ತಿ.ನರಸೀಪುರ: ಸಮಾಜದ ಅಭಿವೃದ್ಧಿ ಯಲ್ಲಿ ಪುರುಷನಷ್ಟೆ ಮಹಿಳೆಯ ಪಾತ್ರವೂ ಮುಖ್ಯವಾಗಿದ್ದು, ಇದರಲ್ಲಿ ಯಾವುದೇ ಭಿನ್ನ ಅಭಿಪ್ರಾಯ ಅಗತ್ಯವಿಲ್ಲ ಎಂದು ಕರ್ನಾಟಕ ಪೊಲೀಸ್ ಆಕಾಡೆಮಿಯ ಸಹ ನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿ ಹೇಳಿದರು.
ತಿ.ನರಸೀಪುರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ದೌರ್ಜನ್ಯ ತಡೆ ಸಮಿತಿ ಹಾಗೂ ಯೂತ್ ರೆಡ್ ಕ್ರಾಸ್ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಪುರುಷ ಬಲಯುತ ಎಂತಲೂ ಮಹಿಳೆ ಬಲಹೀನ ಎಂಬ ರೀತಿಯಲ್ಲಿ ಮಾತನಾಡುವುದು ಸೂಕ್ತವಲ್ಲ. ಮಹಿಳೆಯನ್ನು ಒಂದು ವ್ಯಕ್ತಿಯಾಗಿ ನೋಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು.
ಸಮಾನತೆಯ ಹಾದಿಯಲ್ಲಿ ಮಹಿಳೆ ನಡೆಯುತ್ತಿದ್ದರೂ ಅಲ್ಲಲ್ಲಿ ಶೋಷಣೆ ಗಳು ಕಂಡು ಬರುತ್ತಿವೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚು ಪ್ರಜಾnವಂತಿಕೆ, ಶಿಕ್ಷಣ ಪಡೆಯು ವಂತಾಗಬೇಕು ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಗಣಿತಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ ಎಸ್. ರೂಪಾ, ಮಹಿಳೆಯರ ಸ್ಥಾನಮಾನಗಳು, ಸಾಧನೆಗೈದ ಮಹಿಳೆಯರ ಬಗ್ಗೆ ಚರ್ಚಿಸಿ ಅಭಿನಂದಿಸುವುದೇ ಮಹಿಳಾ ಅಂತಾ ರಾಷ್ಟ್ರೀಯ ಮಹಿಳಾ ದಿನಾ ಚರಣೆಯ ಆಶಯವಾಗಿದೆ.
ಇತ್ತೀಚಿಗೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಚಿತ್ರನಟಿ ಭಾವನಾ ಧೈರ್ಯದಿಂದ ದೂರು ನೀಡಿದರು. ಜೀ ವಾಹಿನಿಯ ಸರಿಗಮಪದಲ್ಲಿ ಹಾಡುತ್ತಿರುವ ಸುಹಾನ ಧೈರ್ಯಕ್ಕೆ ಹೆಸರಾಗುತ್ತಿದ್ದಾರೆ. ಮಹಿಳೆಯರು ಧೈರ್ಯದಿಂದ ಮುನ್ನಡೆಯುವ ಪ್ರವೃತ್ತಿ ಅಗತ್ಯವಿದೆ ಎಂದರು. ಕಾಲೇಜಿನ ವತಿಯಿಂದ ದಿ ಪರ್ಲ್ಸ್ ಆಫ್ ಇಂಡಿಯಾ ಎಂಬ ಆಲ್ಬಂ ಅನ್ನು ಡಾ.ಧರಣಿದೇವಿ ಮಾಲಗತ್ತಿ ಬಿಡುಗಡೆ ಮಾಡಿದರು. ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಸ್ಪರ್ಧೆ ಗಳಲ್ಲಿ ವಿಜೇತರಾದ ವಿದ್ಯಾರ್ಥಿನಿ ಯರಿಗೆ ಬಹುಮಾನ ವಿತರಿಸ ಲಾಯಿತು.
ಎಸ್. ರೂಪಾ ಮತ್ತು ತಂಡ ಮಹಿಳೆಯರ ಕುರಿತ ಹಾಗೂ ವಿದ್ಯಾರ್ಥಿಗಳಾದ ಮಮತಾ ಮತ್ತು ತಂಡ ತಾಯಿಯ ಕುರಿತ ಗೀತೆಗಳನ್ನು ಹಾಡಿದರು.ಕಾಲೇಜಿನ ಪ್ರಾಂಶುಪಾಲೆ ಕೆ. ನಾಗರತ್ನಮ್ಮ ಅಧ್ಯಕ್ಷತೆ ವಹಿಸಿ ಮಾತ ನಾಡಿದರು. ಸಹಾಯಕ ಪ್ರಾಧ್ಯಾಪಕ ರಾದ ನಾಸೀರ್ ಆಹ್ಮದ್, ಮಂಜುನಾಥ್, ರಾಜೀವ್ ಪೂರ್ಣಿಮಾ ಸೇರಿದಂತೆ ಅನೇಕರು ಹಾಜರಿದ್ದರು