Advertisement
ಪ್ರತೀ ಗ್ರಾಮ ಪಂಚಾಯತ್ ಗೊಂದು ಮಳೆ ಮಾಪನ ಮತ್ತು ಹೋಬಳಿಗೊಂದು ಹವಾಮಾನ ಮಾಪನ ಕೇಂದ್ರಗಳನ್ನು ಸ್ಥಾಪಿಸ ಲಾಗಿದೆ. ಇವುಗಳು ನೀಡುವ ಅಂಕಿ-ಅಂಶ ಆಧರಿಸಿ ಯಾವ ಭಾಗದಲ್ಲಿ ಎಷ್ಟು ಪ್ರಮಾಣದ ಮಳೆ ಬೀಳುತ್ತಿದೆ? ಎಷ್ಟು ಅವಧಿಯಲ್ಲಿ ಹಾಗೂ ಯಾವ ತೀವ್ರತೆಯಲ್ಲಿ ಮಳೆಯಾಗುತ್ತಿದೆ? ಇತ್ಯಾದಿ ಮಾಹಿತಿ ಪಡೆಯಲಾಗುತ್ತಿತ್ತು. ಅದನ್ನು ಆಧರಿಸಿ ಸ್ಥಳೀಯವಾಗಿ ಮಳೆ ಸಂದೇಶಗಳನ್ನು ರವಾನಿಸ ಲಾಗುತ್ತದೆ. ಆ ಮಳೆ ತೀವ್ರಗೊಂಡರೆ ಎಚ್ಚರಿಕೆ ಸಂದೇಶಗಳನ್ನು ನೀಡಲಾಗುತ್ತದೆ. ಆದರೆ ಬೆಂಗ ಳೂರು ಒಳಗೊಂಡಂತೆ ಕೆಲವೆಡೆ ಮಳೆ ಸುರಿದು 2 ದಿನಗಳ ಅನಂತರ ಈ “ಎಚ್ಚರಿಕೆ ಸಂದೇಶ’ಗಳು ಬರುತ್ತಿವೆ.
Related Articles
ದೇಶದಲ್ಲಿ ಅತಿ ದೊಡ್ಡ ಮಳೆ ಮಾಪನ ಜಾಲ ಹೊಂದಿರುವ ರಾಜ್ಯ ಕರ್ನಾಟಕ. ಇದರಿಂದ ಹೆಚ್ಚು ವ್ಯವಸ್ಥಿತವಾಗಿ ನಿರ್ವಹಿಸಬಹುದಾಗಿದ್ದು, ಉಳಿದ ರಾಜ್ಯಗಳಿಗೆ ಇದು ಮಾದರಿ ಆಗಿದೆ. ವಿಶ್ವ ಹವಾಮಾನ ಸಂಸ್ಥೆ ಮತ್ತು ಭಾರತೀಯ ಹವಾಮಾನ ಇಲಾಖೆಯು ಪ್ರತಿ 350 ಚದರ ಕಿ.ಮೀ.ಗೊಂದು ಮಳೆ ಮಾಪನ ಇದ್ದರೆ ಸಾಕು ಎಂದು ಹೇಳಿವೆ. ನಮ್ಮಲ್ಲಿ ಅಂದಾಜು ಪ್ರತಿ 35 ಚ. ಕಿ.ಮೀ.ಗೊಂದು ಮಾಪನಗಳನ್ನು ಅಳವಡಿಸಲಾಗಿದೆ.
Advertisement
ಹವಾಮಾನ ಮಾಪನ ಕೇಂದ್ರಹವಾಮಾನ ಮಾಪನ ಕೇಂದ್ರಗಳು ಮಳೆಯ ಜತೆಗೆ ಆ ಭಾಗದ ಉಷ್ಣಾಂಶ, ತೇವಾಂಶ, ಗಾಳಿಯ ವೇಗ ಸೇರಿದಂತೆ ಇತರೆ ಮಾಹಿತಿಗಳನ್ನೂ ನೀಡುತ್ತವೆ. ಹೋಬಳಿಗೊಂದು ಈ ಕೇಂದ್ರಗಳನ್ನು ಅಳವಡಿಸಲಾಗಿದೆ. 95 ಗಂಟೆ ಅನಂತರ ಎಚ್ಚರಿಕೆ
ಉದಾಹರಣೆಗೆ ಬೆಳಗಾವಿಯ ಸವದತ್ತಿ, ಕೋಲಾರದ ಶ್ರೀನಿವಾಸ ಪುರ ವ್ಯಾಪ್ತಿಯಲ್ಲಿನ ಕೆಲವು ಗ್ರಾ.ಪಂ.ಗಳ ಮಳೆಯ ಎಚ್ಚರಿಕೆ ಸಂದೇಶಗಳು 95 ಗಂಟೆಗಳ ಅನಂತರ ಬಂದಿದ್ದರೆ, ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ, ತುಮಕೂರಿನ ಚಿಕ್ಕನಾಯಕನಹಳ್ಳಿ ವ್ಯಾಪ್ತಿಯಲ್ಲಿ ಬರುವ ಗ್ರಾ.ಪಂ.ಗಳ ಮಳೆ ಮಾಹಿತಿ 70 ಗಂಟೆ ತಡವಾಗಿ ಬರುತ್ತಿವೆ. ಇನ್ನೂ ವಿಚಿತ್ರವೆಂದರೆ ಆ. 29ರಂದು ಬೆಂಗ ಳೂರು ನಗರದ ಆನೇಕಲ್, ಬೆಂಗಳೂರು ದಕ್ಷಿಣದ ಮಳೆಯ ಎಚ್ಚ ರಿಕೆ ಸಂದೇಶಗಳು ಸೆ. 5ರಂದು ಮೊಬೈಲ್‌ಗೆ ಬಂದಿವೆ. ಇವು ಕೆಲವು ಮಾದರಿಗಳಷ್ಟೇ. ಅನೇಕ ಗ್ರಾ.ಪಂ. ಮಟ್ಟದಲ್ಲಿ ಮಳೆ ಮಾಪನಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ದೂರು ಗಳು ಸ್ವತಃ ಅಲ್ಲಿನ ನಿವಾಸಿಗಳಿಂದ ಕೇಳಿಬರುತ್ತಿವೆ. ಎಲ್ಲ ಕಡೆಗಳಲ್ಲೂ ನಿಯಮಿತವಾಗಿ ಮಳೆ ಮಾಪನಗಳಿಂದ ಮಳೆ ಪ್ರಮಾಣ ದಾಖಲಾಗುತ್ತಿದೆ. ಜತೆಗೆ ಅದು ಸಂಬಂಧಪಟ್ಟವರಿಗೆ ಆಯಾ ಸ್ಥಳೀಯ ಮಟ್ಟದಲ್ಲಿ ಸಂದೇಶದ ರೂಪದಲ್ಲಿ ರವಾನೆಯೂ ಆಗುತ್ತಿದೆ. ಇದರಲ್ಲಿ ಯಾವುದೇ ತೊಂದರೆ ಅಥವಾ ಅಡತಡೆ ಆಗುತ್ತಿಲ್ಲ.
– ಮನೋಜ್ ರಾಜನ್, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಆಯುಕ್ತ
-ವಿಜಯಕುಮಾರ ಚಂದರಗಿ