Advertisement

ಜಗತ್ತು ಬೆಳಗಿಸಬಹುದು ನಮ್ಮ ದೇಹಶಾಖ

10:02 AM Jan 06, 2020 | mahesh |

ಬೆಂಗಳೂರು: ಸೂರ್ಯ ರಶ್ಮಿ , ಗಾಳಿಯ ವೇಗದಿಂದ ವಿದ್ಯುತ್‌ ಉತ್ಪಾದಿಸುವಂತೆ ನಮ್ಮ ದೇಹದ ಶಾಖದಿಂದಲೂ ಯಾಕೆ ವಿದ್ಯುತ್‌ ಉತ್ಪಾದನೆ ಮಾಡಬಾರದು-ಈ ನಿಟ್ಟಿನಲ್ಲಿ ಸಂಶೋಧನೆಗೆ ಮುಂಬಯಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮುಂದಾಗಿದೆ.

Advertisement

ಮಳೆ ನೀರು ಕೊಯ್ಲು ಅಥವಾ ಸೂರ್ಯನ ಕಿರಣಗಳಿಂದ ಉಂಟಾಗುವ ಶಾಖವನ್ನು ವಿದ್ಯುತ್‌ ಆಗಿ ಪರಿವರ್ತಿಸುವಂತೆಯೇ ಮನು ಷ್ಯ ದೇಹದಿಂದಲೂ ಶಾಖ ಹೊರ ಹೊಮ್ಮುತ್ತದೆ. ಅದನ್ನು ವಿದ್ಯುತ್‌ ಆಗಿ ಪರಿವರ್ತಿಸಲು ಸಾಧ್ಯವಿದ್ದು, ಈ ಸಂಬಂಧ ಸಂಶೋಧನೆಯಲ್ಲಿ ಮುಂಬಯಿ ಐಐಟಿ ಸಕ್ರಿಯವಾಗಿದೆ. ಥರ್ಮೋ ಎಲೆಕ್ಟ್ರಿಕ್‌ ಡಿವೈಸ್‌ನಿಂದ ಶಾಖವನ್ನು ವೋಲ್ಟೆಜ್‌ಗೆ ಪರಿವರ್ತಿಸಿ, ಎಲೆಕ್ಟ್ರಿಕ್‌ ಉಪಕರಣ ಚಾರ್ಜಿಂಗ್‌ ಸಾಧ್ಯತೆಗಳ ಕುರಿತು ಸಂಶೋಧನೆ ನಡೆಸುತ್ತಿದೆ.

ಥರ್ಮೋ ಎಲೆಕ್ಟ್ರಿಕ್‌ ಡಿವೈಸ್‌ನಿಂದ ಉತ್ಪಾದನೆಯಾಗುವ ವಿದ್ಯುತ್‌ನ್ನು ಸಂಗ್ರ ಹಿಸುವ ವ್ಯವಸ್ಥೆ ಇಲ್ಲದಿರುವುದು ಇದುವರೆಗೆ ಇದ್ದ ಅಡ್ಡಿಯಾಗಿತ್ತು. ಆದರೆ ಈಗ ಆ ತಂತ್ರಜ್ಞಾನವನ್ನು ನಾವು ಅಭಿವೃದ್ಧಿಪಡಿಸಿದ್ದೇವೆ, ಇದರ ಬೆನ್ನಲ್ಲೇ ಮನುಷ್ಯನ ದೇಹ ಶಾಖದಿಂದ ವಿದ್ಯುತ್‌ ಉತ್ಪಾದಿಸುವ ಸಂಶೋಧನೆ ನಡೆಯು ತ್ತಿದೆ. ಇದು ಸಾಕಾರಗೊಂಡರೆ ಇಂಧನ ಕ್ಷೇತ್ರ ದಲ್ಲಿ ಹೊಸ ಶಕೆ ಆರಂಭವಾಗಲಿದೆ ಎಂದು ಮುಂಬಯಿ ಐಐಟಿಯ ರಸಾಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಸಿ. ಸುಬ್ರಮಣಿಯಂ “ಉದಯವಾಣಿ’ಗೆ ತಿಳಿಸಿದ್ದಾರೆ.

ಎಲ್‌ಇಡಿ ದೀಪವನ್ನೂ ಉರಿಸಬಹುದು!
ದೇಶದಲ್ಲಿ ಈ ರೀತಿಯ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದು ಇದೇ ಮೊದಲು ಎಂದು ಸಂಶೋಧಕ ಸುಬ್ರಮಣಿಯಂ ಮಾಹಿತಿ ನೀಡಿದ್ದಾರೆ. ಇದರ ಮುಂದುವರಿದ ಭಾಗ ನಮ್ಮ ದೇಹ ಶಾಖದಿಂದ ವಿದ್ಯುತ್‌ ಉತ್ಪಾದನೆ ಮಾಡುವುದು. ದೇಹದ ಮೇಲಿನ ಒತ್ತಡದ ಪರಿಣಾಮ ಶಾಖ ಉಂಟಾಗುತ್ತದೆ. ಅದನ್ನು ಥರ್ಮೋಎಲೆಕ್ಟ್ರಿಕ್‌ ಡಿವೈಸ್‌ನಿಂದ ವೋಲ್ಟೆಜ್‌ ಆಗಿ ಪರಿವರ್ತಿಸಬಹುದು. ಅದರಿಂದ ಎಲೆಕ್ಟ್ರಿಕ್‌ ಉಪಕರಣಗಳನ್ನು ಚಾರ್ಜ್‌ ಮಾಡಬಹುದಾಗಿದೆ ಎಂದು ಅವರು ವಿವರಿಸಿದ್ದಾರೆ.

ವಿಜ್ಞಾನ ಲೋಕಕ್ಕೆ ಹೊಸದಲ್ಲ
ಈ ಆಲೋಚನೆ ವಿಜ್ಞಾನ ಲೋಕಕ್ಕೆ ಹೊಸದಲ್ಲ. ದೇಹದ ಶಾಖದಿಂದ ಕೆಲವು ಮಿಲಿವ್ಯಾಟ್‌ಗಳಷ್ಟು ವಿದ್ಯುತ್‌ ಉತ್ಪಾದನೆ ಮಾಡಬಹುದಾಗಿದೆ. ಸದ್ಯದ ಮಟ್ಟಿಗೆ ಆ ವಿದ್ಯುತ್ತನ್ನೂ ಪಡೆಯುವುದು ಕಷ್ಟ. ಯಾಕೆಂದರೆ, ಅದನ್ನು ಸಂಗ್ರಹಿಸಿಡುವ ವ್ಯವಸ್ಥೆಯೇ ಇಲ್ಲ.

Advertisement

- ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next