Advertisement

ಗೆಲುವಿನ ಖಾತೆ ತೆರೆದ ರಾಜಸ್ಥಾನ್‌

06:07 AM Apr 03, 2019 | mahesh |

ಜೈಪುರ: ಸತತ ಮೂರು ಪಂದ್ಯದಲ್ಲಿ ಸೋತ ರಾಯಲ್‌ ಚಾಲೆಂಜರ್ ಬೆಂಗಳೂರು ಮತ್ತು ರಾಜಸ್ಥಾನ್‌ ರಾಯಲ್ಸ್‌ ನಡುವೆ ಮಂಗಳವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ರಾಜಸ್ಥಾನ ಗೆಲುವಿನ ಖಾತೆ ತೆರೆಯಿತು. ಬೆಂಗಳೂರು ತಂಡ 4 ವಿಕೆಟಿಗೆ 158 ರನ್‌ ದಾಖಲಿಸಿದರೆ ರಾಜಸ್ಥಾನ್‌ ತಂಡವು 19.5 ಓವರ್‌ಗಳಲ್ಲಿ 3 ವಿಕೆಟಿಗೆ 16 ರನ್‌ ಪೇರಿಸಿ ಜಯಭೇರಿ ಬಾರಿಸಿತು.

Advertisement

ಅಲ್ಪಮೊತ್ತದ ಈ ಸೆಣಸಾಟದಲ್ಲಿ ಉತ್ತಮ ಆರಂಭ ಪಡೆದ ರಾಜಸ್ಥಾನ್‌ ತಂಡಕ್ಕೆ ಆರಂಭಿಕರು ಉತ್ತಮ ಆರಂಭ ಒದಗಿಸಿದರು. ರಹಾನೆ ಮತ್ತು ಜೋಸ್‌ ಬಟ್ಲರ್‌ ಮೊದಲ ವಿಕೆಟಿಗೆ 60 ರನ್‌ ಪೇರಿಸಿದರು. ಬಟ್ಲರ್‌ 59 ರನ್‌ ಗಳಿಸಿದರು. ಆಬಳಿಕ ಸ್ಟೀವನ್‌ ಸ್ಮಿತ್‌ ಮತ್ತು ರಾಹುಲ್‌ ತ್ರಿಪಾಠಿ ತಾಳ್ಮೆಯ ಆಟವಾಡಿದ್ದರಿಂದ ತಂಡ ಸುಲಭವಾಗಿ ಜಯ ಸಾಧಿಸಿತು. ಇದು ರಾಜಸ್ಥಾನಕ್ಕೆ ಈ ಐಪಿಎಲ್‌ನಲ್ಲಿ ಒಲಿದ ಮೊದಲ ಗೆಲುವು ಆಗಿದೆ. ಆದರೆ ಆರ್‌ಸಿಬಿಗೆ ಇದು ಸತತ ನಾಲ್ಕನೇ ಸೋಲು ಆಗಿದೆ.

ಈ ಮೊದಲು ಟಾಸ್‌ ಗೆದ್ದ ಅಜಿಂಕ್ಯ ರಹಾನೆ ಆರ್‌ಸಿಬಿಯನ್ನು ಬ್ಯಾಟಿಂಗ್‌ಗೆ ಇಳಿಸಿದರು. ಪ್ರತಿ ಪಂದ್ಯದಲ್ಲೂ ಸ್ಫೋಟಕ ಆರಂಭ ಪಡೆಯಲು ಪರದಾಡುತ್ತಿದ್ದ ಆರ್‌ಸಿಬಿ ಈ ಪಂದ್ಯದಲ್ಲಿ ಉತ್ತಮ ಅಡಿಪಾಯ ಹಾಕಿತು. ಆರಂಭಕಾರರಾಗಿ ಕಣಕ್ಕಿಳಿದ ನಾಯಕ ವಿರಾಟ್‌ ಕೊಹ್ಲಿ, ಪಾರ್ಥಿವ್‌ ಪಟೇಲ್‌ ಬಿರುಸಿನ ಆಟವಾಡಿ ಬೃಹತ್‌ ಮೊತ್ತದ ನಿರೀಕ್ಷೆ ಮೂಡಿಸಿದರು. ಆದರೆ 23 ರನ್‌ ಗಳಿಸಿದ್ದ ಕೊಹ್ಲಿ ಶ್ರೇಯಸ್‌ ಗೋಪಾಲ್‌ಗೆ ವಿಕೆಟ್‌ ಒಪ್ಪಿಸಿ ಬಹುಬೇಗನೇ ನಿರ್ಗಮಿಸಿದರು. ಬಿಗ್‌ ಹಿಟ್ಟರ್‌ಗಳಾದ ಎಬಿಡಿ ವಿಲಿಯರ್, ಹೆಟ್‌ಮೈರ್‌ ಅನುಕ್ರಮವಾಗಿ 13 ಮತ್ತು ಒಂದು ರನ್‌ ಗಳಿಸಿ, ಮತ್ತೆ ವೈಫ‌ಲ್ಯ ಅನುಭವಿಸಿದರು. ಮೊದಲ ವಿಕೆಟ್‌ ಬೀಳುತ್ತಿದ್ದಂತೆ ರನ್‌ ಗಳಿಕೆಯಲ್ಲಿ ಪಾತಾಳಕ್ಕೆ ಇಳಿಯುತ್ತಿದ್ದ ತಂಡವನ್ನು ಮೇಲಕ್ಕೆತ್ತಿದ್ದು ಪಾರ್ಥಿವ್‌ ಪಟೇಲ್‌. ರಾಜಸ್ಥಾನ್‌ ಬೌಲರ್‌ಗಳ ಬೆವರಳಿಸುವಲ್ಲಿ ಯಶಸ್ವಿಯಾದ ಅವರು 41 ಎಸೆತಗಳಲ್ಲಿ 67 ರನ್‌ ಬಾರಿಸಿದರು.

ಸ್ಕೋರ್‌ಪಟ್ಟಿ
ರಾಯಲ್‌ ಚಾಲೆಂಜರ್ ಬೆಂಗಳೂರು
ವಿರಾಟ್‌ ಕೊಹ್ಲಿ ಬಿ ಗೋಪಾಲ್‌ 23
ಪಾರ್ಥಿವ್‌ ಪಟೇಲ್‌ ಸಿ ರಹಾನೆ ಬಿ ಆರ್ಚರ್‌ 67
ಎಬಿ ಡಿ ವಿಲಿಯರ್ ಸಿ ಮತ್ತು ಬಿ ಗೋಪಾಲ್‌ 13
ಸಿಮ್ರನ್‌ ಹೆಟ್‌ಮೈರ್‌ ಸಿ ಬಟ್ಲರ್‌ ಬಿ ಗೋಪಾಲ್‌ 1
ಮೊಯಿನ್‌ ಅಲಿ ಔಟಾಗದೆ 18
ಸ್ಟೋಯಿನಿಸ್‌ ಔಟಾಗದೆ 31

ಇತರ 5
ಒಟ್ಟು ( 20 ಓವರ್‌ಗಳಲ್ಲಿ 4 ವಿಕೆಟ್‌ಗೆ) 158
ವಿಕೆಟ್‌ ಪತನ: 1-49, 2-71, 3-73, 4-126.

Advertisement

ಬೌಲಿಂಗ್‌:
ಕೆ. ಗೌತಮ್‌ 4-0-19-0
ಧವಳ್‌ ಕುಲಕರ್ಣಿ 3-0-26-0
ಜೋಫ‌ ಆರ್ಚರ್‌ 4-0-47-1
ಶ್ರೇಯಸ್‌ ಗೋಪಾಲ್‌ 4-1-12-3
ಸ್ಟುವರ್ಟ್‌ ಬಿನ್ನಿ 1-0-6-0
ಬೆನ್‌ ಸ್ಟೋಕ್ಸ್‌ 3-0-29-0
ವರುಣ್‌ ಅರೋನ್‌ 1-0-16-0

ರಾಜಸ್ಥಾನ್‌ ರಾಯಲ್ಸ್‌
ಅಜಿಂಕ್ಯ ರಹಾನೆ ಎಲ್‌ಬಿಡಬ್ಲ್ಯು ಬಿ ಚಹಾಲ್‌ 22
ಜಾಸ್‌ ಬಟ್ಲರ್‌ ಸಿ ಸ್ಟೋಯಿನಿಸ್‌ ಬಿ ಚಹಾಲ್‌ 59
ಸ್ವೀವ್‌ ಸ್ಮಿತ್‌ ಸಿ ಯಾದವ್‌ ಬಿ ಸಿರಾಜ್‌ 38
ರಾಹುಲ್‌ ತ್ರಿಪಾಠಿ ಔಟಾಗದೆ 34
ಬೆನ್‌ ಸ್ಟೋಕ್ಸ್‌ ಔಟಾಗದೆ 1

ಇತರ 10
ಒಟ್ಟು (19.5 ಓವರ್‌ಗಳಲ್ಲಿ 3 ವಿಕೆಟಿಗೆ) 164
ವಿಕೆಟ್‌ ಪತನ: 1-60, 2-104, 3-154

ಬೌಲಿಂಗ್‌:
ಉಮೇಶ್‌ ಯಾದವ್‌ 3.5-0-40-0
ನವ್‌ದೀಪ್‌ ಸೈನಿ 4-0-35-0
ಮೊಹಮ್ಮದ್‌ ಸಿರಾಜ್‌ 4-0-25-1
ಯಜುವೇಂದ್ರ ಚಾಹಲ್‌ 4-0-17-2
ಮಾರ್ಕಸ್‌ ಸ್ಟೋಯಿನಿಸ್‌ 3-0-28-0
ಮೊಯಿನ್‌ ಅಲಿ 1-0-14-0

Advertisement

Udayavani is now on Telegram. Click here to join our channel and stay updated with the latest news.

Next