Advertisement

ಓದುಗನ ಸೆಳೆದಿಟ್ಟುಕೊಳ್ಳುವ ಯಯಾತಿ

10:45 PM Feb 04, 2020 | mahesh |

ಯಯಾತಿ (ಮರಾಠಿಯಿಂದ ಕನ್ನಡಾನುವಾದದ ಪುಸ್ತಕ)ಮರಾಠಿಯ ಮೊದಲ ಜ್ಞಾನಪೀಠ ಪ್ರಶಸ್ತಿ ವಿಜೇತ ಕಾದಂಬರಿ. ಮರಾಠಿ ಸಾಹಿತ್ಯದಲ್ಲಿ ಹೊರಬಂದ ಮೇರು ಕೃತಿಗಳಲ್ಲಿ ಇದು ಒಂದು. ವಿ.ಎಸ್‌. ಖಾಂಡೇಕರ್‌ ಅವರು ಬರೆದು ಈ ಕಾದಂಬರಿ ಭಾರತದ ಹಲವು ಭಾಷೆಗಳಿಗೆ ಅನುವಾದಗೊಂಡಿದ್ದು ಕನ್ನಡಕ್ಕೆ ಇದನ್ನು ವಿ.ಎಂ. ಇನಾಮ್‌ದಾರ್‌ ಅವರು ಅನುವಾದಿಸಿದ್ದಾರೆ. ಇದರ ಕಥಾ ಸಾರವೇ ನಿಧಾನವಾಗಿ ಓದುಗನನ್ನು ಸೆಳೆದಿಟ್ಟುಕೊಳ್ಳುವಂಥದ್ದು. ಲೇಖಕರು ಹೇಳುವ ಹಾಗೆ ಈ ಕಾದಂಬರಿಯ ಕಥಾಸೂತ್ರ ತೀರ ಹಳೆಯ ಕಾಲದ್ದು. ರಾಜ, ಅವನ ಸಾಮ್ರಾಜ್ಯ, ಅವನ ಸಂಸಾರ, ಅಲ್ಲಿಯ ದಾಸಿಯರು, ಎಲ್ಲಕ್ಕಿಂತ ಹೆಚ್ಚು ಹೊತ್ತು ಈ ಕಾದಂಬರಿ ಸುತ್ತುವುದು ಒಬ್ಬನ ಅರಿಷಡ್‌ ವರ್ಗಗಳ ಸುತ್ತ.

Advertisement

ಘಟನೆ 1
ಪ್ರಾರಂಭದಿಂದಲೇ ಋಷಿಯೊಬ್ಬರ ಶಾಪದಿಂದ ಬೆಳೆಯುವ ರಾಜಮನೆತನ ನೋಡುತ್ತಿದ್ದಂತೆ, ಯಯಾತಿ ಮಹಾರಾಜನ ಅಣ್ಣ ಯತಿ ಎಲ್ಲೋ ದೂರದ ಒಂಟಿ ಪ್ರದೇಶದಲ್ಲಿ ಸಂಸಾರ, ಸಂಬಂಧ, ಮೋಹ, ಮತ್ಸರ ಎಲ್ಲದರ ರುಚಿಯನ್ನು ಮರೆತು ಧ್ಯಾನಸ್ಥನಾಗಿ ಕೂರುವುದರ ಹಿಂದೆ ಶಾಪಗ್ರಸ್ತ ಕೋಪದ ನುಡಿ ಅಡಗಿದೆ. ಇನ್ನು ಹಸ್ತಿನಾಪುರದ ರಾಜ ಯಯಾತಿ. ನೋಡಲು ಮೋಹಕ, ಕಣ್ಣಿನಲ್ಲಿ ಸುಖದ ಮಾದಕತೆಯನ್ನು ಹೊಂದಿದವ. ತನ್ನ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಅಸಮರ್ಥನಾದ ವ್ಯಕ್ತಿ.

ಘಟನೆ 2
ಯಯಾತಿಯ ಹೆಂಡತಿ ಶುಕ್ರಾಚಾರ್ಯರ ಮಗಳು ದೇವಯಾನಿ. ಸುಂದರ ನೋಟದಲ್ಲಿ ಮಹಾರಾಜರ ಸುಖದಾಟಕ್ಕೆ ತನ್ನನ್ನು ಮುಡಿಪಾಗಿಟ್ಟ ಕೋಪಿಷ್ಟ ಹೆಣ್ಣು ಈಕೆ. ತನ್ನ ಕೋಪವನ್ನು ಗೆಳತಿ ಶರ್ಮಿಷ್ಠೆಯ ಮೇಲೆ ಪ್ರಯೋಗಿಸಿ, ಅವಳನ್ನು ತನ್ನ ದಾಸಿಯಾಗಿ ಮಾಡುವ ಈಕೆ, ಹೊತ್ತು ಗೊತ್ತಿಲ್ಲದೆ ಅವಳ ಮೇಲೆ ಹರಿಹಾಯುತ್ತಾಳೆ, ಹಾಗೆಯೇ ಮಹಾರಾಜರ ಮೇಲೆ ಪ್ರೀತಿಯನ್ನು ಪಸರಿಸುತ್ತಾಳೆ.

ಘಟನೆ 3
ಕಾದಂಬರಿಯಲ್ಲಿ ಶರ್ಮಿಷ್ಠೆ ಜತೆಗಿನ ಮಹಾರಾಜನ ಅಕ್ರಮ ಸಂಬಂಧ, ಅವಳ ತಾಯಿತನ, ಯಯಾತಿಯ ಮೋಹ, ಮತ್ಸರ, ಹಾಗೂ ತಾತ್ಸಾರ, ದೇವಯಾನಿಯ ಹಟ, ಹಾಗೂ ಶುಕ್ರಾಚಾರ್ಯರು ಮನಸ್ಸಿನಲ್ಲಿ ಅಂದುಕೊಂಡದ್ದನ್ನು ಶಾಪವಾಗಿ ಕೊಟ್ಟು ಬಿಡುವ ವಿದ್ಯೆ. ಕಾದಂಬರಿಯ ಕೊನೆಯಲ್ಲಿ ಯಯಾತಿ ತಾನು ಸುಖವನ್ನು ಅನುಭವಿಸಬೇಕು, ಹೆಣ್ಣನ್ನು ಅನುಭೋಗಿಸಬೇಕು ಎನ್ನುವುದನ್ನು ಉಳಿಸಿ ಹೋಗುವ ಮಾನವ ಮನಸ್ಸಿನ ಸರ್ವಕಾಲಿಕ ಸತ್ಯ.

ಈ ಕಾದಂಬರಿ ಪುರಾಣದಲ್ಲಿಯ ಒಂದು ಉಪಾಖ್ಯಾನದ ಕಥೆಯನ್ನಾಧರಿಸಿ ಬರೆಯಲಾದ ಒಂದು ಸ್ವತಂತ್ರ ಕಾದಂಬರಿ ಎನ್ನುವ ಲೇಖಕರು, ಇಲ್ಲಿ “ಯಯಾತಿ’ಯ ಗುಣ ಅವಗುಣ ಹಾಗೂ ಅತಿಗುಣ ಪ್ರಸ್ತುತ ಪ್ರಣಯ ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಹೋಲಿಕೆಯಾಗುತ್ತದೆ. ಕಾದಂಬರಿಯಲ್ಲಿ ಬರುವ ಕಥಾವಸ್ತು, ಅದರೊಂದಿಗೆ ಇಲ್ಲಿ ಬರುವ ಒಂದೊಂದು ವಾಕ್ಯಗಳು ನಿಮ್ಮನ್ನು ಗತಿಸಿಹೋದ ನಿನ್ನೆಯನ್ನು, ಮುನ್ನುಡಿಯಾಗುವ ಮುಂದಿನದನ್ನು ನೆನೆಯುವಂತೆ ಕಾಡುತ್ತದೆ.

Advertisement

 ಸುಹಾನ್‌ ಶೇಕ್‌

Advertisement

Udayavani is now on Telegram. Click here to join our channel and stay updated with the latest news.

Next