Advertisement

ಸಾಕಾನೆಗಳ “ರಭಸಕ್ಕೆ’ಪೇರಿಕಿತ್ತ ಕಾಡಾನೆ 

01:11 PM Nov 28, 2017 | |

ಹುಣಸೂರು: ಕಾಡಿನಿಂದ ನಾಡಿಗೆ ಬಂದಿದ್ದ 4 ಕಾಡಾನೆಗಳ ಪೈಕಿ ಹೆಣ್ಣಾನೆಯೊಂದು ಊರಲ್ಲೇ ಉಳಿದು ರೈತರನ್ನು ಕಂಗೆಡಿಸುವ ಜೊತೆಗೆ ಅರಣ್ಯ ಸಿಬ್ಬಂದಿಗಳನ್ನು ಹಿಂಡಿ ಹಿಪ್ಪೆ ಮಾಡಿದ್ದ ಕಾಡಾನೆ ಹೆಡೆಮುರಿಕಟ್ಟೆ ಮತ್ತೆ ಕಾಡಿಗೆ ಸೇರಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

Advertisement

ಶನಿವಾರ ರಾತ್ರಿ 4 ಆನೆಗಳ ಹಿಂಡು ಉದ್ಯಾನದ ವೀರನಹೊಸಹಳ್ಳಿ, ಹುಣಸೂರು ವಲಯದ ಕಾಡಂಚಿನ ಗ್ರಾಮಗಳಲ್ಲಿ ಬೀಡು ಬಿಟ್ಟಿದ್ದ ಆನೆಗಳ ಪೈಕಿ ಮೂರು ಆನೆಗಳನ್ನು ಸೋಮವಾರ ಸಂಜೆ ಅರಣ್ಯ ಸಿಬ್ಬಂದಿ ಕಾಡಿಗಟ್ಟಿದ್ದರು. ಆದರೆ, 1 ಹೆಣ್ಣಾನೆ ಮಾತ್ರ ಹಿಂಡಿನಿಂದ ತಪ್ಪಿಸಿಕೊಂಡು ನಾಡಿನಲ್ಲೇ ಉಳಿದುಕೊಂಡಿತ್ತು. 

ಅಭಿಮನ್ಯು ಸಾಹಸಕ್ಕೆ ಬೆಂಡಾದ ಹೆಣ್ಣಾನೆ: ಸೋಮವಾರ ಬೆಳಗ್ಗೆ ಅಭಿಮನ್ಯು, ಕೃಷ್ಣ, ಶ್ರೀನಿವಾಸ ಸಾಕಾನೆಗಳೊಂದಿಗೆ ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ನಡೆಸಲಾಯಿತು. ಬಳಿಕ, ಉದ್ಯಾನದ ಬಳಿಯ ಕೋಣನ ಹೊಸಹಳ್ಳಿ ಕಟ್ಟನಾಯ್ಕರ ನೀಲಗಿರಿ ತೋಪಿನಲ್ಲಿ ಬೀಡು ಬಿಟ್ಟಿದ್ದ ಹೆಣ್ಣಾನೆ ಹೆಡೆಮುರಿ

ಕಟ್ಟಿದ ಸಾಕಾನೆಗಳು ಎಳೆದೊಯ್ದು ಕಾಡಿನೊಳಕ್ಕೆ ನುಗ್ಗಿಸಿದ ನಂತರ ಎದ್ದೆನೋ-ಬಿದ್ದೆನೋ ಎಂಬಂತೆ ತನ್ನ ಜೊತೆಗಾರರನ್ನು ಹುಡುಕಿಕೊಂಡು ಪೇರಿಕಿತ್ತಿತು.
ಕಾರ್ಯಾಚರಣೆಯಲ್ಲಿ ವನ್ಯಜೀವಿ ವಿಭಾಗದ ಎಸಿಎಫ್ ಪ್ರಸನ್ನಕುಮಾರ್‌, ವಲಯ ಅರಣ್ಯಾಧಿಕಾರಿ ಮಧುಸೂದನ್‌ ನೇತತ್ವದಲ್ಲಿ 20 ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಭಾಗವಹಿಸಿದ್ದರು.

ಕ್ಯಾಮರಾದಲ್ಲಿ ಹುಲಿಯ ಗಾಯ ಪತ್ತೆ: ಕೂಂಬಿಂಗ್‌
 ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ  ಹುಲಿ ಗಣತಿಗೆ ಅಳವಡಿಸಿದ್ದ ಕ್ಯಾಮರ ಟ್ರಾಪಿಂಗ್‌ನಲ್ಲಿ ಕುತ್ತಿಗೆಯಲ್ಲಿ ಆಗಿದ್ದ ಗಾಯದಿಂದ ರಕ್ತ ಸೋರುತ್ತಿದ್ದ ಸ್ಥಿತಿಯಲ್ಲಿ ಗಂಡು ಹುಲಿ ಪತ್ತೆಯಾದ ಹಿನ್ನೆಲೆಯಲ್ಲಿ ಹುಲಿ ಪತ್ತೆಗೆ ಆನೆಗಳ ಮೂಲಕ ಕೂಂಬಿಂಗ್‌ ನಡೆಸಲಾಗಿತ್ತು.

Advertisement

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಾರದಹಿಂದೆಯಷ್ಟೇ ಗಾಯಗೊಂಡ ಹುಲಿ ಕಾಣಿಸಿಕೊಂಡಿದ್ದರಿಂದ ಉರುಳಿಗೆ ಸಿಲುಕಿರಬಹುದೆಂದು ಶಂಕಿಸಿ, ಗೋಪಾಲಸ್ವಾಮಿ, ದ್ರೋಣ, ಅಭಿಮನ್ಯು ಸಾಕಾನೆಗಳ ಸಹಾಯದಿಂದ ನಾಗರಹೊಳೆ ವಲಯದಲ್ಲಿ ಕೂಂಬಿಂಗ್‌ ನಡೆಸಿದರೂ ಪತ್ತೆಯಾಗಿರಿಲ್ಲ.

ಆದರೆ ಅದೇ ಗಂಡು ಹುಲಿ ಮತ್ತೂಮ್ಮೆ ಕ್ಯಾಮರಾ ಟ್ರಾಪಿಂಗ್‌ನಲ್ಲಿ ಕಾಣಿಸಿಕೊಂಡಿದ್ದು, ರಕ್ತ ಸೋರಿಕೆ ನಿಂತಿದೆ. ಕಾರ್ಯಾಚರಣೆ ನಿಲ್ಲಿಸಿ ಆನೆಗಳನ್ನು ವಾಪಾಸ್‌ ಕಳುಹಿಸಲಾಗಿದೆ. ಅರಣ್ಯದಂಚಿನಲ್ಲಿ ರೆತರು ಅಳವಡಿಸಿರುವ ತಂತಿಬೇಲಿಗೆ ಸಿಕ್ಕಿ ಗಾಯಗೊಂಡಿರಬಹುದು, ಉರುಳಿಗೆ ಸಿಲುಕಿದ್ದಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ ಎಂದು ಅರಣ್ಯಾಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next