Advertisement

ಮೃಗಾಲಯ, ಅಭಯಾರಣ್ಯಗಳಲ್ಲೂ ತೀವ್ರ ಕಟ್ಟೆಚ್ಚರ

12:37 AM Apr 27, 2020 | Sriram |

ಮೈಸೂರು: ವಿದೇಶಗಳಲ್ಲಿ ಪ್ರಾಣಿಗಳಲ್ಲೂ ಕೋವಿಡ್- 19 ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಮೃಗಾಲಯ ಮತ್ತು ಅಭಯಾರಣ್ಯಗಳಲ್ಲೂ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅರಣ್ಯ ಸಚಿವ ಆನಂದ್‌ ಸಿಂಗ್‌ ಹೇಳಿದರು.

Advertisement

ಪತ್ರಕರ್ತರೊಂದಿಗೆ ಮಾತನಾಡಿ, ಈ ಸಂಬಂಧ ಈಗಾಗಲೇ ರಾಜ್ಯದಲ್ಲಿನ ಮೃಗಾಲಯಗಳನ್ನು ಬಂದ್‌ ಮಾಡಿದ್ದು, ಪ್ರಾಣಿ-ಪಕ್ಷಿಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದರು. ಲಾಕ್‌ಡೌನ್‌ ಹಿನ್ನೆಲೆ ಅರಣ್ಯದಲ್ಲಿ ಕಳ್ಳತನ ಮತ್ತು ಬೇಟೆಯಾಡುತ್ತಿರುವ ವಿಚಾರ ಗಮನಕ್ಕೆ ಬಂದಿದೆ.

ಬೇಟೆಯಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ರಾಜ್ಯದ ಎರಡು, ಮೂರು ಕಡೆ ಬೇಟೆಯಾಡಿದ ಪ್ರಕರಣಗಳು ನಡೆದಿವೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದರು.

ಎಚ್‌.ಡಿ. ಕೋಟೆಯಲ್ಲಿ ಇಬ್ಬರು ಅರಣ್ಯ ಸಿಬಂದಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಹಿರಿಯ ಅಧಿಕಾರಿಗಳೇ ಮೃತ ಸಿಬಂದಿಯನ್ನು ಮೀನು ಹಿಡಿಯಲು ಕಳುಹಿಸಿದ್ದರೆಂಬ ಆರೋಪವಿದೆ. ಮತ್ತೂಂದೆಡೆ ಮೀನುಗಾರರ ಹಾವಳಿ ಕೂಡ ಇದೆ ಎಂಬ ಮಾತುಗಳಿವೆ. ಈ ಸಂಬಂಧ ಪ್ರತ್ಯಕ್ಷದರ್ಶಿಗಳು ಮತ್ತು ಬದುಕುಳಿದ ಇಬ್ಬರು ಸಿಬಂದಿಯ ವಿಚಾರಣೆ ನಡೆಸುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next