Advertisement
ಈಗಿರುವ 14 ಸರಕಾರಿ ಕೊಳವೆ ಬಾವಿ ಹಾಗೂ 3 ಖಾಸಗಿ ಕೊಳವೆ ಬಾವಿ ಆಶ್ರಯದಿಂದ ದಿನಕ್ಕೆ ಎರಡೂವರೆ ಗಂಟೆ ನೀರು ಸರಬರಾಜು ಮಾಡಲಾಗುತ್ತಿದೆ. ಕೊಳವೆ ಬಾವಿ ಅಂತರ್ಜಲ ಮಟ್ಟ ಸುಧಾರಿಸುವ ದೃಷ್ಟಿಯಿಂದ ಹೆಚ್ಚು ನೀರು ಮೇಲೆತ್ತಲು ಸಾಧ್ಯವಿಲ್ಲ. ಪರಿಸ್ಥಿತಿಯನ್ನು ಜನಸಾಮಾನ್ಯರು ಮನದಲ್ಲಿಟ್ಟು ನೀರು ಮಿತ ಬಳಕೆ ಅನಿವಾರ್ಯವಾಗಿದೆ.
ಈ ಹಿಂದೆ 1.05 ಎಂಎಲ್‌ಡಿ ನೀರು ಪೂರೈಕೆ ಮಾಡ ಲಾಗುತ್ತಿದ್ದು, ಈಗ ಅದನ್ನು 0.65 ಎಂಎಲ್‌ಡಿಗೆ ಇಳಿಸ ಲಾಗಿದೆ. ಪ್ರತಿದಿನ ಒಬ್ಬ ವ್ಯಕ್ತಿಗೆ 130 (ಎಲ್‌ಪಿ ಸಿಡಿ) ಲೀಟರ್ ಅವಶ್ಯದಂತೆ 7,746 ಮಂದಿಗೆ 5ರಿಂದ 7 ಲಕ್ಷ ಲೀಟರ್ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ಪ್ರಸ್ತುತ ಒಬ್ಬ ವ್ಯಕ್ತಿಗೆ 100 ಎಲ್‌ಪಿಸಿಡಿ (ಲೀಟರ್) ನಂತೆ 5 ಲಕ್ಷ ಲೀಟರ್ ನೀರು ಸರಬರಾಜು ಕಷ್ಟಕರ ವಾಗಿದೆ. ಆದರೂ ನಗರ ಪಂ. ಐದೂವರೆ ಲಕ್ಷ ಲೀ. ನೀರು ಸರಬರಾಜು ಮಾಡುತ್ತಿದೆ. ಪ.ಪಂ. ವ್ಯಾಪ್ತಿಯಲ್ಲಿ 14 ಕೊಳವೆಬಾವಿ ಗಳಿದ್ದು, 11ರಿಂದ ಮಾತ್ರ ನೀರು ತೆಗೆಯ ಲಾಗುತ್ತಿದೆ. ಉಳಿದಂತೆ ಸಂತೆಕಟ್ಟೆ, ಸಂತೆಕಟ್ಟೆ ಚಾಮುಂಡೇಶ್ವರಿ, ಉದಯನಗರದಿಂದ 3 ಖಾಸಗಿ ಬೋರ್‌ವೆಲ್‌ನ ನೀರು ಬಳಸ ಲಾಗುತ್ತಿದೆ. ಆದರೆ ವಿದ್ಯುತ್ ವ್ಯತ್ಯಯಗೊಂ ಡರೆ ಪೂರೈಕೆಯೂ ಕಷ್ಟವಾಗಲಿದೆ.
Related Articles
Advertisement
ಕೆಸರು ತೆಗೆದರೂ ಪ್ರಯೋಜನವಿಲ್ಲಪಟ್ಟಣ ಪಂಚಾಯತ್‌ನ ಜಾಕ್‌ವೆಲ್ ಬಳಿ ಸೋಮಾವತಿ ನದಿಗೆ ತಾತ್ಕಾಲಿಕವಾಗಿ ಕಟ್ಟಿರುವ ಕಟ್ಟದಿಂದ ಈ ಹಿಂದೆ ಪ್ರತಿನಿತ್ಯ ಸುಮಾರು 4 ಲಕ್ಷ ಲೀ.ನಷ್ಟು ನೀರು ತೆಗೆಯಲಾಗುತ್ತಿತ್ತು. ಹೀಗಾಗಿ ನೀರು ನಿಲ್ಲಬೇಕು ಎಂದು ಅಲ್ಲಿನ ಸುತ್ತಮುತ್ತಲ ಕೆಸರನ್ನು ಜೆಸಿಬಿ ಮೂಲಕ ತೆಗೆದರೂ ದೊಡ್ಡ ಪ್ರಯೋಜನವಾಗಿಲ್ಲ. ಬೇಸಗೆ ಆರಂಭದ ಮೊದಲು ಪಟ್ಟಣ ಪಂಚಾಯತ್ ಬೆಳಗ್ಗೆ 6ರಿಂದ ಅಪರಾಹ್ನ 2ರ ವರೆಗೆ ಅಂದರೆ ದಿನಕ್ಕೆ ಒಟ್ಟು 8 ಗಂಟೆಗಳ ಕಾಲ ನೀರು ಪೂರೈಕೆ ಮಾಡುತ್ತಿತ್ತು. ಆದರೆ ಈಗ ನೀರಿನ ಲಭ್ಯತೆ ಆಧಾರದಲ್ಲಿ ಬರೀ 2 ಗಂಟೆ ಮಾತ್ರ ನೀರು ಕೊಡಬೇಕಾದ ಸ್ಥಿತಿ ಬಂದಿದೆ. ಮುಂದಿನ ಎರಡು ತಿಂಗಳು ಮಳೆ ಬಾರದಿದ್ದಲ್ಲಿ ಪರಿಸ್ಥಿತಿ ತೀರ ಬಿಗಡಾಯಿಸುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ. ಜನಸಂಖ್ಯೆ, ನೀರಿನ ಸಂಪರ್ಕ
ನಗರದ ಹಿಂದಿನ ಜನಸಂಖ್ಯೆ- 7,746 (2011)ರ ಜನಗಣತಿ
ಪ್ರಸ್ತುತ ಜನಸಂಖ್ಯೆ ಅಂದಾಜು- 8,200
ಒಟ್ಟು ಮನೆಗಳು -3,300
ಪಂ.ನಿಂದ ನೀರಿನ ಸಂಪರ್ಕ-1,423
ಉಳಿದವರಿಗೆ ಸ್ವಂತ ಕೊಳವೆಬಾವಿ, ಬಾವಿ ಆಶ್ರಯ ಕಲ್ಲಗುಡ್ಡೆ ಮದರ್ ಟ್ಯಾಂಕ್‌ಗಿಲ್ಲ ನೀರು
ಬೆಳ್ತಂಗಡಿಯ ಕಲ್ಲಗುಡ್ಡೆಯಲ್ಲಿ 13 ಲಕ್ಷ ರೂ. ವೆಚ್ಚದ 5 ಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಮದರ್‌ಟ್ಯಾಂಕ್ ನಿರ್ಮಿಸಲಾಗಿತ್ತು. ಆದರೆ ನದಿಯಲ್ಲಿ ಅಷ್ಟು ಪ್ರಮಾಣದಲ್ಲಿ ನೀರಿಲ್ಲದಿರುವುದರಿಂದ ಈವರೆಗೆ ಒಮ್ಮೆಯೂ ನೀರು ಸಂಗ್ರಹವಾಗಿಲ್ಲ. ಪೋಲು ಮಾಡದಂತೆ ಮನವಿ
ಕೊಳವೆಬಾವಿ ಅಂತರ್ಜಲ ಬತ್ತಿಹೋದರೆ ಪರಿಸ್ಥಿತಿ ವಿಕೋಪಕ್ಕೆ ತೆರಳುವ ಸಾಧ್ಯತೆ ಇದೆ. ಪ್ರಸ್ತುತ ಪಟ್ಟಣಕ್ಕೆ 5 ಲಕ್ಷ ಲೀಟರ್ ನೀರು ಪೂರೈಕೆ ಮಾಡಲಾಗುತ್ತಿದೆ. ಮುಂದಿನ ಎರಡು ತಿಂಗಳು ಜನಸಾಮಾನ್ಯರು ನೀರಿನ
ಬಳಕೆಯಲ್ಲಿ ಏರುಪೇರಾಗದಂತೆ ಎಚ್ಚರ ವಹಿಸಬೇಕು.
ಮಹಾವೀರ ಆರಿಗ, ಎಂಜಿನಿಯರ್, ಪ.ಪಂ. ಬೆಳ್ತಂಗಡಿ ತಾಲೂಕು ಪಂಚಾಯತ್ ಮುನ್ನೆಚ್ಚರಿಕೆ
ಪಟ್ಟಣ ಪಂಚಾಯತ್‌ನಿಂದ ನೀರು ಪಡೆಯುವ ಎಲ್ಲರಿಗೆ ವಾಹನ, ಕೃಷಿ ಬಳಕೆಗೆ ನೀರು ಬಳಸದಂತೆ ಈಗಾಗಲೇ ನೋಟಿಸ್ ನೀಡಲಾಗಿದೆ. ಜತೆಗೆ ನೀರಿನ ಅವಶ್ಯವಿರುವಲ್ಲಿ ದೂರು ಬಂದರೆ ತತ್‌ಕ್ಷಣ ಕ್ರಮ ಕೈಗೊಳ್ಳುವಲ್ಲಿ ತಾಲೂಕು ಪಂಚಾಯತ್ ಅಗತ್ಯ ಮುನ್ನೆಚ್ಚರಿಕೆ ವಹಿಸಿದೆ.
ಗಣಪತಿ ಶಾಸ್ತ್ರಿ, ತಹಶೀಲ್ದಾರ್ ಚೈತ್ರೇಶ್ ಇಳಂತಿಲ