ನವದೆಹಲಿ:”ಭಾರತ-ಚೀನಾ ನಡುವೆ ಎಂಥ ಪ್ರಕ್ಷುಬ್ಧ ಪರಿಸ್ಥಿತಿ ಬಂದರೂ ಭಾರತ, ನಮ್ಮ ವೀರಯೋಧರ ಬೆನ್ನಿಗೆ ಯಾವಾಗಲೂ ನಿಂತಿರುತ್ತದೆ” ಎಂದು ಪ್ರಧಾನಿ
ನರೇಂದ್ರ ಮೋದಿ ತಿಳಿಸಿದ್ದಾರೆ.
ಸಂಸತ್ ಅಧಿವೇಶನ ಶುರುವಾಗುವ ಮುನ್ನ ಮಾಧ್ಯಮಗಳ ಬಳಿ ಮಾತನಾಡಿದ ಅವರು, “ಗಡಿಯಲ್ಲಿ ನಮ್ಮ ಯೋಧರು ತಮ್ಮ ಕರ್ತವ್ಯವನ್ನು ಧೀರೋದಾತ್ತವಾಗಿ ನಿರ್ವಹಿಸುತ್ತಿದ್ದಾರೆ.
ದುರ್ಗಮ ಬೆಟ್ಟಗಳ ಸಾಲಿನಲ್ಲಿ ಪ್ರತಿಕೂಲ ಹವಾಮಾನವನ್ನೂ ಲೆಕ್ಕಿಸದೆಕಾವಲು ಕಾಯುತ್ತಿರುವ ಅವರು, ಚೀನಾ ಮಾಡುತ್ತಿರುವ ಪ್ರತಿಯೊಂದುಕುತಂತ್ರಕ್ಕೂ ತಕ್ಕ ಉತ್ತರಕೊಡುತ್ತಿ ದ್ದಾರೆ. ಅವರ ಶೌರ್ಯದ ಬಗ್ಗೆ ನಮಗೆ ಹೆಮ್ಮೆಯಿದೆ. ನಮ್ಮ ಸಂಸತ್ತಿಗೆ ನಮ್ಮಯೋಧರ ಮೇಲೆ ಅಪಾರವಾದ ಗೌರವವಿದ್ದು ಹಾಲಿ ಸಂಸತ್ ಅಧಿವೇಶನದ ಲ್ಲಿಯೇ ತನ್ನ ಗೌರವವನ್ನು ವ್ಯಕ್ತಪಡಿಸುತ್ತದೆ” ಎಂದರು.
ವಿವಾದ ಸೃಷ್ಟಿಸಿದ ಸೌಗತಾ ರಾಯ್ ಟೀಕೆ
ಪಶ್ಚಿಮ ಬಂಗಾಳದ ಡಮ್ ಡಮ್ ಲೋಕಸಭಾ ಕ್ಷೇತ್ರದ ಸಂಸದ, ತೃಣಮೂಲ ಕಾಂಗ್ರೆಸ್ ನಾಯಕ ಸೌಗತಾ ರಾಯ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಲೋಕಸಭೆಯಲ್ಲಿ ಮಾಡಿದ ಆಕ್ಷೇಪಾರ್ಹ ಹೇಳಿಕೆ, ಸದನದಲ್ಲಿ ಭಾರೀ ಗದ್ದಲಕ್ಕೆ ಕಾರಣವಾಯಿತು.
ಆಡಳಿತಾರೂಢ ಎನ್‌ಡಿಎ ಸದಸ್ಯರು, ರಾಯ್ ಅವರ ಹೇಳಿಕೆಯನ್ನು ತೀವ್ರವಾಗಿ ಆಕ್ಷೇಪಿಸಿದರು. ಆಗ, ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಸದನದ ಹಿರಿಯ ಸದಸ್ಯರಾಗಿ, ಕೇಂದ್ರ ಸಚಿವರೊಬ್ಬರ ಬಗ್ಗೆ ವೈಯಕ್ತಿಕ ಟೀಕೆ ಮಾಡುವುದು ಸಲ್ಲದು. ಅವರು ನಿರ್ಮಲಾ ಜೀ ಅವರಲ್ಲಿ ಬೇಷರತ್ ಕ್ಷಮೆ ಕೋರಬೇಕು ಎಂದರು. ಆನಂತರ, ರಾಯ್ ಅವರ ಆಕ್ಷೇಪಾರ್ಹ ಹೇಳಿಕೆಯನ್ನು ದಿನಂಪ್ರತಿ ಕಲಾಪದ ವಿವರಗಳನ್ನು ದಾಖಲಿಸುವಕಡತದಿಂದ ತೆಗೆದುಹಾಕಲಾಯಿತು.