Advertisement
– ಹೀಗೆ ಹೇಳಿ ಸುದೀಪ್ ಪಕ್ಕದಲ್ಲಿದ್ದ ನಿರ್ದೇಶಕ ಕೃಷ್ಣ ಅವರ ಮುಖ ನೋಡಿದರು. ಸುದೀಪ್ ಹೀಗೆ ಹೇಳಲು ಕಾರಣ “ಪೈಲ್ವಾನ್’ ಚಿತ್ರ ಮತ್ತು ಅದಕ್ಕಾಗಿ ಅವರು ಮಾಡಿಕೊಂಡಿರುವ ತಯಾರಿ. ಜಿಮ್‌ನಿಂದ ದೂರವೇ ಉಳಿದಿದ್ದ ಸುದೀಪ್, ಈ ಸಿನಿಮಾಕ್ಕಾಗಿ ವರ್ಕೌಟ್ ಮಾಡಿ ತೂಕ ಇಳಿಸುವ ಜೊತೆಗೆ ಸಖತ್ ಫಿಟ್ ಆದರು. ಅಷ್ಟೇ ಅಲ್ಲ, ಚಿತ್ರದ ಕುಸ್ತಿ, ಬಾಕ್ಸಿಂಗ್ ಚಿತ್ರೀಕರಣ ವೇಳೆ ಸಾಕಷ್ಟು ನೋವು ಕೂಡಾ ಅನುಭವಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿಯೆ ಸುದೀಪ್ ನಗುತ್ತಲೇ, “ಇದೊಂದು ಬಾರಿ ಕುಸ್ತಿ ಮೂಲವಾಗಿರುವ ಚಿತ್ರದಲ್ಲಿ ನಟಿಸಿದ್ದೇನೆ ಅಷ್ಟೇ. ಮುಂದೆ ಕುಸ್ತಿ ಹಿನ್ನೆಲೆಯಲ್ಲಿ ನಟಿಸುವುದಿಲ್ಲ’ ಎನ್ನುತ್ತಲೇ “ಪೈಲ್ವಾನ್’ ಸಿನಿಮಾದ ಬಗ್ಗೆ ಹೇಳುತ್ತಾ ಹೋದರು. ಸುದೀಪ್ ಅವರಿಗೆ “ಪೈಲ್ವಾನ್’ ತುಂಬಾ ಸ್ಪೆಷಲ್ ಸಿನಿಮಾ. ಅದಕ್ಕೆ ಹಲವು ಕಾರಣಗಳಿವೆ. ಮುಖ್ಯವಾಗಿ ಹೆಚ್ಚು ಶ್ರಮ ಬೇಡಿದ ಸಿನಿಮಾ. ಜೊತೆಗೆ ಸುದೀಪ್ ಅವರ ಲೈಫ್ಸ್ಟೈಲ್ ಬದಲಿಸಿದ ಸಿನಿಮಾ.
ಹೇಳಿಕೇಳಿ “ಪೈಲ್ವಾನ್’ ಕುಸ್ತಿ ಹಿನ್ನೆಲೆಯ ಸಿನಿಮಾ. ಪಾತ್ರಕ್ಕಾಗಿ ಅಂಗಿ ಬಿಚ್ಚಿ, ಕುಸ್ತಿಪಟುವಾಗಿ ನಿಲ್ಲಬೇಕಾದ ಅನಿವಾರ್ಯತೆ ಸುದೀಪ್ ಅವರದು. ಇಷ್ಟು ವರ್ಷದ ತಮ್ಮ ಸಿನಿ ಕೆರಿಯರ್‌ನಲ್ಲಿ ಸುದೀಪ್ ಮೈ ತುಂಬಾ ಬಟ್ಟೆ ಹಾಕಿಕೊಂಡು ಸ್ಟೈಲಿಶ್ ಆಗಿ ಕಾಣಿಸಿಕೊಂಡವರು. ಆದರೆ, “ಪೈಲ್ವಾನ್’ನಲ್ಲಿ ಕಡಿಮೆ ಬಟ್ಟೆಯಲ್ಲಿ ಕಾಣಿಸಿಕೊಳ್ಳಬೇಕೆಂದಾಗ ಆರಂಭದಲ್ಲಿ ತುಂಬಾ ಮುಜುಗರವಾಯಿತಂತೆ.
Related Articles
Advertisement
ಇನ್ನು, ಸುದೀಪ್ ಅವರಿಗೆ ಈ ಸಿನಿಮಾ ಮಾಡುವಾಗ ಆರಂಭದಲ್ಲಿ ಸಾಕಷ್ಟು ಮೂಡ್‌ಸ್ವಿಂಗ್ ಆಗುತ್ತಿತ್ತಂತೆ. ಸಣ್ಣ ಸಣ್ಣ ವಿಚಾರಗಳಿಗೂ ಇರಿಟೇಟ್ ಆಗುತ್ತಿದ್ದರಂತೆ. ಅದಕ್ಕೆ ಕಾರಣ, ಏಕಾಏಕಿ ಬದಲಾದ ಅವರ ಲೈಫ್ ಸ್ಟೈಲ್. ಆದರೆ, ಈಗ ಅದು ಹೊಸ ಲೈಫ್ಸ್ಟೈಲ್ ಅನ್ನು ಕೊಟ್ಟ ಖುಷಿಯೂ ಅವರಿಗಿದೆ. ಇನ್ನು ಚಿತ್ರದಲ್ಲಿ ನಟಿಸಿದ ಸುನೀಲ್ ಶೆಟ್ಟಿ, ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಅವರ ಸಹಕಾರವನ್ನು ಸುದೀಪ್ ನೆನೆಯುತ್ತಾರೆ. ಜೊತೆಗೆ ನಿರ್ದೇಶಕ ಕೃಷ್ಣ ಆವರ ಪ್ಲ್ರಾನಿಂಗ್, ದೊಡ್ಡ ಆಲೋಚನೆಗಳನ್ನು ಕೊಂಡಾಡಿದರು.
ಸಿನಿಮಾದ ವಕೌìಟ್ ಬಗ್ಗೆ ಮಾತನಾಡುವ ಸುದೀಪ್, “ನಾನು ಈ ಸಿನಿಮಾಕ್ಕಾಗಿ ಸಾಕಷ್ಟು ವಕೌìಟ್ ಮಾಡಿದ್ದೇನೆ ನಿಜ. ಆದರೆ, ನಾನೇ ಏನೇ ವಕೌìಟ್ ಮಾಡಲಿ ಅಥವಾ ಸಿಕ್ಸ್‌ಪ್ಯಾಕ್‌ನಲ್ಲಿ ಕಾಣಿಸಿಕೊಂಡರೂ ಮೂಲಕಥೆಯೇ ನಿಮಗೆ ಕನ್ವಿನ್ಸ್ ಆಗದಿದ್ದರೆ ಬೇರೆಲ್ಲವೂ ವ್ಯರ್ಥವಾಗುತ್ತದೆ. ಯಾವುದೇ ಸಿನಿಮಾವಾದರೂ ಕಥೆ ಜನರನ್ನು ಕನ್ವಿನ್ಸ್ ಮಾಡಬೇಕು. ಆಗ ಮಿಕ್ಕಿದ್ದೆಲ್ಲವೂ ಚೆನ್ನಾಗಿ ಕಾಣುತ್ತದೆ’ ಎನ್ನುವುದು ಸುದೀಪ್ ಮಾತು.
ನಿರ್ದೇಶಕ ಕೃಷ್ಣ ಹಾಗೂ ನಿರ್ಮಾಪಕಿ ಸ್ವಪ್ನ ಕೃಷ್ಣ ಈ ಸಿನಿಮಾ ಆರಂಭವಾದ ಬಗ್ಗೆ, ಸುದೀಪ್ ನೀಡಿದ ಸಹಕಾರದ ಬಗ್ಗೆ ಮಾತನಾಡಿದರು. ಇಷ್ಟೊಂದು ದೊಡ್ಡ ಮಟ್ಟದ ಸಿನಿಮಾವನ್ನು ಮಾಡುತ್ತೇವೆಂದು ಕನಸಲ್ಲೂ ಅಂದುಕೊಂಡಿರಲಿಲ್ಲ. ಆದರೆ, ಇವತ್ತು ಅದು ಸಾಧ್ಯವಾಗಿದ್ದು, ಸುದೀಪ್ ಅವರಿಂದ. ಅವರನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ ಎಂಬುದು ಸ್ವಪ್ನ ಹಾಗೂ ಕೃಷ್ಣ ಅವರ ಮಾತು. ಚಿತ್ರದ ಆಡಿಯೋ ರೈಟ್ಸ್ ಅನ್ನು ಲಹರಿ ಸಂಸ್ಥೆ ಪಡೆದುಕೊಂಡಿದೆ. ಚಿತ್ರ ಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿದ್ದು, ಕನ್ನಡದಲ್ಲಿ ಕೆಆರ್‌ಜಿ ಸ್ಟುಡಿಯೋ, ಹಿಂದಿಯಲ್ಲಿ ಝಿ ಸ್ಟುಡಿಯೋಸ್ ಹಾಗೂ ತೆಲುಗಿನಲ್ಲಿ ವರಾಹಿ ಫಿಲಂಸ್ ಬಿಡುಗಡೆ ಮಾಡುತ್ತಿದೆ. ಈ ಮೂವರು ಕೂಡಾ “ಪೈಲ್ವಾನ್’ ಬಗ್ಗೆ ಖುಷಿ ಹಂಚಿಕೊಂಡರು. ಎಲ್ಲವೂ ಅಂದುಕೊಂಡಂತೆ ಆದರೆ, ಚಿತ್ರ ಆಗಸ್ಟ್ 29ಕ್ಕೆ ಬಿಡುಗಡೆಯಾಗಲಿದೆ. ಜುಲೈ 27 ರಂದು ಚಿತ್ರದುರ್ಗದಲ್ಲಿ ಆಡಿಯೋ ಬಿಡುಗಡೆ ಸಮಾರಂಭ ನಡೆಯಲಿದೆ.
ರವಿಪ್ರಕಾಶ್ ರೈ