Advertisement

ವೈರಸ್‌ ವೈರಿ ಆಹಾರ

11:40 AM Jul 03, 2020 | Lakshmi GovindaRaj |

ಎಲ್ಲಾ ಕಡೆ ಕೋವಿಡ್19 ಹಬ್ಬುತ್ತಿದೆ. ಎಲ್ಲರ ಗಮನ ಈಗ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಕಡೆ ತಿರುಗಿದೆ. ಇದಕ್ಕಾಗಿ ಮಾತ್ರೆಗಳನ್ನು ನುಂಗುವುದೂ ಉಂಟು. ಆದರೆ, ನಮ್ಮ ಮನೆಯಲ್ಲಿ, ನಾವು ಬಳಸುವ ಹಲವಾರು ಪದಾರ್ಥಗಳಿಂದಲೇ ರೋಗನಿರೋಧಕ ಗುಣವನ್ನು ಹೆಚ್ಚಿಸಿಕೊಳ್ಳಬಹುದು. ವಿಟಮಿನ್‌ ಸಿ, ದೇಹದಲ್ಲಿ ಬಿಳಿ ರಕ್ತಕಣಗಳನ್ನು ಹೆಚ್ಚಿಗೆ ಮಾಡುವ ಮೂಲಕ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Advertisement

ದ್ರಾಕ್ಷಿ, ಕಿತ್ತಳೆ, ನಿಂಬೆ ಹಣ್ಣುಗಳಲ್ಲಿ ವಿಟಮಿನ್‌  ಸಿ ಇರುತ್ತದೆ. ಹೀಗಾಗಿ, ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನಿಂಬೆ ಹಣ್ಣಿನ ರಸ ಕುಡಿವ ಅಭ್ಯಾಸ ಒಳ್ಳೆಯದು. ಬಿಸಿನೀರಿಗೆ ನಿಂಬೆ ಹಣ್ಣು ಮತ್ತು ಜೇನು ತುಪ್ಪ ಸೇರಿಸಿ ಕುಡಿಯುವುದೂ ಲಾಭಕರ. ಕೆಂಪು ದೊಣ್ಣೆ  ಮೆಣಸಿನ ಕಾಯಲ್ಲಿ ಕೆರೋಟಿನ್‌, ಬೆಳ್ಳುಳ್ಳಿ ಯಲ್ಲಿ ಅಲಿಸಿನ್‌ ಅಂಶ ಹೆಚ್ಚಿರುವುದರಿಂದ ಇದನ್ನೂ ಆಹಾರದಲ್ಲಿ ಬಳಸುತ್ತಿರಬೇಕು.

ಬೆಳ್ಳುಳ್ಳಿ ಸೇವನೆಯಿಂದ ರಕ್ತದ ಒತ್ತಡ, ಸಂಧಿವಾತದಂಥ ಸಮಸ್ಯೆಗೆ  ಪರಿಹಾರ ಸಾಧ್ಯವಿದೆ. ಮುಂಗಾರಿನ  ಕಾರಣಕ್ಕೆ ಈಗ ಶೀತ ಶುರುವಾಗುತ್ತದೆ. ಆಹಾರದಲ್ಲಿ ಶುಂಠಿಯನ್ನು ಹೆಚ್ಚಾಗಿ ಬಳಸಿದರೆ ಶೀತ ಕಡಿಮೆಯಾಗುತ್ತದೆ. ಶುಂಠಿ ರಸಕ್ಕೆ ಕಾಳು ಮೆಣಸಿನ ಪುಡಿ ಸೇರಿಸಿ ಕುಡಿದರೆ ಗಂಟಲು ಕೆರೆತ ಕಡಿಮೆಯಾಗುತ್ತದೆ. ಅರಿಶಿಣಯುಕ್ತ ಹಾಲನ್ನು  ಸೇವಿಸಿದರೆ ಗಂಟಲು ನೋವು ಕಡಿಮೆಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next