ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರು ನಗರದಲ್ಲಿ ಕೆಲವೊಂದು ಅಭಿವೃದ್ಧಿ ಕಾಮಗಾರಿಗಳು ವೇಗವಾಗಿ ನಡೆಯುತ್ತಿದ್ದರೆ, ಇನ್ನು ಕೆಲವು ಮಂದಗತಿಯಲ್ಲಿದೆ. ಅಲ್ಲದೇ ಮತ್ತೆ ಕೆಲವು ಕಾಮಗಾರಿಗಳು ಅರ್ಧದಲ್ಲೇ ನಿಂತಿದೆ. ಈ ಬಗ್ಗೆ ಉದಯವಾಣಿ ಸುದಿನ ಆಗಾಗ ವರದಿ ಪ್ರಕಟಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ.
ಯಾವುದೇ ಕಾಮಗಾರಿ ನಡೆಸುವ ವೇಳೆ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಎದುರಾಗುವುದು ಸಹಜ. ಆದರೆ ಇದನ್ನು ತತ್‌ಕ್ಷಣ ಪರಿಹರಿಸಬೇಕಿದೆ. ವಿಳಂಬ ಮಾಡಿದರೆ ಅದು ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗಬಹುದು.
ಇನ್ನೇನು ಕೆಲವೇ ವಾರಗಳಲ್ಲಿ ಮಳೆಗಾಲ ಆರಂಭವಾಗುವ ಸೂಚನೆ ದೊರತಿದೆ. ಆದರೆ ಅರ್ಧಬಂರ್ಧ ಕಾಮಗಾರಿಗಳು ನಗರದ ಸಮಸ್ಯೆಯನ್ನು ಮತ್ತಷ್ಟು ಬಿಗಾಡಿಯಿಸಿಬಿಡಬಹುದು. ಮುಖ್ಯವಾಗಿ ಚರಂಡಿ, ರಸ್ತೆ ಕಾಮಗಾರಿಗಳು ಶೀಘ್ರದಲ್ಲೇ ಕೊನೆಗೊಳ್ಳಬೇಕಿದೆ.
ಕೆಲವು ವರ್ಷಗಳಿಂದ ನಡೆಯುತ್ತಿರುವ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ನಿಧಾನವಾಗಿ ನಡೆಯುತ್ತಿದ್ದು ಹಲವಾರು ಸಮಸ್ಯೆಗಳಿಗೆ ಕಾರಣವಾಗಿತ್ತಿದೆ ಮಾತ್ರವಲ್ಲದೇ ಸುಗಮ ಸಂಚಾರಕ್ಕೂ ಅಡ್ಡಿಯಾಗುತ್ತಿದೆ. ಕಳೆದ ಬಾರಿ ಇದರಿಂದಾಗಿ ಮಳೆಯ ಅವಾಂತರವೇ ಸೃಷ್ಟಿಯಾಗಿತ್ತು. ಈ ಬಾರಿ ಮತ್ತೆ ಸಮಸ್ಯೆ ಕಾಣಿಸಿಕೊಳ್ಳದಂತೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಿದೆ.
-ಗೀತಾ, ಮಂಗಳೂರು