Advertisement

ಮತಗಟ್ಟೆ ಬಳಿ ಮತದಾರರ ಮನವೊಲಿಕೆ ಕಸರತ್ತು

02:47 PM Jun 09, 2018 | Team Udayavani |

ಪಿರಿಯಾಪಟ್ಟಣ: ಶುಕ್ರವಾರ ನಡೆದ ದಕ್ಷಿಣ ಶಿಕ್ಷಕರ ಕ್ಷೇತ್ರದ ಧಾನ ಪರಿಷತ್‌ ಚುನಾವಣೆಯು 3 ಪಕ್ಷಗಳ ಬೆಂಬಲಿಗರ ಅಂತಿಮ ಕ್ಷಣದ ಕಸರತ್ತಿನೊಂದಿಗೆ ಶಾಂತಿಯುತವಾಗಿ ಕೊನೆಗೊಂಡಿತ್ತು.ಬೆಳಿಗ್ಗೆಯಿಂದಲೇ ತಾಲ್ಲೂಕು ಆಡಳಿತ ಭವನದಲ್ಲಿ ನಿರ್ಮಿಸಲಾಗಿದ್ದ ಮತಗಟ್ಟೆಯಲ್ಲಿ ಶಿಕ್ಷಕರು ಮತ ಚಲಾಯಿಸಿದರು.

Advertisement

ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ 276 ಮತದಾರರಿದ್ದು ಸಂಜೆ 4 ಗಂಟೆ ಹೊತ್ತಿಗೆ 200 ಮತಗಳು ಚಲಾವಣೆಯಾಗಿದ್ದವು. ಮತಗಟ್ಟೆಯಿಂದ 200 ದೂರದಲ್ಲಿ ಬಿ.ಎಂ.ರಸ್ತೆಯಲ್ಲಿ ಮಾಜಿ ಶಾಸಕ ಹೆಚ್‌.ಸಿ.ಬಸವರಾಜು ಹಾಗೂ ಬಿಜೆಪಿ ಕಾರ್ಯಕರ್ತರು ಬಿಜೆಪಿ ಪಕ್ಷದ ಬಿ.ನಿರಂಜನ್‌ಮೂರ್ತಿ ಪರವಾಗಿ ಶಿಕ್ಷಕರ ಮನವೊಲಿಸುವ ದೃಶ್ಯ ಕಂಡುಬಂದರೆ

ಇನ್ನೊಂದೆಡೆ ಜೆಡಿಎಸ್‌ನ ಯುವ ಮುಖಂಡ ಹಾಗೂ ಮೈಮುಲ್‌ ನಿರ್ದೇಶಕ ಪಿ.ಎಂ.ಪ್ರಸನ್ನ ಜೆಡಿಎಸ್‌ ಪಕ್ಷದ ಮರಿತಿಬ್ಬೇಗೌಡ ಪರವಾಗಿ ಶಿಕ್ಷಕರ ಮನವೊಲಿಸುತ್ತಿದ್ದರು. ಅದರ ಸುಪದಲ್ಲೇ ಕಾಂಗ್ರೆಸ್‌ನ ಜಿಲ್ಲಾ ಅಧ್ಯಕ್ಷ ಡಾ.ಬಿ.ಜೆ.ಜಯ್‌ಕುಮಾರ್‌ ಹಾಗೂ ಅವರ ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷದ ಎಂ.ಲಕ್ಷ್ಮಣ ಪರವಾಗಿ ಶಿಕ್ಷಕರ ಮನವೊಲಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next