Advertisement

ಕ್ರೀಡೆಯಿಂದ‌ ಯುವ ಸಮುದಾಯದ ಸಂಘಟನೆ ಸಾಧ್ಯ: ಡಾ|ಜಿ. ಶಂಕರ್‌

04:07 PM Apr 10, 2017 | |

ಬೈಂದೂರು: ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಬೈಂದೂರು-ಶಿರೂರು ಘಟಕ ಇವರ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಮೊಗವೀರ ಸೌಹಾರ್ದಯುತ ಹೊನಲು ಬೆಳಕಿನ ಪಂದ್ಯಾಟ ಬೈಂದೂರು ಗಾಂಧಿ ಮೈದಾನದಲ್ಲಿ ಉದ್ಘಾಟನೆಗೊಂಡಿತು.

Advertisement

ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ.ಶಂಕರ್‌ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕ್ರೀಡೆಯ ಮೂಲಕ ಯುವ ಸಮುದಾಯದ ಸಂಘಟನೆ ಸಾಧ್ಯ ವಾಗುತ್ತದೆ. ಕ್ರೀಡಾ ಪ್ರತಿಭೆಗಳಿಗೆ ವಿಪುಲ ವಾದ ಅವಕಾಶಗಳಿವೆ. ಮೊಗವೀರ ಯುವ ಸಂಘಟನೆ ವತಿಯಿಂದ ನಡೆಸಿದ ಕಬಡ್ಡಿ ಪಂದ್ಯಾಟದಲ್ಲಿ ಅನೇಕ ಪ್ರತಿಭೆ ಗಳಿಗೆ ಅವಕಾಶಗಳು ದೊರೆಯುತ್ತವೆ. ಸೂಕ್ತ ಕ್ರೀಡಾಳುಗಳಿಗೆ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಮೂಲಕ ತರಬೇತಿ ನೀಡುವ ಬಗ್ಗೆ ಮಾತುಕತೆ ನಡೆಸಿದ್ದೇನೆ. ಕ್ರೀಡಾಳು ಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದರು.

ಮೊಗವೀರ ಯುವ ಸಂಘಟನೆ ಬೈಂದೂರು-ಶಿರೂರು ಘಟಕದ ಅಧ್ಯಕ್ಷ ಗಂಗಾಧರ ಮೊಗವೀರ ಪಡುವರಿ ಅಧ್ಯಕ್ಷತೆ ವಹಿಸಿದ್ದರು.ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಎ. ಸುವರ್ಣ ಅಂಕಣವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಮೊಗವೀರ ಮಹಾಜನ ಸಂಘ ಬಗ್ವಾಡಿ ಹೋಬಳಿ ಮುಂಬಯಿ ಮಾಜಿ ಅಧ್ಯಕ್ಷ ಮಹಾಬಲ ಕುಂದರ್‌, ನಿವೃತ್ತ ಸಿಂಡಿಕೇಟ್‌ ಬ್ಯಾಂಕ್‌ ಅಧಿಕಾರಿ ಜಗನ್ನಾಥ ಕೆ., ಜಿಲ್ಲಾಧ್ಯಕ್ಷ ಗಣೇಶ ಕಾಂಚನ್‌, ಮೊಗವೀರ ಯುವ ಸಂಘಟನೆ ಬಗ್ವಾಡಿ ಹೋಬಳಿ ಅಧ್ಯಕ್ಷ ಕೆ.ಕೆ. ಕಾಂಚನ್‌, ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ನಾಯ್ಕ ಹೆಮ್ಮಾಡಿ, ರಾಮ ಮೊಗವೀರ ಬೈಂದೂರು, ಮತ್ಸೋದ‌Âಮಿ ರಾಮ ಮೊಗವೀರ ಅಳ್ವೆಗದ್ದೆ, ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಉದಯ ಕುಮಾರ್‌ ಹಟ್ಟಿಯಂಗಡಿ, ಆನಂದ ಮರಕಾಲ ಉಪಸ್ಥಿತರಿದ್ದರು.ಈ ಸಂಧರ್ಭದಲ್ಲಿ ಉದ್ಯಮಿ ಗೋಪಾಲ ಮೊಗವೀರ ಅವರನ್ನು ಸಮ್ಮಾನಿಸಲಾಯಿತು.

Advertisement

ಮಾಜಿ ಜಿ.ಪಂ. ಸದಸ್ಯ ಮದನ್‌ ಕುಮಾರ್‌ ಉಪ್ಪುಂದ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕ್ರೀಡಾ ಕಾರ್ಯದರ್ಶಿ ಕೃಷ್ಣ ಮೊಗವೀರ ಸ್ವಾಗತಿಸಿ, ಪಾಂಡುರಂಗ ಮೊಗವೀರ ಕಾರ್ಯ ಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ವಸಂತ ಬಿ. ತಗ್ಗರ್ಸೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next