Advertisement

ಲೋಕವು ಹೇಳಿದ ಮಾತಿದು!

09:56 AM Mar 12, 2020 | mahesh |

ಈಗಷ್ಟೇ ಮಹಿಳಾ ದಿನಾಚರಣೆಯ ಸಂಭ್ರಮ ಮುಗಿದಿದೆ. ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ಗ್ಳಲ್ಲೆಲ್ಲ ಸ್ತ್ರೀಯರನ್ನು ಹೊಗಳಿ, ಶುಭಾಶಯಗಳ ಸುರಿಮಳೆ ಸುರಿಸಾಗಿದೆ. “ಆಹಾ, ಜಗತ್ತಿನ ಗಂಡಸರೆಲ್ಲ ಬದಲಾಗಿದ್ದಾರೆ’ ಎಂಬ ಭಾವನೆ ಬಹುತೇಕ ಮಹಿಳೆಯರಲ್ಲಿ ಮೂಡಿರಬಹುದು. ತಡೆಯಿರಿ, ವಾಸ್ತವದಲ್ಲಿ ಹೆಚ್ಚೇನೂ ಬದಲಾಗಿಲ್ಲ ಅಂತಿವೆ ಕೆಲವು ಸಮೀಕ್ಷೆಗಳು. 2020ರ ಇಸವಿಯಲ್ಲೂ, ಹೆಣ್ಣು ಎಲ್ಲ ವಿಧದಲ್ಲೂ ಗಂಡಿಗೆ ಸಮಾನಳು ಎಂಬ ಸಂಗತಿಯನ್ನು ಬಹುತೇಕರು ಒಪ್ಪಿಕೊಳ್ಳಲು ತಯಾರಿಲ್ಲ. ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆ ಬಿಡುಗಡೆ ಮಾಡಿರುವ, “ಲಿಂಗ ಸಾಮಾಜಿಕ ನಿಯಮಗಳ ಸೂಚ್ಯಂಕ’ದಲ್ಲೂ ಈ ಮಾತು ರುಜುವಾತಾಗಿದೆ. ವಿಶ್ವಾದ್ಯಂತ ಶೇ. 90ರಷ್ಟು ಜನ (ಪುರುಷರಷ್ಟೇ ಅಲ್ಲ, ಮಹಿಳೆಯರೂ ಸೇರಿ) ಮಹಿಳೆಯರ ವಿರುದ್ಧ ಒಂದು ಬಗೆಯ ಪಕ್ಷಪಾತವನ್ನು ಹೊಂದಿ¨ªಾರಂತೆ. ಶೇ. 50ರಷ್ಟು ಜನರು, ಮಹಿಳೆಯರಿಗಿಂತ ಪುರುಷರೇ ಉತ್ತಮ ರಾಜಕೀಯ ನಾಯಕರಾಗಬಲ್ಲರು ಅಂತ ಭಾವಿಸಿದ್ದರೆ, ಶೇ.40ಕ್ಕೂ ಹೆಚ್ಚು ಜನರು, ಗಂಡಸರೇ ಉದ್ಯಮ ಕ್ಷೇತ್ರದಲ್ಲಿ ಮೇಲಧಿಕಾರಿಗಳಾಗಲು ಯೋಗ್ಯರು ಅಂತ ನಂಬಿದ್ದಾರೆ. ಉದ್ಯೋಗ ಪಡೆಯಲು ಹೆಂಗಸರಿಗಿಂತ ತಮಗೇ ಜಾಸ್ತಿ ಹಕ್ಕು ಇದೆ ಅಂತ ಶೇ.50ಕ್ಕಿಂತ ಹೆಚ್ಚು ಗಂಡಸರು ಉತ್ತರಿಸಿದ್ದಾರಂತೆ! ಜಿಂಬಾಬ್ವೆಯಲ್ಲಿ ಶೇ. 96ಕ್ಕಿಂತ ಹೆಚ್ಚು ಮಂದಿ, ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿರುವುದನ್ನು ಸಮರ್ಥಿಸಿದ್ದಾರಂತೆ. ಈಗ ಹೇಳಿ, ಲಿಂಗ ಸಮಾನತೆಯೇ ಇಲ್ಲವೆಂದ ಮೇಲೆ “ಮಹಿಳಾ ದಿನಾಚರಣೆ’ ಎಂಬ ಒಂದು ದಿನದ ಸಂಭ್ರಮಕ್ಕೆ ಅರ್ಥ ಇದೆಯೇ?

Advertisement
Advertisement

Udayavani is now on Telegram. Click here to join our channel and stay updated with the latest news.

Next