ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ಹೆಚ್ಚಾಗದಂತೆ ನಿಗಾ ವಹಿಸಲು ಬಿಬಿಎಂಪಿ ಮುಂದಾಗಿದೆ. ಹೀಗಾಗಿ, ವಾರಾಂತ್ಯದಕರ್ಫ್ಯೂ ಜಾರಿಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ ಎಂದು ತಿಳಿದು ಬಂದಿದೆ. ವಾರಾಂತ್ಯದ ದಿನಗಳಲ್ಲಿ ಸಭೆ, ಸಮಾರಂಭಗಳ ಸಂಖ್ಯೆ ಹೆಚ್ಚುತ್ತಿದೆ. ಅನುಮತಿ ಇಲ್ಲದಿದ್ದರೂ ಕೆಲವು ಪಬ್‌ಗಳು ಓಪನ್ ಆಗಿರುವ ಬಗ್ಗೆ ಪಾಲಿಕೆಗೆ ದೂರು ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಗೆ ಪಾಲಿಕೆ, ಸರ್ಕಾರಕ್ಕೆ ಮನವಿ ಮಾಡಿದೆ. ಆದರೆ, ಪಾಲಿಕೆ ಅಧಿಕಾರಿಗಳ ಜತೆಗೆ ಮುಖ್ಯಮಂತ್ರಿಗಳು ಸಭೆ ನಡೆಸಿದ ಬಳಿಕವೇ ಈ ಬಗ್ಗೆ ಆದೇಶ ಹೊರಡಿಸಲಿದ್ದಾರೆ
ಎಂದು ಹೇಳಲಾಗಿದೆ.
ಇದನ್ನೂ ಓದಿ:ಇಂದಿನ ರಾಶಿಫಲ: ಈ ರಾಶಿಯವರಿಗಿಂದು ಸಾಂಸಾರಿಕ ವಿಚಾರದಲ್ಲಿ ತಾಳ್ಮೆ, ಸಹನೆ ಅಗತ್ಯ
ನಗರದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರು ಯಾವ ಕ್ರಮಬೇಕಾದರೂ ತೆಗೆದುಕೊಳ್ಳಬಹುದು. ಕಂಟೈನ್ಮೆಂಟ್, ಸೀಲ್‌ಡೌನ್, ವಾರಾಂತ್ಯ ಕರ್ಫ್ಯೂ ಸೇರಿದಂತೆ ಪರಿಸ್ಥಿತಿಗೆ ಅನುಗುಣವಾಗಿ ಕ್ರಮಜರುಗಿಸಲು ಸರ್ಕಾರ ಅವಕಾಶ ನೀಡಿದೆ. ಈ ಹಿಂದೆ ಕೊರೊನಾ ಸಂಬಂಧಿಸಿದಂತೆ ಸರ್ಕಾರದ ಆದೇಶವನ್ನು ಬಿಬಿಎಂಪಿ ಪಾಲನೆ ಮಾಡಬೇಕಿತ್ತು. ಜತೆಗೆ, ಸರ್ಕಾರದ ಆದೇಶಕ್ಕೆ ಕಾಯಬೇಕಿತ್ತು. ಸದ್ಯ ಸರ್ಕಾರ, ಪಾಲಿಕೆಗೆ ಸ್ವತಂತ್ರ ಅಧಿಕಾರ ನೀಡಿದ್ದು, ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮ ಜಾರಿಗೆ ತರಬಹುದು ಎನ್ನಲಾಗಿದೆ.
ಕೇರಳ ಹಾಗೂ ಹೊರ ರಾಜ್ಯದಿಂದ ಬರುವ ಪ್ರಯಾಣಿಕರ ಮೇಲೆ ಅಧಿಕಾರಿಗಳು ಈಗಾಗಲೇ ನಿಗಾ ವಹಿಸುತ್ತಿದ್ದಾರೆ. ಕೇರಳದಿಂದ ಬಂದವರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಪರಿಶೀಲನೆ ಹಾಗೂ ವರದಿ ಇಲ್ಲದವರಿಗೆಕೋವಿಡ್ ಪರೀಕ್ಷೆ ಮಾಡುತ್ತಿದ್ದಾರೆ. ಜತೆಗೆ, ಕೇರಳದಿಂದ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರ 72 ಗಂಟೆಗಳ ಹಿಂದಿನ ಕೊರೊನಾ ನೆಗೆಟಿವ್ ವರದಿ ಹಾಗೂ ಲಸಿಕೆ ಪಡೆದ ಸರ್ಟಿಫಿಕೇಟ್ ಪರಿಶೀಲಿಸುತ್ತಿದ್ದಾರೆ.
ಪಾಲಿಕೆಕ್ರಮ ಏನು?
ಕೊರೊನಾ ಸೋಂಕಿತರು ಹೆಚ್ಚಾಗಿ ಪತ್ತೆಯಾಗುವ ವಾರ್ಡ್, ಅಪಾರ್ಟ್‌ಮೆಂಟ್ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಪಾಲಿಕೆ, ಕಟ್ಟುನಿಟ್ಟಿನಕ್ರಮ ಕೈಗೊಳ್ಳಬಹುದು. ಒಂದು ಮನೆಯಲ್ಲಿ ಮೂರಕ್ಕಿಂತ ಹೆಚ್ಚು ಜನ ಸೋಂಕಿತರು ಪತ್ತೆಯಾದರೆ ಮನೆಯನ್ನುಕಂಟೈನ್ಮೆಂಟ್ ಝೋನ್ ಮಾಡಬಹುದು. ಮನೆಯಿಂದ ಸೋಂಕಿತರು ಹೊರಗಡೆ ತೆರಳದಂತೆ ನಿಗಾ ವಹಿಸಬೇಕು. ಜತೆಗೆ, ಸ್ಥಳೀಯರ ಸಹಕಾರದೊಂದಿಗೆ ಪಾಲಿಕೆ, ಅಗತ್ಯ ವಸ್ತುಗಳ ಸರಬರಾಜು ಮಾಡಬೇಕಿದೆ. ಒಂದು ಮನೆ ಅಥವಾ ಒಂದೇ ಜಾಗದಲ್ಲಿ10ಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾದರೆ 100 ಮೀಟರ್ ಪ್ರದೇಶವನ್ನು ಸೀಲ್‌ಡೌನ್ ಮಾಡಬಹುದಾಗಿದೆ.