Advertisement

ಹೊನ್ನಾಳಿ: ಮತ ಎಣಿಕೆ ಶಾಂತಿಯುತ

03:45 PM Dec 31, 2020 | Team Udayavani |

ಹೊನ್ನಾಳಿ: ತಾಲೂಕಿನ 28 ಗ್ರಾಮ ಪಂಚಾಯತ್‌ ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಪಟ್ಟಣದ ಶ್ರೀ ಚನ್ನಪ್ಪಸ್ವಾಮಿ ಶಿಕ್ಷಣ ಸಂಸ್ಥೆ ಆವರಣದಲ್ಲಿರುವ ಶ್ರೀಮತಿ ಗಂಗಮ್ಮ ವೀರಭದ್ರ ಶಾಸ್ತ್ರಿ ಕೈಗಾರಿಕಾ ತರಬೇತಿ ಕೇಂದ್ರದ ಕಟ್ಟಡದಲ್ಲಿ ಬುಧವಾರ ಶಾಂತಿಯುತವಾಗಿ ನಡೆಯಿತು.

Advertisement

ಗ್ರಾಪಂ ಚುನಾವಣೆಯ ಫಲಿತಾಂಶ ತಿಳಿದುಕೊಳ್ಳಲು 28 ಗ್ರಾಪಂಗಳ ವ್ಯಾಪ್ತಿಯ ಗ್ರಾಮಗಳ ಜನರು ಸಾವಿರಾರು ಸಂಖ್ಯೆಯಲ್ಲಿ ಎಣಿಕೆ ಕೇಂದ್ರದ ಆವರಣದಲ್ಲಿ ಜಮಾಯಿಸಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಪಡಬೇಕಾಯಿತು. ಬೆಳಿಗ್ಗೆ 8ಕ್ಕೆ ಮತ ಎಣಿಕೆ ಕಾರ್ಯ ಆರಂಭಗೊಂಡಿತು.

ಜನರು ಬೆಳಿಗ್ಗೆ 7ಕ್ಕೆ ಮತ ಎಣಿಕೆ ಕೇಂದ್ರದತ್ತ ಧಾವಿಸಿದರು. ಮತ ಎಣಿಕೆ ಕಾರ್ಯ ಸಂಜೆ 4:30 ರವರೆಗೆ ಶೇ. 60ರಷ್ಟು ಪೂರ್ಣಗೊಂಡಿತ್ತು.

ಲಾಟರಿಯಲ್ಲಿ ಗೆಲುವು: ಬೆನಕನಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಕ್ಕಬಾಸೂರು ಕ್ಷೇತ್ರಕ್ಕೆ ಸ್ಪ ರ್ಧಿಸಿದ್ದ ವೀಣಾ ಮತ್ತು ಉಷಾ ಮಧ್ಯೆ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಇಬ್ಬರೂ ತಲಾ 119 ಮತಗಳನ್ನು ಪಡೆದರು. ಸಮ ಬಂದರೆ ನಿಯಮದ ಪ್ರಕಾರ ಲಾಟರಿ ಎತ್ತುವ ಕಾರ್ಯ ಮಾಡಿದಾಗ ಉಷಾ ಗೆಲುವಿನ ನಗು ಬೀರಿದರು.

ಇದನ್ನೂ ಓದಿ:ಫಲಿಸಿದ ಹರಕೆ: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪತ್ರಕರ್ತನ ಪತ್ನಿಗೆ ಗೆಲುವು

Advertisement

ಸಾವಿನ ನಂತರ ಗೆಲುವು: ಅರಬಗಟ್ಟೆ ಗ್ರಾಪಂ ವ್ಯಾಪ್ತಿಯ ಸುಂಕದಕಟ್ಟೆ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಡಿ. ಬಸಪ್ಪ ಮತದಾನದ ನಂತರ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಮತ ಎಣಿಕೆಯಲ್ಲಿ ಅವರು ಗೆಲುವು ಸಾಧಿಸಿದ್ದರು. ಈ ಹಿಂದಿನ ಐದು ಗ್ರಾಪಂ ಚುನಾವಣೆಗಳಲ್ಲಿ ಗೆಲುವು ಸಾಧಿಸಿ “ಸೋಲಿಲ್ಲದ ಸರದಾರ’ ಎನ್ನಿಸಿಕೊಂಡಿದ್ದರು. ಈಗ ಆರನೇ ಬಾರಿಯೂ ವಿಜಯಶಾಲಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next