Advertisement

ದೇಶದ ಸಂಪತ್ತು ಖಾಸಗೀಕರಣ ಆಗದಿರಲಿ

07:21 AM Jan 28, 2019 | |

ಮೈಸೂರು: ದೇಶದ ಸಂಪತ್ತು, ಸರ್ಕಾರಿ ಇಲಾಖೆ, ಕೈಗಾರಿಕೆಗಳು ಖಾಸಗೀಕರಣ ಆಗಬಾರದು ಎಂದು ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು. ಅಖೀಲ ಭಾರತ ಅಂಚೆ ಇಲಾಖೆ (ಆರ್‌ಎಂಎಸ್‌) ನೌಕರರ ಪರಿಶಿಷ್ಟ ಜಾತಿ/ಪಂಗಡ ಗಳ ಕಲ್ಯಾಣ ಸಂಘದ ಎರಡನೇ ವಿಭಾ ಗೀಯ ಮಟ್ಟದ ಆರ್‌ಎಂಎಸ್‌ ಎಸ್‌ಸಿ/ಎಸ್‌ಟಿ ನೌಕರರ ಸಮ್ಮೇಳನ ಹಾಗೂ ವಲಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು.

Advertisement

ಅಧಿಕಾರ ಹಿಡಿದುಕೊಳ್ಳಬೇಕೆಂಬ ಹಂಬಲ, ಊಳಿಗಮಾನ್ಯ ವ್ಯವಸ್ಥೆಯ ಜೊತೆಗೆ ಖಾಸಗೀಕರಣದಿಂದ ಪ್ರಜಾ ಪ್ರಭುತ್ವ ಉಳ್ಳವರ ಕೈಗೆ ಸಿಲುಕಿ ನರಳು ವಂತಾಗಿದೆ. ಒಂದು ವೇಳೆ ದೇಶದ ಸಂಪತ್ತು, ಸರ್ಕಾರಿ ಇಲಾಖೆ, ಕೈಗಾರಿಕೆಗಳು ಖಾಸಗೀಕರಣವಾದರೆ, ಎಲ್ಲವೂ ಒಬ್ಬರ ಕೈಗೆ ಸಿಕ್ಕಂತಾಗಿ ಸರ್ವಾಧಿಕಾರ ಧೋರಣೆ ಪ್ರಧಾನವಾಗುತ್ತದೆ. ಇಂಥ ಸಂದರ್ಭದಲ್ಲಿ ನೌಕರರು ತಮ್ಮ ಅಸ್ತಿತ್ವ, ಹಕ್ಕು ಮತ್ತು ದೊರಕಬೇಕಾದ ಸೌಲಭ್ಯಗಳಿಗಾಗಿ ಸಂಘಟಿತರಾಗಿ ಹೋರಾಟ ರೂಪಿಸಬೇಕಿದೆ ಎಂದರು.

ಸಂಘದ ಕರ್ನಾಟಕ ವಲಯದ ಮಾಜಿ ಅಧ್ಯಕ್ಷ ಕೆ.ಆರ್‌.ಕಂಬಯ್ಯ ಮಾತನಾಡಿ, ನಮ್ಮ ಸಂಘವು 1983ರಲ್ಲಿ ಆರಂಭ ವಾದರೂ ಬೇರೆ ಕಾರ್ಮಿಕ ಸಂಘಟನೆಗಳಿಗೆ ದೊರೆತ ಸವಲತ್ತುಗಳು ನಮ್ಮ ಸಂಘಕ್ಕೆ ಇನ್ನೂ ಸಿಕ್ಕಿಲ್ಲ. ಅದಕ್ಕಾಗಿ ದೆಹಲಿ ಮಟ್ಟದಲ್ಲಿ ನಮ್ಮ ನಾಯಕರು ಕಳೆದ 20 ವರ್ಷಗಳಿಂದ ಸತತ ಪ್ರಯತ್ನ ಮಾಡುತ್ತಿದ್ದಾರೆ. ಆದರೂ, ಸೌಲಭ್ಯ ಒದಗಿಸಲಾಗಿಲ್ಲ ಎಂದರು.

ಆರ್‌ಎಂಎಸ್‌ ವಿಭಾಗೀಯ ಕಚೇರಿ ಬೆಂಗಳೂರಿನಲ್ಲಿದ್ದಾಗ ಸರ್ಕಾರಿ ನೌಕರರು ಯಾವುದೇ ಕೆಲಸವಿದ್ದರೂ ಬೆಂಗಳೂರಿನ ಕಚೇರಿಗೆ ಬಂದು ಕೆಲಸ ಮುಗಿಸಿಕೊಂಡು ಹೋಗುತ್ತಿದ್ದರು. ಆದರೆ, ಪ್ರಸ್ತುತ ಈ ಕಚೇರಿಯನ್ನು ಮಂಗಳೂರಿಗೆ ಸ್ಥಳಾಂತರಿಸ ಲಾಗಿದೆ. ಇದರಿಂದ ಆರ್‌ಎಂಎಸ್‌ಕ್ಯೂ ವಿಭಾಗದಲ್ಲಿ 13 ಜಿಲ್ಲೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ಅನಾನುಕೂಲ ವಾಗಿದೆ. ಕರಾವಳಿ ಪ್ರದೇಶದಲ್ಲಿ ಯಾವ ಅನುಕೂಲಗಳೂ ಇರುವುದಿಲ್ಲ. ಆದ್ದರಿಂದ ಈ ಕಚೇರಿಯನ್ನು ಮೈಸೂರಿಗೆ ಸ್ಥಳಾಂತರಿಸ ಬೇಕು ಎಂದು ಮನವಿ ಮಾಡಿದರು.

ಹಾಸನ ನಗರಸಭೆ ಕಂದಾಯ ಅಧಿಕಾರಿ ಪ್ರಕಾಶ್‌ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಭಾವಚಿತ್ರ ಅನಾವರಣ ಮಾಡಿದರು. ಕೆಪಿಸಿಸಿ ಕಾರ್ಯದರ್ಶಿ ಮದನ್‌ ಪಟೇಲ್‌, ಸಂಘದ ಬೆಂಗಳೂರು ವಲಯ ಅಧ್ಯಕ್ಷ ಎಸ್‌.ಎನ್‌. ಕಟ್ಟೀಮನಿ, ಕಾರ್ಯ ದರ್ಶಿ ಎಚ್. ಸುಬ್ರಹ್ಮಣಿ, ವಿಭಾಗೀಯ ಅಧ್ಯಕ್ಷ ಬಿ.ಎಸ್‌. ರಾಜಶೇಖರ ಮೂರ್ತಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next