Advertisement
ಇದನ್ನು ಬಿಳಿ ಎದೆಯ ಗೀಜಗ ಗುಬ್ಬಿ ಅಂತ ಕರೆಯುತ್ತಾರೆ. ಇದು ಗುಬ್ಬಚ್ಚಿಯನ್ನು ಹೋಲುವ ಹಕ್ಕಿ. ಕಪ್ಪು, ಬಿಳಿ, ಕೇಸರಿ ಚುಕ್ಕೆ ಇರುವ ಗುಬ್ಬಚ್ಚಿಯಷ್ಟು ಚಿಕ್ಕದಾದ ಹಕ್ಕಿ. ಇದು ಗುಲಗುಂಜಿ ಹಕ್ಕಿಯ ಸ್ವಭಾವ ಮತ್ತು ನಿಲುವನ್ನು ಹೋಲುತ್ತದೆ. ಬಣ್ಣ ವ್ಯತ್ಯಾಸಗಳಿಂದಲೇ ಈ ಹಕ್ಕಿಯನ್ನು 13 ಗುಂಪಾಗಿ ಹೆಸರಿಸಲಾಗಿದೆ.
Related Articles
ಹಕ್ಕಿಗಳಿಂದ ಇದನ್ನು ಬೇರೆ ಎಂದು ತಿಳಿಯಬಹುದಾಗಿದೆ. ಈ ಹಕ್ಕಿ ಇರುನೆಲೆ ಮಾಡಿಕೊಂಡು ಜೋಡಿಯಾಗಿ ಇಲ್ಲವೇ ಚಿಕ್ಕ ಗುಂಪಿನಲ್ಲಿ ವಾಸಿಸುತ್ತದೆ. ಗಿಡದಿಂದ ಗಿಡಕ್ಕೆ ಹಾರುತ್ತಾ ಸ್ಟಿØà,ಸ್ಟಿØà,ಸ್ಟೀØà ಎಂದು, ಕೆಲವೊಮ್ಮೆ ಸ್ಟಿಪ್, ಸ್ಟಿಪ್, ಸ್ವೀವ್, ಸ್ವೀವ್ ಸ್ವೀವ್ ಎಂದು ಕೂಗುವುದು ವಿಶೇಷ.
Advertisement
ಕೆಲವೊಮ್ಮೆ ಟೆಲಿಫೋನ್ ಅಥವಾ ಕರೆಂಟ್ ತಂತಿ ಇಲ್ಲವೇ ಇಳಿಬಿದ್ದ ಬಳ್ಳಿಗಳ ಮೇಲೆ ಕುಳಿತು ಜೋಕಾಲಿಯಾಡಿದಂತೆ ಜೀಕುತ್ತಾ ತಟ್ಟನೆ ಹಾರಿ, ರೆಕ್ಕೆಹುಳ ಹಿಡಿದು ತಾನು ಕುಳಿತ ಜಾಗಕ್ಕೆ ತಿರುಗಿ ತಿನ್ನುತ್ತದೆ. ಗಿಡದಿಂದ ಗಿಡಕ್ಕೆ ಹಾರುವಾಗ ಇದರ ಗದ್ದಲಕ್ಕೆ ಕಂಬಳಿ, ಮಿಡತೆ, ರೆಕ್ಕೆಹುಳ ಗಾಬರಿಯಾಗಿ ಹೊರಕ್ಕೆ ಓಡುತ್ತವೆ.
ಈ ಹಕ್ಕಿ ಬರುತ್ತಿದೆ ಎಂದರೆ ಸಾಕು, ಇದರ ಸಹವರ್ತಿಗಳಾದ ಅಯೋರಾ, ಬೂದು ಬಣ್ಣದ ಕೋಗಿಲೆ, ಮತ್ತು ಪತಾಕೆ ರೆಕ್ಕೆ ಡ್ರಾಂಗೂ, ಕತ್ತರಿ ಬಾಲದಡ್ರಾಂಗೂಸ ಎಲ್ಲಾ ಹುಳಗಳನ್ನು ತಿನ್ನುತೊಡಗುತ್ತವೆ. ಹೀಗಾಗಿ ಬೆಳೆಗಳಿಗೆ ಹಾನಿಕಾರಕ ಅನೇಕ ಹುಳಗಳನ್ನು ಇದು ನಿಯಂತ್ರಿಸುವುದರಿಂದ ರೈತರ ಗೆಳೆಯನೂ ಆಗಿದೆ.
ಹೆಣ್ಣು ಹಕ್ಕಿ ಕಪ್ಪು ಬಿಳಿ ಬಣ್ಣ ಮತ್ತು ತಲೆ ಬೂದು ಬಣ್ಣದಿಂದ ಕೂಡಿದೆ. ಇದರ ಉದ್ದ ಸ್ವಲ್ಪ ಚಿಕ್ಕದು. ಈ ಗುರುತಿನಿಂದಲೇ ಹೆಣ್ಣು ಹಕ್ಕಿಯನ್ನು ಗಂಡಿನಿಂದ ಪ್ರತ್ಯೇಕವಾಗಿಸಬಹುದು.
ಈ ಹಕ್ಕಿ ಮಿಲನದ ವೇಳೆಯಲ್ಲಿ ವಿಶಿಷ್ಟವಾಗಿ ಕೂಗುತ್ತದೆ. ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ , ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ ಮುಂತಾದ ಕಡೆ ಈ ಹಕ್ಕಿಯನ್ನು ಕಾಣಬಹುದು. ಈ ಹಕ್ಕಿ ಭಾರತದಲ್ಲಿ ಜೂನ್- ಅಕ್ಟೋಬರ್ ಸಮಯದಲ್ಲಿ ಮರಿಮಾಡುವುದು. ಬೇರು, ನಾರು, ಜೇಡರ ಬಲೆ ಸೇರಿಸಿ ಬಟ್ಟಲಿನಾಕಾರದ ಸುಂದರ ಗೂಡನ್ನು ಗಂಡು ಹೆಣ್ಣು ಸೇರಿ ಕಟ್ಟುವುದು ವಿಶೇಷ. ಈ ಹಕ್ಕಿ 4-7 ಮೊಟ್ಟೆ ಇಟ್ಟ ಉದಾಹರಣೆ ಇದೆ. ಇದು ಭೂಮಿಗೆ ಸಮಾನಾಂತರವಾಗಿರುವ ಟೊಂಗೆಗಳ ಮೇಲೆ ಗೂಡು ಕಟ್ಟುತ್ತದೆ. 17 ರಿಂದ 18 ದಿನ ಕಾವುಕೊಟ್ಟು ಮರಿಮಾಡುತ್ತದೆ.
ಪಿ. ವಿ. ಭಟ್ ಮೂರೂರು