Advertisement
ಡಂಪಿಂಗ್ ಯಾರ್ಡ್ ಆದ ಪ್ರದೇಶಗಳುಎಡಬೆಟ್ಟು ರಸ್ತೆಯ ಟೆಲಿಫೋನ್ ಎಕ್ಸಚೇಂಜ್ ಬಳಿ, ಮೌಂಟ್ ರೋಸರಿ ಚರ್ಚ್ ಸಮೀಪ, ನೇಜಾರು ಸ್ಮಶಾನ, ನೇಜಾರು ಮಸೀದಿ ಕೆಳಬದಿ, ಬಾಳಿಗಾ ಫಿಶ್‌ನೆಟ್ ಬಸ್ಸು ನಿಲ್ದಾಣದ ಬಳಿ, ನಿಡಂಬಳ್ಳಿ ಮೈದಾನ, ಜಂಗಮರಬೆಟ್ಟು ಸಮೀಪದ ರಸ್ತೆಯ ಎರಡೂ ಬದಿಯಲ್ಲಿ ತ್ಯಾಜ್ಯದಿಂದ ಕೂಡಿದ ಒಳರಸ್ತೆಗಳು ಡಂಪಿಂಗ್ ಯಾರ್ಡ್ ಆಗಿ ಮಾರ್ಪಡಾಗುತ್ತಿವೆ.
ಬೆಳೆಯುತ್ತಿರುವ ಗ್ರಾಮವಾದ ಕಲ್ಯಾಣಪುರದಲ್ಲಿ ಪ್ರತೀ ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ವಿಲೇವಾರಿ ಮಾಡಲು ಇಲ್ಲಿನ ಗ್ರಾಮ ಪಂಚಾಯತ್‌ನಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ಎಸ್‌ಎಲ್‌ಆರ್‌ಎಂ ಘಟಕ ಸ್ಥಾಪನೆಗೂ ಜಾಗದ ಕೊರತೆ ಇದೆ. ಇದ್ದ ಕಸವನ್ನು ಡಂಪಿಂಗ್ ಮಾಡಲು ಸೂಕ್ತವಾದ ಸರಕಾರಿ ಜಾಗ ಇಲ್ಲದ್ದರಿಂದ ರಸ್ತೆ ಬದಿ ಕಸ ಬೀಳಲು ಕಾರಣವಾಗಿದೆ. ಹಲವು ಬಾರಿ ಜೆಸಿಬಿ ಮೂಲಕ ಕಸವನ್ನು ತೆರವುಗೊಳಿಸಲಾಗುತ್ತದೆ. ಜೆಸಿಬಿ ಅವರು ಅವರದೇ ಖಾಸಗಿ ಜಾಗಕ್ಕೆ ಕೊಂಡು ಹೋಗಿ ಡಂಪ್ ಮಾಡುತ್ತಾರೆ. ಒಣ ಕಸವನ್ನು ಅಲ್ಲಲ್ಲೆ ಬೆಂಕಿ ಕೊಟ್ಟು ಸುಡಲಾಗುತ್ತದೆ. ಆದರೆ ತೆರವಾದ ಮರು ದಿನದಲ್ಲೇ ಮತ್ತೆ ಅಷ್ಟೆ ಪ್ರಮಾಣದಲ್ಲಿ ಕಸ ಬೀಳುತ್ತಿದೆ. ರಸ್ತೆ ಬದಿ ನೆಚ್ಚಿನ ತಾಣ
ರಸ್ತೆ ಬದಿ ತ್ಯಾಜ್ಯ ವಸ್ತುಗಳು ಸುರಿಯುತ್ತಿರುವುದರಿಂದ ಗ್ರಾಮದ ಸೌಂದರ್ಯಕ್ಕೆ ಧಕ್ಕೆ ಉಂಟಾಗಿದ್ದು ಪರಿ ಸರಕ್ಕೂ ಮಾರಕವಾಗಿ ಪರಿಣಮಿಸಿದೆ. ಒಡೆದ ಗಾಜಿನ ಚೂರುಗಳು, ಪ್ಲಾಸ್ಟಿಕ್ ಚೀಲ, ಕೊಳೆತು ಹೋದ ಪದಾರ್ಥಗಳು, ತ್ಯಾಜ್ಯಗಳ ವಸ್ತುಗಳು ಗ್ರಾಮದ ಅಂದವನ್ನು ಕೆಡಿಸಿದೆ. ಸಾವಿರಾರು ಮಂದಿ ಇಲ್ಲಿ ದುರ್ವಾಸನೆಯನ್ನು ಅನುಭವಿಸುತ್ತಾ ಸಂಚರಿಸುತ್ತಾರೆ.
Related Articles
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಜಾಗದ ಕೊರೆತೆ ಇದೆ. ಎಸ್‌ಎಲ್‌ಆರ್‌ಎಂ ಸೂಕ್ತವಾದ ಜಾಗ ವ್ಯವಸ್ಥೆಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದೇªವೆ. ಸಾರ್ವಜನಿಕರಲ್ಲಿ ಪರಿಸರ ಪ್ರಜ್ಞೆ ಜಾಗೃತಗೊಳಿಸುವ ಮೂಲಕ ಗ್ರಾಮದ ಸ್ವತ್ಛತೆಗೆ ಆದ್ಯತೆ ನೀಡುವ ಕಾರ್ಯಕ್ರಮಗಳನ್ನು ನಡೆಸಲಾಗಿದೆ.
-ಸುರೇಶ್, ಪಿಡಿಒ, ಕಲ್ಯಾಣಪುರ ಗ್ರಾ.ಪಂ.
Advertisement