ಕೆ ಬಂದಿತು. 45 ನಿಮಿಷಗಳ ಈ ಸುಂದರ ನೃತ್ಯದಲ್ಲಿ ಅಡವುಗಳ ಖಚಿತ ನೈಪುಣ್ಯ, ವಿವಿಧ ಭಾವಗಳ ಚಲನೆ, ಸ್ಥಿರಭಂಗಿ, ನೋಟದ ಅಭಿವ್ಯಕ್ತಿ, ಸ್ಥಾಯಿ-ಸಂಚಾರಿ ಮತ್ತು ಪರಿವರ್ತನೆಗಳ ವಿನ್ಯಾಸಗಳು ಶ್ರೀಕೃಷ್ಣನ ಜೀವನದ ವಿವಿಧ ಮುಖಗಳ ನೃತ್ಯ ರೂಪೀಕರಣ ಉನ್ನತವಾದ ಮಟ್ಟದಲ್ಲಿತ್ತು. ಲಯ, ಅಂಗಶುದ್ಧಿ ಮತ್ತು ಗಾಂಭೀರ್ಯದ ನಿಲುವುಗಳು ಮಾದರಿಯಾಗಿದ್ದುವು. ಕೊನೆಯ ಭಾಗದಲ್ಲಿ ದೇವರ ನಾಮ ಪುರಂದರದಾಸರ “ನಾನೇನು ಮಾಡಲಿ ರಂಗಯ್ಯ ಕೃತಿಯಲ್ಲಿ ಆರ್ತತೆ, ಸಂಚಾರಿಭಾವವಾಗಿ ಅಹಲೆÂ, ಕುಚೇಲ ಮುಂತಾದ ಕತೆಗಳ ಸ್ಪರ್ಶ ಚಂದವಾಗಿತ್ತು. ಮಧುರೈ ಕೃಷ್ಣನ್ ಅವರ ತಿಲ್ಲಾನದೊಂದಿಗೆ ಕೊನೆಗೊಂಡ ನೃತ್ಯೋಪಾಸನಂ ಮೇಲ್ಮಟ್ಟದ ಕಲಾನುಭಾವ ನೀಡಿತು. ನಟ್ಟುವಾಂಗವನ್ನು ವಿ| ಶಾರದಾಮಣಿ ಶೇಖರ್ ನಡೆಸಿದರು. ಕು| ವಸುಧಾಶ್ರೀ ಕೋಳಿಕ್ಕಜೆ (ಹಾಡುಗಾರಿಕೆ) ವಿ| ರಾಜನ್ ಪಯ್ಯನೂರು (ಮೃದಂಗ), ಮಾ| ಅಭಿಷೇಕ್ (ಕೊಳಲು) ಇವರು ತುಂಬ ಹೊಂದಿಕೆಯಾಗಿ ರಾಗ, ಭಾವ ಮತ್ತು ನೃತ್ಯಾನುಕೂಲದ ನಾಜೂಕಾದ ಪ್ರಸ್ತುತಿಯಲ್ಲಿ ಉನ್ನತವಾದ ಒಂದು ಮಾದರಿ ಮಟ್ಟವನ್ನು ನೀಡಿ ನರ್ತನವು ಮೆರೆಯುವಂತೆ ಶಕ್ತಿ ನೀಡಿದ್ದು, ಸ್ಮರಣೀಯ ಅನುಭವವಾಗಿತ್ತು.
ವಿ| ರಾಜಶ್ರೀ ಶೆಣೈ, ಉಳ್ಳಾಲ