ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಹಣಮಸಾಗರದ ಡಾ|ರಾಜಶೇಖರ ಚಿರಚನಕಲ್ಲ ಮಾತನಾಡಿ, ಹಿಂದಿನ ಕಾಲದಲ್ಲಿ ಶರಣರು ಮುಟ್ಟಿದರೆ ಲಿಂಗವೆಂಬ ಗೊಂಚಲಗಳು ಕಾಣುತ್ತಿದ್ದವು. ಮಾನವ ಅಂಗವಿಕಾರಗಳನ್ನು ಅಳೆದುಕೊಂಡಿದ್ದಾನೆ. ಕಾರಣ ಮಾನವ ನಿರ್ವಚನವಾಗಬೇಕು ಅಂದರೆ ಮಹಾಮನಿಯಾಗುತ್ತದೆ ಎಂದರು. ಜನ್ಮಾಂತರದಿಂದಲೂ ಅನೇಕ ವಿಷಯಗಳು ಮಾನವನಲ್ಲಿ ತುಂಬಿಕೊಂಡಿವೆ. ಜ್ಞಾನವೆಂಬ ವಚನಗಳನ್ನು ಅಳವಡಿಸಿಕೊಂಡರೆ ಮನವೆಂಬುದು ಅರಳುತ್ತದೆ ಎಂದರು. ಮನುಷ್ಯರಾದ ನಮ್ಮಲ್ಲಿ ಕೈಯಲ್ಲಿ, ಕಣ್ಣಲ್ಲಿ ಹಾಗೂ ಕಿವಿಯಲ್ಲಿ ಇಡೀ ಅಂಗದಲ್ಲಿ ಕೆಲಸ ತುಂಬಿಕೊಂಡರೆ ಹೂವಿನಂತೆ ಮನಸ್ಸು ಅರಳುತ್ತದೆ ಎಂದರು. ಮಾತನಾಡುವಲ್ಲಿ
ಬೆಳಕು ಆಗಬೇಕು. ಮಾತನಾಡಿದಲ್ಲಿ ಹೊಟ್ಟೆತುಂಬುವಂತಾಗಬೇಕು ಎಂದರು. ಶರಣರು ಮಾತನಾಡಿದರೆ ಮನಸ್ಸು ಬಿಚ್ಚಿ ಮಾತನಾಡುತ್ತಿದ್ದರು. ಹೃದಯ ಬಿಚ್ಚಿ ಮಾತನಾಡಬೇಕು ಅಂಗಲಿಂಗದ ನುಡಿಗಳು ಮನವನ್ನು ಅರಳಿಸುವಂತಿರಬೇಕು. ಸತ್ಯವಂತರ ಮಹಾತ್ಮರ ಸಂಘ ಸತ್ಸಂಗ ನಡೆಯುತ್ತಿದುದ್ದನ್ನು ಅರಿತರೆ ಮಾಡಿದ ಪಾಪ ನಾಶವಾಗುತ್ತದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ ಗಡಿಸೋಮನಾಳ ಹಿರೇಮಠದ ಶ್ರೀ ಇಂದುದರ ಸ್ವಾಮೀಜಿ
ಮಾತನಾಡಿ, 17 ದಿನಗಳಲ್ಲಿ ಬಸವಸಮಿತಿಯ ವತಿಯಿಂದ ನಡೆಸಿಕೊಂಡು ಬಂದ ವಚನಶ್ರಾವಣ ಕಾರ್ಯಕ್ರಮವು ಮಹತ್ವದ ಕಾರ್ಯಕ್ರಮವಾಗಿದೆ. ಕಾರ್ಯಕ್ರಮದಲ್ಲಿ ಅನೇಕ ಶರಣರು ಅನುಭಾವಿಗಳು ತಮ್ಮ ವಿಚಾರವನ್ನು ಮಂಡಿಸಿ ಸನ್ಮಾರ್ಗ ತೋರಿಸಿದ್ದಾರೆ ಎಂದರು. ಪ್ರಸಾದ ವ್ಯವಸ್ಥೆ ಮಾಡಿದ ಉಮಾ ಘೀವಾರಿ ಅವರಿಗೆ ಶಾಂತಾಬಾಯಿ ಸರನಾಡಗೌಡ ಅವರು ಗ್ರಂಥ ಸಮರ್ಪಣೆ ಮಾಡಿದರು. ಇದೇ ಸಮಯದಲ್ಲಿ ಸಂಗೀತ ಸೇವೆ ಸಲ್ಲಿಸಿದ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಎ.ಎಸ್. ವಠಾರ ಅವರಿಗೆ ಹಾಗೂ ಶ್ರೀನಿವಾಸ ಬಸಂತಪುರ, ಮಲ್ಲಿಕಾರ್ಜುನ ನಾವಿ ಅವರನ್ನು ಸನ್ಮಾನಿಸಲಾಯಿತು.ದೀಪಕಸಿಂಗ್ ಹಜೇರಿ ಸಂಗೀತ ಸೇವೆ ಸಲ್ಲಿಸಿದರು. ಬಸವ ಸಮಿತಿಯ ಅಧ್ಯಕ್ಷ ಪ್ರಕಾಶ ಕಶೆಟ್ಟಿ,
ಬಸವರಾಜ ಬಾಗೇವಾಡಿ, ಕಾಶಿನಾಥ ಮುರಾಳ, ಮಲ್ಲಿಕಾರ್ಜುನ ಹಿಪ್ಪರಗಿ, ಎಸ್.ಎಸ್. ಅಲೇಗಾವಿ, ಜಿ.ಎಸ್.ಜಂಬಲದಿನ್ನಿ, ಜಿ.ಎಂ.ಘೀವಾರಿ ಉಪಸ್ಥಿತರಿದ್ದರು.
Advertisement