ಚಿಕ್ಕಬಳ್ಳಾಪುರ: ಕುರುಬ ಸಮುದಾಯದ ಹಿತದೃಷ್ಟಿಯಿಂದ ಸಚಿವ ಈಶ್ವರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ನಡೆಯುತ್ತಿರುವ ಮಾತಿನ ಸಮರ ಒಳ್ಳೆಯದಲ್ಲ ಎಂದು ಕಾಗಿನೆಲೆ ಮಹಾ ಸಂಸ್ತಾನದ ಕನಕ ಗುರು ಪೀಠಾಧಿಪತಿ ಈಶ್ವರಾನಂದಪುರಿ ಸ್ಚಾಮಿಜೀ ತಿಳಿಸಿದರು.
ಚಿಕ್ಕಬಳ್ಳಾಪುರಕ್ಕೆ ಭಾನುವಾರ ಶ್ರಾವಣ ಭಿಕ್ಷೆಗೆ ಆಗಮಿಸಿದ್ದ ಅವರು ಇಲ್ಲಿನ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದರು.
ಯಾವುದೇ ರಾಜಕೀಯ ಪಕ್ಷದಲ್ಲಿ ಯಾರೇ ಇರಲಿ, ಆದರೆ ಸಮುದಾಯದ ಹಿತಷ್ಟಿಯಿಂದ ಪರಸ್ಪರ ನಿಂದನೆ, ಮಾತಿನ ಚಕಮಕಿ ಸರಿಯಲ್ಲ ಎಂದರು.
ರಾಜ್ಯದಲ್ಲಿ ಅಹಿಂದ ಮಠಗಳು ಮತ್ತು ಜನರು ಒಂದಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಸಾವಿರಾರು ವರ್ಷಗಳಿಂದ ಅಹಿಂದ ವರ್ಗಗಳು ಶೋಷಣೆಗೆ ಒಳಾಗಿವೆ ಎಂದರು.
ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಲ್ಪಿಸುವಲ್ಲಿ ವಿಫಲವಾಗಿದೆ ಎಂದರು. ಕೂಡಲೇ ಸರ್ಕಾರ ನೆರೆ ಸಂತ್ರಸ್ತರಿಗೆ ಸ್ಪಂದಿಸಬೇಕೆಂದರು