Advertisement

ಹದಗೆಟ್ಟ ದೆಹಲಿ ವಾತಾವರಣ,ದುಬಾರಿ ಆಯಿತು ವಿಮಾನ ಪ್ರಯಾಣ

09:52 AM Nov 08, 2019 | Team Udayavani |

ಮುಂಬೈ: ದೆಹಲಿ ವಾಯುಮಾಲಿನ್ಯ ತೀವ್ರತೆ ದೇಶದ ವಾಯು ಸಾರಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ರಾಜಧಾನಿಯಿಂದ ಇತರ ನಗರಗಳಿಗೆ ಪ್ರಯಾಣ ಬೆಳೆಸುವ ವಿಮಾನ ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಿದೆ.

Advertisement

ಇತರ ರಾಜ್ಯಗಳಿಗೆ ಹಾರಾಡುವ ದೇಶೀಯ ವಿಮಾನಗಳಲ್ಲಿ ಉಳ್ಳವರು, ಶ್ರೀಮಂತರು ಮಾತ್ರ ಹಾರಾಟ ಮಾಡಬಹುದೆಂಬ ಪರಿಸ್ಥಿತಿ ಪುನ: ನಿರ್ಮಾಣವಾಗಿದ್ದು, ಸಾಮಾನ್ಯ ಜನರು ಟಿಕೆಟ್‌ ದರವನ್ನು ಕೇಳಿ ಕಂಗಾಲಗಿದ್ದಾರೆ.

ಕೆಲಸ ಕಾರ್ಯಗಳ ನಿಮಿತ್ತ, ಬಿಜಿನೆಸ್‌ ಟ್ರಿಪ್‌ಗ್ಳಿಗೆಂದು ಈಗಾಗಲೇ ಮುಂಗಡ ಟಿಕೆಟ್‌ ಬುಕ್‌ ಮಾಡಿಕೊಂಡವರು ಕಾಯ್ದಿರಿಸುವಿಕೆಯನ್ನು ಹಿಂಪಡೆದುಕೊಳ್ಳುತ್ತಿದ್ದು, ಅರ್ಧದಷ್ಟು ಜನರು ತಮ್ಮ ಪ್ರಯಾಣವನ್ನು ಮುಂದೂಡುತ್ತಿದ್ದಾರೆ.

ಸದ್ಯ ದೆಹಲಿಯಿಂದ ಪ್ರಯಾಣ ಬೆಳಸುವವರು ಹಾಗೂ ಇತರ ಕಡೆಗಳಿಂದ ರಾಜಧಾನಿಗೆ ಬರುವವರು ವಿಮಾನ ಪಯಾಣ ದಿಂದ ದೂರ ಉಳಿದಿದ್ದು, ಪರ್ಯಾಯ ವ್ಯವಸ್ಥೆಗಳನ್ನು ಹುಡುಕಿಕೊಳ್ಳುತ್ತಿದ್ದಾರೆ.

ವಾಯುಮಾಲಿನ್ಯವೇ ಕಾರಣ
ದರ ಏರಿಕೆಗೆ ರಾಜಧಾನಿಯ ವಾಯುಮಾಲಿನ್ಯವೇ ಪ್ರಮುಖ ಕಾರಣವಾಗಿದ್ದು, ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗುವುದರೊಂದಿಗೆ ಈ ಬೆಳವಣಿಗೆಯಿಂದ ಆರ್ಥಿಕತೆ ಚಟುವಟಿಕೆಗಳು ಕುಂಟಿತವಾಗುತ್ತಿದೆ.

Advertisement

ಗುರುವಾರದ ಟಿಕೆಟ್‌ ದರ
ಹೊಸದಿಲ್ಲಿ-ಮುಂಬಯಿ 17,000
ಮುಂಬಯಿ-ಹೊಸದಿಲ್ಲಿ 3,300
ಹೊಸದಿಲ್ಲಿ-ಜೈಪುರ 7,000
ಜೈಪುರ-ಹೊಸದಿಲ್ಲಿ 1,600
ಹೊಸದಿಲ್ಲಿ-ಗೋವಾ 8,000
ಗೋವಾ-ಹೊಸದಿಲ್ಲಿ 4,000
ಹೊಸದಿಲ್ಲಿ-ಬೆಂಗಳೂರು 9,600
ಬೆಂಗಳೂರು-ಹೊಸದಿಲ್ಲಿ 4,000
ಹೊಸದಿಲ್ಲಿ-ಹೈದಾರಬಾದ್‌ 4,500
ಹೈದಾರಬಾದ್‌-ಹೊಸದಿಲ್ಲಿ 2,700
ಹೊಸದಿಲ್ಲಿ-ಕೋಲ್ಕತ್ತಾ 3,600
ಕೋಲ್ಕತ್ತಾ-ಹೊಸದಿಲ್ಲಿ 7,000
ಹೊಸದಿಲ್ಲಿ-ಚೆನ್ನೈ 3,500
ಚೆನ್ನೈ-ಹೊಸದಿಲ್ಲಿ 3,600
ಹೊಸದಿಲ್ಲಿ-ದುಬೈ 11,000
ದುಬೈ-ಹೊಸದಿಲ್ಲಿ 18,500
ಹೊಸದಿಲ್ಲಿ-ಬ್ಯಾಂಕಕ್‌ 9,800
ಬ್ಯಾಂಕಕ್‌-ಹೊಸದಿಲ್ಲಿ 8,400

Advertisement

Udayavani is now on Telegram. Click here to join our channel and stay updated with the latest news.

Next