ತೆಕ್ಕಟ್ಟೆ: ಸೌಜನ್ಯದ ಮಾತು ಪರಿಣಾಮಕಾರಿಯಾದರೆ ಪ್ರಪಂಚವನ್ನೇ ಗೆಲ್ಲಬಹುದು. ಒಳ್ಳೆಯ ಭಾಷಣಕಾರನಿಗೆ, ಕಲಾವಿದನಿಗೆ, ಸಮಾಜದಲ್ಲಿ ಗಣ್ಯ ವ್ಯಕ್ತಿಯಂತಾಗಬೇಕಾದರೆ ಮಾತು ಬಹಳ ಮುಖ್ಯ ಎಂದು ಉಪನ್ಯಾಸಕ ಸುಜಯೀಂದ್ರ ಹಂದೆ ಹೇಳಿದರು.
ಇಲ್ಲಿನ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಯಶಸ್ವಿ ಕಲಾವೃಂದ ಮತ್ತು ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ ಇವರ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ರಜಾರಂಗು 2019 ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಮಕ್ಕಳಿಗೆ ಪರಿಣಾಮಕಾರಿ ಅಭಿನಯವನ್ನು ಕಲಿಸಿಕೊಡುತ್ತಾ, ಮಂಕುತಿಮ್ಮನ ಕಗ್ಗವನ್ನೋ, ವಚನವನ್ನೋ ಆಧಾರವಾಗಿಟ್ಟುಕೊಂಡು ಮಾತು ಗಳನ್ನು ಆರಂಭಿಸಿದರೆ ಇತರರ ಭಾಷಣಕ್ಕಿಂತ ಭಿನ್ನವಾಗಿರುವುದಲ್ಲದೇ ಮಾತುಗಳನ್ನಾಡುತ್ತಿರುವ ಸಭೆಯನ್ನು ತನ್ನತ್ತ ಸೆಳೆದುಕೊಂಡಂತಾಗುತ್ತದೆ. ಭಾಷಣದಲ್ಲಿ ಹಾಸ್ಯದ ತುಣುಕುಗಳನ್ನೋ, ನೀತಿ ಕಥೆಗಳನ್ನು ಚೆಂದದ ಶಬ್ಧ ಹೆಣೆದು ಜನರ ಮನ ಮುಟ್ಟುವಂತೆ ನುಡಿದರೆ ಪರಿಣಾಮಕಾರಿಯಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಹೆರಿಯ ಮಾಸ್ಟರ್ ಅತಿಥಿಗಳನ್ನು ಗೌರವಿಸಿದರು.ಅನನ್ಯ ಸ್ವಾಗತಿಸಿ, ವೆಂಕಟೇಶ ವೈದ್ಯ ಸಂಘಟಿಸಿ, ಶಿಬಿರಾರ್ಥಿ ಸಾತ್ಯಕಿ ವರದಿ ವಾಚಿಸಿ, ರಂಗ ಶಿಕ್ಷಕ ರೋಹಿತ್ ಎಸ್. ಬೆ„ಕಾಡಿ ವಂದಿಸಿದರು.