Advertisement

ಪದವು: ಅಪಾಯಕಾರಿ ಸ್ಥಿತಿಯಲ್ಲಿದೆ ಹೆಚ್‌ಟಿ ಲೈನ್‌

07:28 PM Apr 30, 2019 | Team Udayavani |

ಕಾರ್ಕಳ: ಇಲ್ಲಿನ ಪದವು ಬಳಿ ಹೈಟೆನ್ಷನ್‌ ವಿದ್ಯುತ್‌ ತಂತಿ ತೀರಾ ತಗ್ಗಿನಲ್ಲಿದ್ದು ಅಪಾಯಕಾರಿಯಾಗಿದೆ.ಕಾರ್ಕಳ -ಉಡುಪಿ ರಸ್ತೆಯ ನಿಟ್ಟೆ ಗ್ರಾಮ ಗುಂಡ್ಯಡ್ಕ ಪದವು ಎಂಬಲ್ಲಿ ಮುಖ್ಯರಸ್ತೆಗೆ ಅಡ್ಡಲಾಗಿ ಮೋರಿ ಅಳವಡಿಸುವ ಸಂದರ್ಭ ರಸ್ತೆಯನ್ನು ಗುತ್ತಿಗೆದಾರರು ಏರಿಸಿದ್ದರು. ಈ ವೇಳೆ ವಿದ್ಯುತ್‌ ಕಂಬವನ್ನು ಹಾಗೆಯೇ ಬಿಡಲಾಗಿದ್ದು, ಈಗ ಸಮಸ್ಯೆ ಎದುರಾಗಿದೆ.

Advertisement

ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ರಸ್ತೆಯನ್ನು ಏರಿಸಲಾಗಿದ್ದು, ಕಂಬವನ್ನು ಮೇಲೇರಿಸುವ ನಿಟ್ಟಿನಲ್ಲಿ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಗುತ್ತಿಗೆದಾರರು, ಲೋಕೋಪಯೋಗಿ ಇಲಾಖೆ, ಮೆಸ್ಕಾಂ ಇಲಾಖೆಯ ಒಟ್ಟು ನಿರ್ಲಕ್ಷ್ಯ ಇಲ್ಲಿ ಕಂಡು ಬರುತ್ತಿದ್ದು, ಸಂಭಾವ್ಯ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶಾಸಕರ ಊರು
ಇಲ್ಲಿಂದ ಅನತಿ ದೂರದಲ್ಲಿ ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌ ಅವರ ಮನೆಯಿದೆ. ಶಾಸಕರ ಮನೆ ಬಳಿಯೇ ಈ ರೀತಿಯಾದಲ್ಲಿ ಅಧಿಕಾರಿಗಳು ಉಳಿದೆಡೆ ಯಾವ ರೀತಿಯ ಕಾಳಜಿ ವಹಿಸಿಯಾರು? ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಕ್ಷಣವೇ ಕ್ರಮ
ಲೋಕೋಪಯೋಗಿ ಇಲಾಖೆಯವರು ತಮ್ಮ ಗಮನಕ್ಕೆ ತಾರದೇ ರಸ್ತೆಯನ್ನು ಎತ್ತರಿಸಿದ್ದಾರೆ. ಹೀಗಾಗಿ ಸಮಸ್ಯೆ ತಲೆದೋರಿದ್ದು, ವಿದ್ಯುತ್‌ ಕಂಬವನ್ನು ಏರಿಸುವ ನಿಟ್ಟಿನಲ್ಲಿ ಅಥವಾ ಶಿಫ್ಟ್‌ ಮಾಡುವ ನಿಟ್ಟಿನಲ್ಲಿ ಸಂಬಂಧಪಟ್ಟವರಿಗೆ ತಿಳಿಸಿ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು.
-ನಾರಾಯಣ ನಾಯ್ಕ,
ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌, ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next