Advertisement
ಎಲ್ಲರಂತೆ ನನಗೂ ಕೂಡ ನನ್ನ ತಾಯಿಯೇ ಜೀವ ಜೀವನ ಎಲ್ಲವೂ ಹೌದು. ಒಬ್ಬಳೇ, ಅದು ಗ್ರಹಿಣಿಯಾಗಿ ತನ್ನ ಮಕ್ಕಳನ್ನು ಬೆಳೆಸುವಲ್ಲಿ ಸಾಕಷ್ಟು ಶ್ರಮ ಪಟ್ಟಿದ್ದಾಳೆ. ಅಲ್ಲದೆ ಅದೆಷ್ಟೋ ತ್ಯಾಗಗಳನ್ನು ಮಾಡಿದ್ದಾಳೆ. ನಮ್ಮ ನಗುವಿನಲ್ಲಿ ಅವಳ ನೋವ ಮರೆತಳು… ಮರೆತಳ್ಳೋ ಅಥವಾ ಮರೆತಂತಿದ್ದಳು ನಾಕಾಣೆ… ಧೈರ್ಯದಿಂದ ಎಲ್ಲ ಸಮಯ ಸಂದರ್ಭವನ್ನ ಮೆಟ್ಟಿ ನಿಂತು ಯಾರ ಹೀಯಾಳಿಸುವಿಕೆಗೂ ತಲೆ ಕೆಡಿಸಿಕೊಳ್ಳದೆ, ಆಡಿಕೊಳ್ಳುವವರ ಬಾಯಿಗೆ ಆಹಾರವಾಗದೆ ನಮ್ಮನ್ನ ಉತ್ತಮವಾಗಿ ಬೆಳೆಸುವಲ್ಲಿ ಸಫಲಳಾಗಿದ್ದಾಳೆ ನನ್ನ ಅಮ್ಮ ಎನ್ನುವುದಕ್ಕೆ ಹೆಮ್ಮೆ ಇದೆ ನನಗೆ.
Related Articles
Advertisement
ಯಾವುದೇ ಸ್ವಾರ್ಥವಿಲ್ಲದೆ ಎಲ್ಲರ ಶ್ರೇಯೋಭಿವೃದ್ಧಿಯನ್ನು ಬಯಸುವವಳು ನನ್ನಮ್ಮ. ತನಗಾಗಿ ಅಲ್ಲದಿದ್ದರೂ ತನ್ನ ಮಕ್ಕಳಗಾಗಿ ಆದರೂ ಸುಖವಾಗಿರಬೇಕು ಎನ್ನುವುದು ಅವಳ ಕನಸು. ಅವಳ ಇಡೀ ಜೀವನವನ್ನೇ ನಮಗಾಗಿ ಮೂಡಿಪಾಗಿಟ್ಟಿದ್ದಾಳೆ ಎಂದರು ತಪ್ಪಿಲ್ಲ.. ಎಲ್ಲಿದ್ದರೂ ನನ್ನ ಮಕ್ಕಳು ಸುಖವಾಗಿರಲಿ ಎನ್ನುವುದೇ ಅವಳ ಪ್ರಾರ್ಥನೆ..
ನನ್ನ ಜೀವನದ ಪ್ರತಿಯೊಂದು ಸಿಹಿಕಹಿ ಅನುಭವಗಳಲ್ಲಿ ನನ್ನ ಅಮ್ಮನ ಪಾತ್ರ ಅಮೂಲ್ಯವಾದದ್ದು ಮತ್ತು ಮಹತ್ತರವಾದದ್ದು.. ಇಂತಹ ಅಮ್ಮನನ್ನು ವರವಾಗಿ ನನಗೆ ದಯಾಪಾಲಿಸಿದ್ದಕ್ಕೆ ಕಾಣದ ದೇವರಿಗೆ ಕೈ ಮುಗಿಯುವುದೋ.. ಅಥವಾ ಕಣ್ಣಿಗೆ ಕಾಣುವ ದೇವರು ಅಂದರೆ ಅಮ್ಮ ನಿಗೆ ನಿನ್ನನ್ನ ಪಡೆದ ನಾನೇ ಪುಣ್ಯವಂತೆ ಎಂದು ಸಾಷ್ಟಾಂಗ ನಮಸ್ಕಾರಿಸುವುದೋ ನಾನ್ ಅರಿಯೆ..ಒಂದು ಮಾತ ಅಂತು ನಿಜ ಇಂತಹ ಅಮ್ಮನನ್ನ ಪಡೆದದ್ದು ನನ್ನ ಯಾವುದೋ ಜನ್ಮದ ಪುಣ್ಯವೇ ಸರಿ..
ಈಕೆಯ ಬಗ್ಗೆ ಬರೆಯುತ್ತಾ ಹೋದರೆ ಪುಟಗಳೇ ಸಾಲದು. ಒಂದ್ ಅಂತು ಸತ್ಯ ನನ್ನ ಅಮ್ಮನಿಗೆ ಮಾತ್ರ ನನ್ನ ಜೀವನದ ದಿಕ್ಕನ್ನೇ ಬದಲಿಸಿರುವ ಮತ್ತು ಬದಲಿಸಲು ಸಾಮರ್ಥ್ಯ ಇರುವುದು ಎನ್ನುವುದು ನನ್ನ ಅನಿಸಿಕೆ.
-ಪ್ರಗತಿ ಎಸ್.
ಭಂಡಾರಕಾರ್ಸ್
ಕಾಲೇಜು, ಕುಂದಾಪುರ