Advertisement

ಜಗತ್ತಿನ ವೇಗದ ರೋಲರ್‌ ಕಾಸ್ಟರ್‌ಗೆ ನಿರ್ಬಂಧ

07:01 PM Aug 24, 2021 | Team Udayavani |

ಟೋಕಿಯೋ: ಜಪಾನ್‌ನಲ್ಲಿರುವ ವಿಶ್ವದ ಅತ್ಯಂತ ವೇಗದ ರೋಲರ್‌ ಕಾಸ್ಟರ್‌ ಡೊ-ಡೊಡೊಪ್ನಾಗೆ ನಿರ್ಬಂಧ ಹೇರಲಾಗಿದೆ.

Advertisement

ಈ ರೋಲರ್‌ ಕಾಸ್ಟರ್‌ನಲ್ಲಿ ಕುಳಿತಿದ್ದ ಅನೇಕರಲ್ಲಿ ಮೂಳೆ ಮುರಿತದ ಸಮಸ್ಯೆ ಕಾಣಿಸಿಕೊಂಡ ಕಾರಣ ಈ ನಿರ್ಧಾರತೆಗೆದುಕೊಳ್ಳಲಾಗಿದೆ.

ಫ‌ುಜಿ-ಕ್ಯೂ ಹೈಲ್ಯಾಂಡ್‌ ಅಮ್ಯೂಸ್‌ಮೆಂಟ್‌ ಪಾರ್ಕ್‌ನಲ್ಲಿರುವ ರೋಲರ್‌ ಕಾಸ್ಟರ್‌ 1.56 ಸೆಕೆಂಡ್‌ಗಳಲ್ಲಿ 112 ಮೈಲು(ಗಂಟೆಗೆ) ವೇಗಕ್ಕೆ ವೇಗ ಹೆಚ್ಚಿಸಿಕೊಳ್ಳುತ್ತದೆ.

ಈ ರೋಲರ್‌ ಕಾಸ್ಟರ್‌ ಹತ್ತಿದ ನಂತರ ಮೂಳೆ ಸಮಸ್ಯೆ ಉಂಟಾಗಿರುವುದಾಗಿ ನಾಲ್ವರು ದೂರಿದ್ದಾರೆ. ಅದರಲ್ಲಿ ಕೆಲವರಿಗೆ ಬೆನ್ನು ಮೂಳೆ ಹಾಗೂ ಕುತ್ತಿಗೆಯ ಮೂಳೆ ಮುರಿದಿರುವುದಾಗಿಯೂ ಹೇಳಲಾಗಿದೆ.

ಇದನ್ನೂ ಓದಿ:ಕೋವಿಡ್ : ರಾಜ್ಯದಲ್ಲಿಂದು 1259 ಪಾಸಿಟಿವ್ ಪ್ರಕರಣ|1701 ಸೋಂಕಿತರು ಗುಣಮುಖ

Advertisement

ಗುರುತ್ವಾಕರ್ಷಣೆ ವೇಗಕ್ಕಿಂತ ಸುಮಾರು 3 ಪಟ್ಟು ಹೆಚ್ಚು ವೇಗವಾಗಿ ಈ ರೋಲರ್‌ ಕಾಸ್ಟರ್‌ ವೇಗ ಹೆಚ್ಚಿಸಿಕೊಳ್ಳುವುದರಿಂದಾಗಿ ಸಮಸ್ಯೆ ಉಂಟಾಗುತ್ತಿರಬಹುದು ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next