Advertisement
ಯಲಬುರ್ಗಾ ತಾಲೂಕಿನ ಬೋದೂರು ಗ್ರಾಮದ ನಿವಾಸಿ ಗೀತಾ ಬಾಯಿ (46) ಕಳೆದ ಜೂನ್, ಜುಲೈ ತಿಂಗಳಲ್ಲಿ ಸೋಂಕಿಗೆ ತುತ್ತಾಗಿದ್ದರು.
Related Articles
Advertisement
ಕೋವಿಡ್ ದೃಢಪಟ್ಟ 7ರಿಂದ 10 ದಿನಗಳ ಒಳಗಾಗಿಯೇ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗುತ್ತದೆ. ಆದರೆ, ಈ ಮಹಿಳೆ 158 ದಿನಗಳ ಕಾಲ ಸುದೀರ್ಘ ಸಮಯ ಕೋವಿಡ್‌ಗಾಗಿ ಚಿಕಿತ್ಸೆ ಪಡೆದಿರುವುದು ಅಚ್ಚರಿ ಮೂಡಿಸಿದೆ. ನಾವು ಅನೇಕ ರೋಗಿಗಳನ್ನು ನೋಡಿದ್ದೇವೆ, ಚಿಕಿತ್ಸೆ ನೀಡಿದ್ದೇವೆ. ಆದರೆ ಈ ಮಹಿಳೆ 158 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗಷ್ಟೇ ಗುಣಮುಖರಾಗಿದ್ದಾರೆ. ಇಷ್ಟೊಂದು ಸುದೀರ್ಘ ಅವಧಿಯ ಚಿಕಿತ್ಸೆ ನೀಡಿರುವುದು ರಾಜ್ಯದಲ್ಲಿ ಇದೇ ಮಹಿಳೆಗೆ ಎಂದರೂ ತಪ್ಪಾಗಲಾರದು ಎನ್ನುತ್ತಾರೆ ಜಿಲ್ಲಾಸ್ಪತ್ರೆ ವೈದ್ಯರು.