Advertisement
ಹೂಳೆತ್ತಿಲ್ಲಬಾಗಾಳ್ಕೆರೆ 86 ಸೆಂಟ್ಸ್ ವಿಸ್ತೀರ್ಣದಲ್ಲಿದ್ದು 20 ವರ್ಷಗಳಿಂದ ಹೂಳೆತ್ತಿಲ್ಲ. ಕೆರೆ ಹೂಳೆತ್ತಿದರೆ ಕೆರೆಯ ಪಶ್ಚಿಮಕ್ಕಿರುವ ಇಡೀ ಕೃಷಿ ಪ್ರದೇಶಗಳ ಕಾತಿ, ಸುಗ್ಗಿ ಹಾಗೂ ಕೊಳ್ಕೆ ಬೇಸಾಯಗಳಿಗೆ ಪ್ರಯೋಜನಕಾರಿಯಾಗುತ್ತದೆ. ಗ್ರಾ.ಪಂ., ತಾ.ಪಂ., ಜಿ.ಪಂ. ಹಾಗೂ ಶಾಸಕರಿಗೂ ಕೆರೆ ಹೂಳೆತ್ತುವಂತೆ ಸ್ಥಳೀಯರು ಮನವಿಯನ್ನು ನೀಡಿದ್ದಾರೆ. ಡಿಸಿ ಹಾಗೂ ಮಾಜಿ ಸಚಿವರಿಗೂ ಈ ಬಗ್ಗೆ ಮನವಿ ನೀಡಲಾಗಿತ್ತು. ಸಣ್ಣ ನೀರಾವರಿ ಇಲಾಖೆಗೂ ಮನವಿ ನೀಡಿದ್ದರೂ, ಈ ಬಗ್ಗೆ ಗಮನ ಹರಿಸಿಲ್ಲ. ಶಾಸಕರು ಈ ಬಗ್ಗೆ ಪತ್ರ ನೀಡಿದ್ದರೂ, ಬೇಡಿಕೆ ಪತ್ರದಲ್ಲೇ ಉಳಿದುಕೊಂಡಿದೆ. ಇನ್ನು ಕಳೆದ ಮೂರು ವರ್ಷಗಳಿಂದ ಈ ಭಾಗದ ರೈತರು ಬಾಗಾಳ್ಕೆರೆಯ ಹೂಳೆತ್ತಿ ಕಾಯಕಲ್ಪ ಮಾಡಬೇಕೆಂದು ಹೋರಾಟ ನಡೆಸುತ್ತಲೇ ಬಂದಿದ್ದರೂ ಕೆರೆಗೆ ಇನ್ನೂ ಕಾಯಕಲ್ಪವಾಗಿಲ್ಲ.
ಬಾಗಾಳ್ಕೆರೆಯನ್ನು ಹೂಳೆತ್ತಿ ಎರಡು ಕಡೆ ನೀರು ಹರಿಯುವ ತೋಡುಗಳನ್ನು ಕಲ್ಲು ಕಟ್ಟಿ ಸರಿಪಡಿಸಿದರೆ ನಮಗೆ ಮೂರೂ ಬೆಳೆಯನ್ನು ಸಮೃದ್ಧಿಯಾಗಿ ಬೆಳೆಯಲು ನೀರು ಸಿಗುತ್ತದೆ. ನಮ್ಮ ಕೃಷಿಭೂಮಿ ಹಸನಾಗಿ ನಮ್ಮ ಬಾಳೂ ಹಸನಾಗಬಹುದು.
– ದಿನಕರ ಆಚಾರ್ಯ, ಸ್ಥಳೀಯ ಕೃಷಿಕ, ಅನುದಾನ ಸಾಲದು
ಕಂಡಲೂರಿನ ಬಾಗಾಳ್ಕೆರೆ ಹೂಳೆತ್ತಲು ಗ್ರಾ.ಪಂ. ಅನುದಾನ ಸಾಕಾಗುವುದಿಲ್ಲ. ಕೆರೆ ಹೂಳೆತ್ತಿ, ತೋಡುಗಳಲ್ಲಿ ನೀರು ಹರಿಯುವಂತೆ ಮಾಡಲು ಅಂದಾಜು ರೂ.25 ಲಕ್ಷ ಅಗತ್ಯವಿದೆ. ಈ ಬಗ್ಗೆ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಂಡಿಸಿ ಸಣ್ಣ ನೀರಾವರಿ ಇಲಾಖೆಗೆ ಪ್ರಸ್ತಾವನೆಯನ್ನು ಶೀಘ್ರ ಕಳಿಸಲಾಗುವುದು.
– ಗೌರಿ ಆರ್. ಶ್ರೀಯಾನ್, ಅಧ್ಯಕ್ಷೆ, ಗ್ರಾ.ಪಂ. ಕಾವ್ರಾಡಿ