ಉಪ್ಪುಂದ: ಇಲ್ಲಿನ ಗ್ರಾ.ಪಂ.ವ್ಯಾಪ್ತಿಯ ರಾ.ಹೆದ್ದಾರಿಯಲ್ಲಿ ಹಾದು ಹೋಗುವ ಪೇಟೆಯ ಸರ್ವಿಸ್ ರಸ್ತೆಯಲ್ಲಿ ಹೊಂಡ ಗುಂಡಿಗಳಿಂದಾಗಿ ಪ್ರಯಾಣಿಕರು ದಿನನಿತ್ಯ ಸಂಕಟ ಪಡುತ್ತಿರುವುದರ ಕುರಿತು ಉದಯವಾಣಿ ಜ.7ರಂದು ವಿಸ್ಕೃತ ವರದಿ ಮಾಡಿತ್ತು. ಪರಿಣಾಮ ರಸ್ತೆಯನ್ನು ದುರಸ್ತಿಗೊಳಿಸುವ ಮೂಲಕ ಸಮಸ್ಯೆಗೆ ದೊರಕಿದೆ.
ಅಂಡರ್ ಪಾಸ್ ನಿರ್ಮಾಣದ ಸಂದರ್ಭ 200.ಮೀ. ಉದ್ದದ ಸರ್ವಿಸ್ ರಸ್ತೆಯನ್ನು ಮಾಡಿ ಹಾಗೇ ಬಿಡಲಾಗಿದೆ. ಮತ್ತೆ ಡಾಮರು ಆಗಲಿ, ದುರಸ್ಥಿ ಮಾಡಿಲ್ಲ. ಮಳೆಯಿಂದಾಗಿ ಅಂಡರ್‌ಪಾಸ್ ಬಳಿ ಹೊಂಡ ಗುಂಡಿಗಳು ಬಿದ್ದಿದ್ದರು ಮುಚ್ಚಿಲ್ಲ.
ಪೂರ್ವ ಭಾಗದಲ್ಲಿ ರಸ್ತೆಯು ಕುಸಿದು ಹೋಗಿದರು ಸಹ ದುರಸ್ಥಿಗೆ ಮುಂದಾಗಿಲ್ಲ. ಪೆಟ್ರೋಲ್ ಬಂಕ್ ಬಳಿ ತುಂಬಾ ಹೊಂಡಗಳಾಗಿದ್ದು ಜಲ್ಲಿ ಕಲ್ಲುಗಳು ರಸ್ತೆ ತುಂಬಾ ಹರಡಿಕೊಂಡಿ ರುವುದರ ಬಗ್ಗೆ ಉದಯವಾಣಿಯ ಸುದಿನದಲ್ಲಿ ವಿಶೇಷ ವರದಿ ಪ್ರಕಟಿಸುವ ಮೂಲಕ ಶಾಸಕರ ಹಾಗೂ ಸಂಬಂಧಪಟ್ಟ ಇಲಾಖೆಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.
ಬೈಂದೂರು ತಾಲೂಕಿನಲ್ಲಿಯೇ ಉಪ್ಪುಂದ ಗ್ರಾಮದ ಅತೀ ದೊಡ್ಡ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿದೆ. ನಿತ್ಯ ಸಾವಿರಾರು ವಾಹನಗಳು, ಸಾರ್ವಜನಿಕರು ಸರ್ವಿಸ್ ರಸ್ತೆಯಲ್ಲಿ ಸಂಚಾರಿಸುತ್ತಾರೆ. ರಸ್ತೆಯ ಅವ್ಯವಸ್ಥೆಯನ್ನು ಸಂಸದರಿಗೆ, ಶಾಸಕ ಗಮನಕ್ಕೆ ತರಲಾಗಿದ್ದರು ಸಹ ಇಲಾಖೆಯವರು ಕಾಮಗಾರಿ ನಡೆಸಲು ಮುಂದಾಗಿಲ್ಲ. ಉದಯವಾಣಿ ವರದಿ ಯಲ್ಲಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅವರ ಗಮನಕ್ಕೆ ತಂದಾಗ ಶಿಘ್ರದಲ್ಲೇ ದುರಸ್ಥಿಗೊಳಿಸುವ ಭರವಸೆಯನ್ನು ನೀಡಿದರು.
ಬಳಿಕ ಎಚ್ಚೆತ್ತ ಇಲಾಖೆಯು ಸರ್ವಿಸ್ ರಸ್ತೆಯನ್ನು ಅಗಲಗೊಳಿಸಿದೆ. ರಸ್ತೆಗೆ ಸಂಪೂರ್ಣ ಡಾಮರು ಹಾಕುವ ಮೂಲಕ ಸಾರ್ವಜನಿಕರಿಗಾಗುತ್ತಿರುವ ಸಮಸ್ಯೆಗಳಿಗೆ ಮುಕ್ತಿ ನೀಡಿದೆ.
ಸರ್ವಿಸ್ ರಸ್ತೆಯ ಎರಡು ಕಡೆಗಳಲ್ಲಿ ಬೆಳೆದ ಗಿಡಗಂಟಿಗಳು ಬೆಳೆದು ಪೊದೆ ಗಳಾಗಿ ಮಾರ್ಪಟ್ಟಿದೆ ರಸ್ತೆಗೆ ಚಾಚಿದ್ದು ಅದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದವು ಇದನ್ನು ತೆರವುಗೊಳಿಸಲಾಗಿದೆ.