ವಿಜಯಪುರ: ಕೋವಿಡ್ ರೂಪಾಂತರಿ ತಳಿ ಒಮಿಕ್ರಾನ್ ಬ್ರೇಕ್ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎರಡು ದಿನಗಳ ವಾರತಾಂತ್ಯದ ಕರ್ಫ್ಯೂ ಘೋಷಿಸಿದ್ದು, ವಿಜಯಪುರ ಗಡಿ ಜಿಲ್ಲೆಯಲ್ಲೂ ಜಾರಿಗೆ ಬಂದಿದೆ. ಶುಕ್ರವಾರ ರಾತ್ರಿಯಿಂದಲೇ ವಿಜಯಪುರ ಜಿಲ್ಲಾಡಳಿತ ಕರ್ಫ್ಯೂ ಅನುಷ್ಠಾನಕ್ಕೆ ಸರ್ಕಾರದ ಮಾರ್ಗಸೂಚಿ ಅನ್ವಯ ನಿರ್ಬಂಧ ಹೇರಿದೆ.
ಹೀಗಾಗಿ ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಜಿಲ್ಲೆಯಲ್ಲಿ ಸಾರ್ವಜನಿಕರ ಸಂಚಾರ, ಓಡಾಟವನ್ನು ಸಂಪೂರ್ಣವಾಗಿ ನಿಷೇಧಿ ಸಲಾಗಿದೆ. ಈ ಕರ್ಫ್ಯೂ ಅವ ಧಿಯಲ್ಲಿ ಸೋಮವಾರ ಬೆಳಗ್ಗೆವರೆಗೆ ಯಾರೂ ಅನಗತ್ಯವಾಗಿ ಹೊರಗೆ ತಿರುಗುವಂತಿಲ್ಲ. ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿದ್ದರೂ ತುರ್ತು ಹಾಗೂ ಅಗತ್ಯ ಸೇವೆಗಳಿಗೆ ವಿನಾಯ್ತಿ ನೀಡಲಾಗಿದೆ. ಆರೋಗ್ಯ ಸಂಬಂ ಧಿ ಸೇವೆ ಹೊರತುಪಡಿಸಿ ಉಳಿದೆಲ್ಲ ಸೇವೆಗಳಿಗೆ ನಾಳೆಯಿಂದ ಎರಡು ದಿನಗಳ ಕಾಲ ಅವಕಾಶಗಳಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುವ ಕರ್ತವ್ಯ ನಿರ್ವಹಿಸುವವರನ್ನು ಹೊರತುಪಡಿಸಿ ಉಳಿದ ಸೇವೆಗಳು ಸ್ತಬ್ಧಗೊಳ್ಳಲಿವೆ.
ಎಲ್ಲ ಸರ್ಕಾರಿ ಕಚೇರಿಗಳು, ಸರ್ಕಾರಿ ಸ್ವಾಯುತ್ತ ಸಂಸ್ಥೆಗಳು, ನಿಗಮಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಜಿಲ್ಲೆಯಲ್ಲಿ ಸಾರ್ವಜನಿಕ ಉದ್ಯಾನವನ ಪ್ರವೇಶ ನಿರ್ಬಂಧಿ ಸಲಾಗಿದೆ. ಮಾಹಿತಿ ತಂತ್ರಜ್ಞಾನ ಆಧಾರಿತ ಉದ್ದಿಮೆಗಳು ಒಳಗೊಂಡಂತೆ ಎಲ್ಲ ಉದ್ದಿಮೆಗಳ ಕಾರ್ಯಾಚರಣೆಗೆ ವಿನಾಯ್ತಿ ನೀಡಲಾಗಿದೆ, ನೌಕರರು ಆಯಾ ಸಂಘ ಸಂಸ್ಥೆ ಗಳು ನೀಡುವ ಅ ಧಿಕೃತ ಗುರುತಿನ ಚೀಟಿಯನ್ನು ಹಾಕಬೇಕು, ಗುರುತಿನ ಚೀಟಿ ಹೊಂದಿದವರಿಗೆ ಮಾತ್ರ ಸಂಚರಿಸುವ ಅವಕಾಶವನ್ನು ಕಲ್ಪಿಸಲಾಗಿದೆ.
ಇದಲ್ಲದೇ ಅಗತ್ಯವಿರುವ ರೋಗಗಳು ಪರಿಚಾರಕರು, ವ್ಯಕ್ತಿಗಳಿಗೆ ಮತ್ತು ಲಸಿಕೆ ಹಾಕಿಸಿಕೊಳ್ಳಲು ಉದ್ದೇಶಿಸಿರುವ ವ್ಯಕ್ತಿಗಳು ಪೂರಕ ದಾಖಲೆಯೊಂದಿಗೆ ಸಂಚರಿಸುವ ಅವಕಾಶ ಕಲ್ಪಿಸಲಾಗಿದೆ. ಆಹಾರ, ದಿನ, ಹಣ್ಣು ಮತ್ತು ತರಕಾರಿಗಳು, ಡೈರಿ ಮತ್ತು ಹಾಲಿನ ಕೇಂದ್ರ, ಮಾಂಸ-ಮೀನು ಪಶು ಆಹಾರದ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ರೆಸ್ಟೋರೆಂಟ್, ಹೋಟೆಲ್‌ಗಳಲ್ಲಿ ಪಾರ್ಸಲ್‌ಗೆ ಅವಕಾಶ ಸೃಜಿಸಲಾಗಿದೆ. ರೈಲುಗಳ ಸಂಚಾರಕ್ಕೆ ಮತ್ತು ವಿಮಾನ ಪ್ರಯಾಣಕ್ಕೆ ಅನುಮತಿಸಿದ ವಿಮಾನ, ರೈಲು ಮತ್ತು ಈ ಮೂಲಕ ಪ್ರಯಾಣಿಕರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕ ಸಾರಿಗೆ ವಾಹನಗಳ ಸಂಚಾರಕ, ಖಾಸಗಿ ವಾಹನಗಳು ಮತ್ತು ಕ್ಯಾಬ್‌ಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸಿಂಧುವಾದ ಪ್ರಯಾಣ ದಾಖಲೆ ಅಥವಾ ಟಿಕೆಟ್ ಪ್ರದರ್ಶಿಸಿದ ನಂತರ ಮತ್ತು ಕೋವಿಡ್ ನಿಮಮಯಗಳನ್ನು ಪಾಲಿಸುವುದು ಕಡ್ಡಾಯವಾಗಿದೆ ಎಂದು ಜಿಲ್ಲಾ ಧಿಕಾರಿ ಸುನಿಲಕುಮಾರ ತಿಳಿಸಿದ್ದಾರೆ. ವಿನಾಯ್ತಿ: ಸರ್ಕಾರಿ ಕಚೇರಿ, ಸರ್ಕಾರಿ, ಖಾಸಗಿ ಟ್ಯಾಕ್ಸಿಗಳ ಸಂಚಾರ, ಆರೋಗ್ಯ ಪರಿಚಾಕರಿಗೆ ಅಗತ್ಯ ದಾಖಲೆಗಳೊಂದಿಗೆ ಸಂಚರಿಸುವ ಅವಕಾಶವಿದೆ.
ಅಗತ್ಯ ಸೇವೆಗಳಾದ ಕಿರಾಣಿ ವಸ್ತುಗಳು, ಹಾಲು, ಔಷ ಧ, ಪೆಟ್ರೋಲ್ ಖರೀದಿಗೆ ಅವಕಾಶವಿದೆ. ತರಕಾರಿ ಮಾರಾಟಕ್ಕೆ ಅವಕಾಶ ಇದ್ದರೂ ಸಂತೆ ನಡೆಸಲು ನಿರ್ಬಂಧವಿದೆ. ನಿರ್ಬಂಧ: ತರಕಾರಿ ಮಾರಾಟಕ್ಕೆ ಅವಕಾಶ ಇದ್ದರೂ ಸಂತೆ ನಡೆಸಲು ನಿರ್ಬಂಧವಿದೆ. ಐತಿಹಾಸಿಕ ಪ್ರವಾಸಿ ತಾಣಗಳಾದ ಸ್ಮಾರಕಗಳ ಪ್ರವೇಶ, ಉದ್ಯಾನವನ ಪ್ರವೇಶ ನಿರ್ಬಂಧವಿದೆ. ಚಿತ್ರಮಂದಿರಗಳು ಪ್ರರ್ದನ ನೀಡುವಂತಿಲ್ಲ.