Advertisement
‘ಆಕ್ಸಮ್ ಸ್ಟಡಿ’ ಅಧ್ಯಯನದಡಿ ವಿಶ್ವದ ವಿವಿಧ ದೇಶಗಳ ಆರ್ಥಿಕ ಸ್ಥಿತಿಗತಿ ಸಮೀಕ್ಷೆ ನಡೆಸಲಾಗಿದ್ದು, ವರದಿಯನ್ನು ದಾವೋಸ್‌ನಲ್ಲಿ ಸೋಮವಾರದಿಂದ ಆರಂಭಗೊಂಡ 5 ದಿನಗಳ ವರ್ಲ್ಡ್ ಎಕನಾಮಿಕ್ ಫೋರಂ (ಡಬ್ಲ್ಯೂಇಎಫ್)ನಲ್ಲಿ ಮಂಡಿಸಲಾಗಿದೆ. ಭಾರತದ ಸಮೀಕ್ಷೆಯಲ್ಲಿ ಮತ್ತೂಂದು ವಿಚಾರವೂ ಉಲ್ಲೇಖಗೊಂಡಿದ್ದು, ಭಾರತದ 13.6 ಕೋಟಿ ಕಡು ಬಡವರಲ್ಲಿ ಶೇ. 10ರಷ್ಟು ಮಂದಿ 2004ರಿಂದ ಇಲ್ಲಿಯವರೆಗೂ ಸಾಲದಲ್ಲಿ ಇರುವುದಾಗಿ ಉಲ್ಲೇಖೀಸಲಾಗಿದೆ. ಇನ್ನು, ಸಮೀಕ್ಷೆ ಪ್ರಕಾರ, ವಿವಿಧ ದೇಶಗಳ ಕುಬೇರರ ಆಸ್ತಿ ಕಳೆದ ವರ್ಷ ದಿನವೊಂದಕ್ಕೆ ಸರಾಸರಿ ಶೇ.12ರಷ್ಟು (ಅಂದಾಜು 17,800 ಕೋಟಿ ರೂ.) ಹೆಚ್ಚಾಗಿದ್ದರೆ, ಕಡುಬಡವರ ಆಸ್ತಿ ದಿನಕ್ಕೆ ಶೇ. 11ರಷ್ಟು ಕೈಬಿಡುತ್ತಾ ಸಾಗಿದೆ ಎಂದು ವಿಶ್ಲೇಷಿಸಲಾಗಿದೆ. ‘ಶ್ರೀಮಂತರು ಶ್ರೀಮಂತರಾಗೇ ಹೋಗುತ್ತಿದ್ದು, ಬಡವರು ನಿರ್ಗತಿಕರಾಗುತ್ತಿದ್ದಾರೆ’ ಎಂಬುದು ಈ ಸರ್ವ ಸಮೀಕ್ಷೆಗಳ ಒಟ್ಟಾರೆ ಸಾರಾಂಶ.
Related Articles
Advertisement
•2004ರಿಂದೀಚೆಗೆ ಸಾಲದ ಸುಳಿಯಲ್ಲೇ ಸಿಲುಕಿರುವ ಶೇ. 10 ಕಡುಬಡವರು