Advertisement

ಕೆಲಸದ ಅವಧಿ ದಿನಕ್ಕೆ 10 ತಾಸು

01:33 AM May 23, 2020 | Sriram |

ಬೆಂಗಳೂರು: ಕೈಗಾರಿಕೆ ಮತ್ತು ಕಾರ್ಖಾನೆಗಳಲ್ಲಿ ಕೆಲಸದ ಅವಧಿಯನ್ನು ನಿತ್ಯ 10 ತಾಸಿಗೆ ಹೆಚ್ಚಿಸಿ ಕಾರ್ಮಿಕ ಇಲಾಖೆ ಆದೇಶ ಹೊರಡಿ ಸಿದೆ. ಮೇ 22ರಿಂದ ಆಗಸ್ಟ್‌ 21ರ ವರೆಗೆ ಇದು ಜಾರಿಯಲ್ಲಿರುತ್ತದೆ.

Advertisement

ದಿನಕ್ಕೆ ಹತ್ತು ತಾಸು, ವಾರಕ್ಕೆ 60 ತಾಸು ಗಳಂತೆ ಕೆಲಸದ ಅವಧಿ ಹೆಚ್ಚಿಸ ಲಾಗಿದ್ದು, ಹೆಚ್ಚುವರಿ ಕೆಲಸದ ಅವಧಿಯ ವೇತನ ಪಾವತಿ ಯಥಾ ಸ್ಥಿತಿ ಮುಂದು ವರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕಾರ್ಮಿಕ ಇಲಾಖೆ ವ್ಯಾಪ್ತಿಯ ಫ್ಯಾಕ್ಟರಿ ಕಾಯ್ದೆ 1948ರಡಿ ನೋಂದಣಿಯಾಗಿರುವ ಎಲ್ಲ ಕಾರ್ಖಾನೆ, ಕೈಗಾರಿಕೆಗಳಿಗೆ ಇದು ಅನ್ವಯ ವಾಗಲಿದೆ.

ಕೋವಿಡ್-19 ಹಿನ್ನೆಲೆಯಲ್ಲಿ ಕೆಲಸದ ಅವಧಿ ಹೆಚ್ಚಿಸಬೇಕು ಎಂಬ ಕೈಗಾರಿಕೆ ಮತ್ತು ಉದ್ಯಮಿಗಳ ಬೇಡಿಕೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. 12 ತಾಸುಗಳಿಗೆ ಏರಿಸಬೇಕು ಎಂಬ ಬೇಡಿಕೆ ಇತ್ತಾದರೂ ಸದ್ಯಕ್ಕೆ 10 ತಾಸುಗಳಿಗೆ ಏರಿಸಲಾಗಿದೆ. ಈ ಕುರಿತ ಕಾಯ್ದೆ ಸಂಪುಟದ ಮುಂದೆ ಬರಲಿದ್ದು, ಅಧ್ಯಾದೇಶದ ಮೂಲಕ ಜಾರಿ ಚಿಂತನೆಯೂ ಇದೆ ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next