Advertisement

14 ವರ್ಷ ಬಳಿಕ ಪೋಷಕರ ಮಡಿಲು ಸೇರಿದ ಮಹಿಳೆ

11:10 AM Dec 14, 2021 | Team Udayavani |

ಶಹಾಬಾದ: ನಗರದ ಹಳೆ ಶಹಾಬಾದನಲ್ಲಿ 14 ವರ್ಷದ ಹಿಂದೆ ನಾಪತ್ತೆಯಾದ ಮಹಿಳೆಯೊಬ್ಬಳು ಪತ್ತೆಯಾಗಿ ಪೊಲೀಸರು, ವೀರಶೈವ ಸಮಾಜದ ಅಧ್ಯಕ್ಷ ಸೂರ್ಯಕಾಂತ ಕೋಬಾಳ ಹಾಗೂ ಮುಂಬಯಿನ ಶ್ರದ್ಧಾ ರೇಗುಲೇಷನ್‌ ಫೌಂಡೇಶನ್‌ ಸಿಬ್ಬಂದಿ ಸಮ್ಮುಖದಲ್ಲಿ ಮರಳಿ ಮನೆಗೆ ಸೇರಿದ ಘಟನೆ ಸೋಮವಾರ ನಡೆದಿದೆ.

Advertisement

ಸುಮಾರು 14 ವರ್ಷದ ಹಿಂದೆ ನಗರದ ಹಳೆ ಶಹಾಬಾದ ಸಂಗೀತಾ ದಾನಪ್ಪ ದಾನಪ್ಪಗೋಳ ನಾಪತ್ತೆಯಾಗಿದ್ದಳು. ಅಂದು ಪೊಲೀಸ್‌ ಠಾಣೆಗೆ ದೂರು ಸಲ್ಲಿಸಲಾಗಿತ್ತು. ಎಲ್ಲಾ ಕಡೆ ಹುಡುಕಲಾಗಿತ್ತು. ಆದರೂ ಪತ್ತೆಯಾಗಿರಲಿಲ್ಲ. ಮಾನಸಿಕ ಅಸ್ವಸ್ಥೆಯಾದ ಇವಳನ್ನು ಕಳೆದ 8 ತಿಂಗಳ ಹಿಂದೆ ಮುಂಬಯಿಯಲ್ಲಿ ಅಲೆದಾಡುತ್ತಿರುವುದನ್ನು ಗಮನಿಸಿ, ಪೊಲೀಸರು ಶ್ರದ್ಧಾ ರೇಗುಲೇಷನ್‌ ಫೌಂಡೇಶನ್‌ಗೆ ಒಪ್ಪಿಸಿದ್ದರು. ಶ್ರದ್ಧಾ ರೇಗುಲೇಷನ್‌ ಫೌಂಡೇಶನ್‌ ಮುಖ್ಯಸ್ಥರಾದ ಡಾ| ಭರತ್‌ ವಟವಾಣಿ ಅವರು ಮಾನಸಿಕ ರೋಗಿ ತಜ್ಞರಾಗಿದ್ದು, ಅವಳನ್ನು ಚಿಕಿತ್ಸೆಗೆ ಒಳಪಡಿಸಿದ್ದಾರೆ.

ಸುಮಾರು ಏಳೆಂಟು ತಿಂಗಳಿನಿಂದ ಉಪಚರಿಸಿ ಎಲ್ಲಿಂದ ಬಂದಿರುವೆ ಎಂದು ಕೇಳಿದ್ದಾರೆ. ಅವಳು ಹದಿನಾಲ್ಕು ವರ್ಷದ ಹಿಂದೆ ಮನೆಯಿಂದ ತಿರುಪತಿಗೆ ಬಂದಿದ್ದೇನೆ. ಅಲ್ಲಿ ಮದುವೆಯಾಗಿದ್ದೇನೆ. ಅಲ್ಲದೇ ಒಬ್ಬ 8 ವರ್ಷದ ಗಂಡು ಮಗುವಿದೆ ಎಂದು ಹೇಳಿದ್ದಾಳೆ. ತಕ್ಷಣ ಅವಳನ್ನು ತಿರುಪತಿಗೆ ಕರೆದುಕೊಂಡು ಬಂದಿದ್ದಾರೆ. ಅಲ್ಲದೇ ಅವರ ಸಂಬಂಧಿಸಿದವರ ಬಗ್ಗೆ ವಿಚಾರಿಸಿದರೂ ಪತ್ತೆಯಾಗಿಲ್ಲ. ಮತ್ತೆ ಅವಳ ಬಗ್ಗೆ ವಿಚಾರಿಸಿದಾಗ ನನ್ನ ತವರೂರು ಶಹಾಬಾದ ಎಂದು ಹೇಳಿದ್ದಾಳೆ ಹೊರತು ಎಲ್ಲಿ ಮನೆಯಿದೆ ಎಂದು ಹೇಳದಿರುವುದರಿಂದ ಶಹಾಬಾದ ಪೊಲೀಸ್‌ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.

ಅಲ್ಲಿಯೂ ಸರಿಯಾದ ಮಾಹಿತಿ ತಿಳಿಯದಿರುವುದರಿಂದ ಲಿಂಗಾಯತ ಸಮಾಜದವರಾಗಿದ್ದರಿಂದ ವೀರಶೈವ ಸಮಾಜದ ಅಧ್ಯಕ್ಷ ಸೂರ್ಯಕಾಂತ ಕೋಬಾಳ ಅವರನ್ನು ಕರೆಯಿಸಿ ಇವರ ವಿವರವಾದ ಮಾಹಿತಿ ಕಲೆಹಾಕಿ ತವರು ಮನೆಯವರನ್ನು ಪತ್ತೆ ಹಚ್ಚಿ, ಕುಟುಂಬಸ್ಥರಿಗೆ ಮನವೊಲಿಸಿ ಒಪ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್‌ ಸಿಬ್ಬಂದಿಗಳಾದ ಹುಸೇನ ಪಾಷಾ, ಶಿವರಾಜ, ಪ್ರೇಮಲತಾ, ಶರಣಯ್ಯಸ್ವಾಮಿ (ಎಮ್‌.ಆರ್‌) ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next