ಹುಣಸೂರು: ಕವಿತೆಯು ಆಯಾ ಕಾಲದ ಮನೋಧರ್ಮಗಳ ದರ್ಪಣವಾಗಬೇಕು, ಕವಿ ಆತ್ಮಸಾಕ್ಷಿ ಕಾಪಿಟ್ಟುಕೊಳ್ಳುವಲ್ಲಿ ಸದಾ ಜಾಗೃತನಾಗಬೇಕೆಂದು ಕವಿ, ಚಿಂತಕ ಬಂಜಗೆರೆ ಜಯಪ್ರಕಾಶ್ ಆಶಿಸಿದರು.
ನಗರದ ರೋಟರಿ ಭವನದಲ್ಲಿ ಕಸಾಪ, ರೋಟರಿ ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ್ದ ಕವಿ, ಶಿಕ್ಷಕ ಜೆ. ಮಹದೇವ್ ಕಲ್ಕುಣಿಕೆರವರ ದಾರಿ ಮತ್ತು ಏಕಾಂತ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಕೃತಿ ಪರಿಚಯಿಸಿ ಮಾತನಾಡಿ, ಮನುಷ್ಯ ಸಂವೇದನೆಯು ಜೀವನಾನುಭವಗಳೊಂದಿಗೆ ಮಿಳಿತವಾದಾಗ ಕವಿತೆ ಎಂಬುದು ಜೀವನಸಖ್ಯವನ್ನು ಗಟ್ಟಿಗೊಳಿಸುವ ಮಹತ್ತಾÌಕಾಂಕ್ಷೆಯ ಪ್ರತೀಕವಾಗುತ್ತದೆ ಎಂದರು.
ಮಹದೇವ್ ಕಲ್ಕುಣಿಕೆರವರ ಕವಿತೆಗಳು ವರ್ತಮಾನದ ಸಂಗತಿಗಳಿಗೆ ಮುಖಾಮುಖೀಯಾಗಿ ಅವುಗಳ ಆತ್ಮ ಶೋಧಿಸುವ ಹಾದಿಯಲ್ಲಿ ಸಫಲವಾಗಿವೆ, ಇಲ್ಲಿನ ಕವಿತೆಗಳು ವಾಸ್ತವದ ಜ್ವಲಂತ ಸಮಸ್ಯೆಗಳನ್ನು ಅಥೆìಸುತ್ತಲೇ ಅವುಗಳ ನೆಲೆಯನ್ನು ಹುಡುಕಲು ಪ್ರಯತ್ನಿಸುತ್ತವೆ ಎಂದು ವ್ಯಾಖ್ಯಾನಿಸಿದರು.
ಕೃತಿಕಾರ ಜೆ. ಮಹದೇವ್ ಕಲ್ಕುಣಿಕೆ ಮಾತನಾಡಿ ಪ್ರಸ್ತುತ ಕತಿ ರಚನೆಯ ಹಿಂದಿನ ಮನೋನೆಲೆಗಳು ಹಾಗೂ ಅವು ತನ್ನೊಳಗೆ ನೆಡೆಸಿದ ಅಂತರ್ ಕ್ರಿಯೆಗಳ ಬಗ್ಗೆ ವಿಷದೀಕರಿಸಿದರು. ತಾಲೂಕು ಕಸಾಪ ಅಧ್ಯಕ್ಷ ನವೀನ್‌ರೆ ಆಡಿದ ಪ್ರಾಸ್ತವಿಕ ಮಾತುಗಳಳನ್ನಾಡಿದರು.
ಕೃತಿ ಬಿಡುಗಡೆ ಮಾಡಿದ ರೋಟರಿ ಜಿಲ್ಲಾ ನಿಯೋಜಿತ ಅಸಿಸ್ಟೆಂಟ್ ಗವರ್ನರ್ ಧರ್ಮಾಪುರ ನಾರಾಯಣ್, ಉಧಾ^ಟಿಸಿದ ಉದ್ಯಮಿ ಎಚ್.ಪಿ.ಅಮರ್‌ನಾಥ್, ನಗರಸಭೆ ಅಧ್ಯಕ್ಷ ಎಂ.ಶಿವಕುಮಾರ್, ರೊ.ಅನಂತರಾಜೇ ಅರಸ್ ಮಾತನಾಡಿದರು. ಕೆ.ಎಸ್.ರೇಣುಕಾಪ್ರಸಾದ್, ಕುಮಾರ್.ಎಚ್.ಸಿ. ಸುನೀಲ್‌ಕುಮಾರ್, ಕುಮಾರ್, ಮಹೇಶ್‌ಚಿಲ್ಕುಂದ, ನಾಗರಾಜು ಹಾಗೂ ಮಾದುಪ್ರಸಾದ್ ಇತರರು ಇದ್ದರು.