Advertisement
ವಿಶ್ವದಲ್ಲಿ ಶೇ.25-30ರಷ್ಟು ಮಂದಿಗೆ ಮಾನಸಿಕೆ ಕಾಯಿಲೆಮನಃಶಾಸ್ತ್ರಜ್ಞ ಡಾ| ಸತೀಶ್ ರಾವ್ ಮಾತನಾಡಿ, ಮಾನಸಿಕ ರೋಗ ಅದರಲ್ಲೂ ಮುಖ್ಯವಾಗಿ ಖನ್ನತೆ ಸಮಸ್ಯೆ ವ್ಯಾಪಕವಾಗಿ ಕಾಡುತ್ತಿದೆ. ವಿಶ್ವದಲ್ಲಿ ಶೇ.25ರಿಂದ 30ರಷ್ಟು ಮಂದಿ ವಿವಿಧ ಬಗೆಯ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದು, ಇದನ್ನು ನಿಭಾಯಿಸಲು ವಿಶ್ವ ಆರೋಗ್ಯ ಸಂಸ್ಥೆ ಕೂಡ ಮಾನಸಿಕ ರೋಗ ಚಿಕಿತ್ಸೆಗೆ ಜೀವನಶೈಲಿ ರೋಗಗಳ ಚಿಕಿತ್ಸೆಗೆ ನೀಡಿದಷ್ಟೇ ಒತ್ತು ನೀಡುತ್ತಿದೆ. ಮಾನಸಿಕ ರೋಗ ಚಿಕಿತ್ಸೆಯಲ್ಲಿ ಪುನರ್ವಸತಿ ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಸೇವಾಭಾರತಿಯಂಥ ಸಮರ್ಪಣಾ ಮನೋಭಾವದ ಸ್ವಯಂಸೇವಾ ಸಂಸ್ಥೆಗಳ ಪಾತ್ರ ಮಹತ್ವದ್ದು ಎಂದು ಹೇಳಿದರು.
ಇತರ ಚಿಕಿತ್ಸೆಗಳಿಗೆ ಹೋಲಿಸಿದರೆ ಮಾನಸಿಕ ಚಿಕಿತ್ಸೆ ದೀರ್ಘಾವಧಿ ಚಿಕಿತ್ಸೆ. ಚಿಕಿತ್ಸೆ ಬಳಿಕ ಪುನರ್ವಸತಿ ಕೂಡ ಅಗತ್ಯ. ಗುಣಮುಖರಾದ ಬಳಿಕ ಮಾನಸಿಕ ರೋಗಿಗಳು ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯುವಂತೆ ಮಾಡಲು ಅವರಿಗೆ ಅಗತ್ಯ ತರಬೇತಿ, ಕೌನ್ಸೆಲಿಂಗ್, ಜೀವನ ಕೌಶಲ ತರಬೇತಿ, ವೃತ್ತಿ ಮಾರ್ಗದರ್ಶನದಂಥ ಹಲವು ಸೇವೆಗಳನ್ನು ಈ ಕೇಂದ್ರದಲ್ಲಿ ನೀಡಲಾಗುತ್ತದೆ ಎಂದು ವಿವರಿಸಿದರು. ಸರಕಾರದ ಯೋಜನೆಯಂತೆ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಮಾನಸಾಧಾರ ಕೇಂದ್ರಗಳನ್ನು ನಿರ್ವಹಿಸಬೇಕು. ಜಿಲ್ಲಾಸ್ಪತ್ರೆಗಳಲ್ಲಿ ಸಾಧ್ಯವಾಗದ ಕಡೆಗಳಲ್ಲಿ ಖಾಸಗಿ ಸಂಘ – ಸಂಸ್ಥೆಗಳಿಗೆ ಇದನ್ನು ನೀಡಲಾಗುತ್ತದೆ. ಈ ಹಿಂದೆ ಕೆ.ಎಸ್.ಹೆಗ್ಡೆ ಆಸ್ಪತ್ರೆ ಹಾಗೂ ವೆನಾÉಕ್‌ನಲ್ಲಿ ಇದನ್ನು ನಡೆಸಲಾಗುತ್ತಿತ್ತು. ಆದರೆ ಕಾರಣಾಂತರದಿಂದ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಮರ್ಪಣಾ ಮನೋಭಾವದ ಸೇವಾಭಾರತಿ ಈ ಕೇಂದ್ರವನ್ನು ನಡೆಸುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಕೋರಿದ್ದಾರೆ ಎಂದು ಹೇಳಿದರು.
Related Articles
Advertisement
ಸೇವಾಭಾರತಿ ಕಾರ್ಯದರ್ಶಿ ಎಚ್. ನಾಗರಾಜ ಭಟ್, ಖಜಾಂಚಿ ಪಿ. ವಿನೋದ್ ಶೆಣೈ, ಟ್ರಸ್ಟಿಗಳಾದ ಪ್ರಮೀಳಾ ರಾವ್, ಡಾ| ಯು.ವಿ. ಶೆಣೈ, ಡಾ| ಕೆ.ಆರ್.ಕಾಮತ್, ಗಜಾನನ ಪೈ ಮತ್ತಿತರರು ಉಪಸ್ಥಿತರಿದ್ದರು. ಡಾ| ಸುಮಾ ಕಾಮತ್ ನಿರೂಪಿಸಿ, ರಚನಾ ಪ್ರಾರ್ಥಿಸಿದರು.
ಸದುಪಯೋಗಪಡಿಸಿಕೇಂದ್ರವನ್ನು ಉದ್ಘಾಟಿಸಿದ ಸೇವಾಭಾರತಿ ಅಧ್ಯಕ್ಷೆ ಡಾ| ಸುಮತಿ ಶಣೈ ಅವರು ಮಾತನಾಡಿ, ಕೇಂದ್ರ ಮಂಗಳಾದೇವಿ ಸಮೀಪದ ಮಾರ್ನ ಮಿಕಟ್ಟೆಯ ದೇವಿಕಾ ಕಾಂಪೌಂಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳ ಬಹುದಾಗಿದೆ ಎಂದರು.