ಚನ್ನಪಟ್ಟಣ: ಮನುಷ್ಯನಿಗೆ ಎಲ್ಲಾ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಮುಖ್ಯ. ಆರೋಗ್ಯ ಭಾಗ್ಯವಿದ್ದರೆ ಹಣ, ವಿದ್ಯೆಯನ್ನು ಪಡೆಯಬಹುದಾಗಿದ್ದು, ವಿದ್ಯಾರ್ಥಿಗಳು ಓದಿನ ಜೊತೆಗೆ ಉತ್ತಮ ಆರೋಗ್ಯ ಕಾಪಾಡಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಎಚ್.ರಾಜಣ್ಣ ಸಲಹೆ ನೀಡಿದರು.
ಪಟ್ಟಣದ ಕೋಟೆ ನ್ಯೂ ಸನ್‌ರೈಸ್ ಮತ್ತು ನಿವೇದಿತ ಪ್ರೌಢ ಶಾಲೆಯಲ್ಲಿ ಆಯೋಜಸಿದ್ದ ತಾಲೂಕು ಮಟ್ಟದ ರಾಷ್ಟ್ರೀಯ ಜಂತುಹುಳು ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಂತುಹುಳು ಮಕ್ಕಳ ರಕ್ತ ಹೀನತೆಗೆ, ಬೆಳವಣಿಗೆ ಕುಂಠಿತಕ್ಕೆ ಕಾರಣವಾಗಿದ್ದು, ಆರೋಗ್ಯ ಇಲಾಖೆ ಉಚಿತವಾಗಿ ನೀಡುತ್ತಿರುವ ಮಾತ್ರೆಗಳನ್ನು ಸೇವಿಸಿ ಜಂತು ಹುಳು ಬಾಧೆಯಿಂದ ವಿಮುಕ್ತರಾಗಿ ಆರೋಗ್ಯವಂತರಾಗಬೇಕು ಎಂದು ತಿಳಿಸಿದರು.
ಓದಿನಲ್ಲಿ ತೊಡಗಿ: ವಾರ್ಷಿಕ ಪರೀಕ್ಷೆ ಹತ್ತಿರ ಬರುತ್ತಿವೆ. ಸಮಯವನ್ನು ವ್ಯಯ ಮಾಡದೇ ಮೊಬೈಲ್, ಟಿವಿಗಳಿಂದದೂರ ಉಳಿದು, ಶಿಸ್ತು, ಸಂಯಮ, ಸಮಯ ಪ್ರಜ್ಞೆಯನ್ನು ಮೈಗೂ ಡಿಸಿಕೊಂಡು ಶ್ರದ್ಧೆಯಿಂದ ಓದಿನಲ್ಲಿ ತೊಡಗಿಸಿ ಕೊಂಡು ಉತ್ತಮ ದರ್ಜೆಯಲ್ಲಿ ತೇರ್ಗಡೆಯಾಗುವ ಮೂಲಕ ಶಾಲೆ ಮತ್ತು ತಂದೆ, ತಾಯಿ, ಗುರುಗಳಿಗೆ ಕೀರ್ತಿ ತರಬೇಕು ಎಂದು ಕಿವಿಮಾತು ಹೇಳಿದರು.
ಸ್ವಚ್ಚತೆಯನ್ನು ಕಾಪಾಡಿ: ತಾಲೂಕು ಆರೋಗ್ಯಾಧಿಕಾರಿ ಡಾ. ರಾಜು ಮಾತ ನಾಡಿ, ಜಂತುಹುಳು ಭಾದೆಯ ಲಕ್ಷಣ ಹಾಗೂ ನಿಯಂತ್ರಣ ಕ್ರಮ ಗಳನ್ನು ವಿವರಿಸಿ ಜಂತು ಹುಳುವಿನಿಂದ ಪೌಷ್ಟಿಕತೆ ಕೊರತೆ ಯಾಗಿ ಮಕ್ಕಳಲ್ಲಿ ರಕ್ತ ಹೀನತೆ ಉಂಟಾಗಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. ಆರೋಗ್ಯದಲ್ಲೂ ಬಹಳಷ್ಟು ಏರುಪೇರು ಆಗುತ್ತದೆ. ಆರೋಗ್ಯ ಇಲಾಖೆ ಇದನ್ನು ಗಮನಿಸಿ ಮನೆ, ಶಾಲಾ ಕಾಲೇಜು, ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಚತೆಯನ್ನು ಕಾಪಾ ಡಿಕೊಂಡು ಆರೋಗ್ಯ ವಂತರಾಗಿ ಆರೋಗ್ಯಕರ ಸಮಾಜಕ್ಕೆ ಮುಂದಾಗಬೇಕು ಎಂದು ಹೇಳಿದರು.
ಮುಖ್ಯ ಶಿಕ್ಷಕ ರಂಜನ್‌ಕುಮಾರ್ ಮುಖ್ಯ ಅತಿಥಿಗಳಾಗಿ ಕ್ಷೇತ್ರ ಸಮನ್ವಯಾಧಿಕಾರಿ ಕುಸು ಮಲತಾ, ಶಾಲಾ ಆಡಳಿತಾಧಿಕಾರಿ ಎಂ.ಹೇಮಾವತಿ, ಆರೋಗ್ಯಾಧಿಕಾರಿ ಸಿದ್ದರಾಮು, ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಣ್ಣ, ಅಕ್ಷರ ದಾಸೋಹ ಸ.ನಿ.ಸಿದ್ದರಾಜು, ಬಿ.ಆರ್.ಪಿ.ಡಿ.ರಾಜಶೇಖರ್, ದೈಹಿಕ ಶಿಕ್ಷಕ ಪ್ರದೀಪ್ ಕುಮಾರ್, ಸಿಬ್ಬಂದಿ ಭಾಗವಹಿಸಿದ್ದರು.