Advertisement

Malpe Beach ಜೀವರಕ್ಷಕರ ಮಾತಿಗೆ ಇಲ್ಲಿ ಬೆಲೆಯೇ ಇಲ್ಲ!

12:05 AM Jun 10, 2024 | Team Udayavani |

ಮಲ್ಪೆ: ದಿನವಿಡೀ ಮಳೆಯಿತ್ತಿದ್ದರೂ ವಾರಾಂತ್ಯದ ಹಿನ್ನೆಲೆಯಲ್ಲಿ ರವಿವಾರ ಮಲ್ಪೆ ಬೀಚ್‌ಗೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು.

Advertisement

ಮಳೆಗಾಲದ ಹಿನ್ನೆಲೆಯಲ್ಲಿ ಕಡಲಿಗಿಳಿಯಲು ಸಂಬಂಧಪಟ್ಟ ಆಡಳಿತ ನಿರ್ಬಂಧ ಹೇರಿದೆ. ಬೀಚ್‌ನಲ್ಲಿ ಪ್ರವಾಸಿಗರು ಕಡಲಿಗೆ ಇಳಿಯದಂತೆ ನೆಟ್‌ ಆಳವಡಿಸಲಾಗಿದೆ. ಅಲ್ಲಲ್ಲಿ ಅಪಾಯದ ಸೂಚನೆ ಫಲಕವನ್ನೂ ಅಳವಡಿಸಲಾಗಿದೆ.

ಆದರೆ ಕೆಲವರು ಇಲ್ಲಿನ ಜೀವರಕ್ಷಕ ಸಿಬಂದಿಯ ಕಣ್ಣು ತಪ್ಪಿಸಿ ದಕ್ಷಿಣ ದಿಕ್ಕಿನಲ್ಲಿ ನೀರಿಗಿಳಿಯುತ್ತಿರುವುದು ಕಂಡು ಬಂದಿದೆ. ಅವರನ್ನು ನಿಯಂತ್ರಿಸಲು ಜೀವರಕ್ಷಕ ಸಿಬಂದಿ ಹರಸಾಹಸ ಮಾಡುತ್ತಿದ್ದಾರೆ.

ಸೀವಾಕ್‌ ಬಳಿ ಸಮುದ್ರಕ್ಕಿಳಿದರು
ಬೀಚ್‌ನಲ್ಲಿ ನೀರಿಗಿಳಿಯಲು ನಿರ್ಬಂಧ ಹೇರಿರುವುದನ್ನು ಕಂಡು ಇತ್ತ ಸೀ ವಾಕ್‌ ವೇ ಬಳಿ, ಅಪಾಯಕಾರಿ ಸ್ಥಳದಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿದು ಮೋಜು ಮಸ್ತಿಯಲ್ಲಿ ತೊಡಗಿರುವುದು ಕಂಡು ಬಂತು. ಇಲ್ಲಿ ಪೊಲೀಸ್‌ ಸಿಬಂದಿಯನ್ನು ನಿಯೋಜಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next