Advertisement
ಬಿಸಿಲು ಇರುವೆಡೆ ಈ ಸೋಂಕು ಬರುವುದಿಲ್ಲ ಎಂದು ಉದಾಸೀನತೆ ಬೇಡ ಎಂದು ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಗರಿಷ್ಠ ತಾಪಮಾನ ದಾಖಲಾಗುವ ಜಿಲ್ಲೆಗಳಲ್ಲೇ ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ಸದ್ಯ ಕಲಬುರಗಿಯಲ್ಲಿ ಗರಿಷ್ಠ 37.5 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ. ಈ ಭಾಗದಲ್ಲೂ ಮುಂಜಾ ಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
Related Articles
Advertisement
ಬೀದರ್, ಬಿಜಾಪುರ, ಬಾಗಲಕೋಟೆ ಸೇರಿ ಉತ್ತರ ಕರ್ನಾಟಕದ ವಿವಿಧೆಡೆ 42ರಿಂದ 43ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಸದ್ಯ ಭೂಮಿಯ ಮೇಲ್ಪದರದಲ್ಲಿ ತೇವಾಂಶ ಕಡಿಮೆಯಾಗಿದೆ. ಹೀಗಾಗಿ, ವಾತಾವರಣ ತಂಪಾಗುವ ಸಾಧ್ಯತೆ ಕಡಿಮೆ. ಬಿಸಿಲು ಗರಿಷ್ಠ ಪ್ರಮಾಣ ತಲುಪಿದಾಗ ಮಳೆಯಾಗಲಿದೆ. ಒಳನಾಡಿನ ವಾತಾವರಣದಲ್ಲಿ ಆಗುವ ಬದಲಾವಣೆಗೆ ಹೋಲಿಸಿದರೆ, ಕರಾವಳಿಯಲ್ಲಿ ಹೆಚ್ಚು ಬದಲಾವಣೆ ಬೀರುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಬಿಎಂಟಿಸಿಯಿಂದ ಕೊರೊನಾ ಕುರಿತು ಕಾರ್ಯಾಗಾರ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಡಿಪೋ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗೆ ಕೊರೊನಾ ವೈರಸ್ ಹರಡುವ ವಿಧಾನ, ರೋಗ ಲಕ್ಷಣಗಳ ಜತೆಗೆ ತಡೆಗಟ್ಟಲು ಪಾಲಿಸಲೇಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ತಿಳುವಳಿಕೆ ಮೂಡಿಸಲು ಮಾಹಿತಿ ಕಾರ್ಯಾಗಾರ ನಡೆಸುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.
ಕೊರೊನಾ ಹರಡಿದ ಮಹಿಳೆ, ಆಕೆಯ ತಂದೆ ವಿರುದ್ಧ ಕೇಸ್: ಕೊರೊನಾ ವೈರಸ್ ಸೋಂಕನ್ನು ವಿವಿಧೆಡೆ ಹರಡಿದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಗೂಗಲ್ ಸಂಸ್ಥೆಯ ಸಿಬ್ಬಂದಿಯ ಪತ್ನಿ ಹಾಗೂ ಮಾವನ (ಪತ್ನಿಯ ತಂದೆ) ವಿರುದ್ಧ “1897ರ ಸಾಂಕ್ರಾಮಿಕ ಕಾಯಿಲೆ ಕಾಯ್ದೆ’ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದೇ ತಿಂಗಳ ಮೊದಲ ವಾರದಲ್ಲಿ, ಗ್ರೀಕ್ ಪ್ರವಾಸ ಮುಗಿಸಿ ಬಂದಿದ್ದ ಗೂಗಲ್ ಸಂಸ್ಥೆಯ ಸಿಬ್ಬಂದಿ ಹಾಗೂ ಆತನ ಪತ್ನಿಗೆ ಕೊರೊನಾ ಸೋಂಕು ತಗುಲಿತ್ತು.
ತನ್ನ ಸೋಂಕನ್ನು ಯಾರಿಗೂ ತಿಳಿಸಿದ ಆಕೆ, ಆಗ್ರಾದಲ್ಲಿರುವ ತನ್ನ ತವರು ಮನೆಗೆ ತೆರಳಿದ್ದರು. ಅಲ್ಲಿಗೆ ಹೋದ ನಂತರ ಸೋಂಕು ಉಲ್ಬಣಿಸಿದ್ದರಿಂದ ಅಲ್ಲಿ ರೈಲ್ವೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಆಕೆಯ ಪರೀಕ್ಷಾ ಫಲಿತಾಂಶ ವೈದ್ಯರ ಕೈ ಸೇರುವ ಮುನ್ನವೇ ಆಸ್ಪತ್ರೆಯಿಂದ ಕಾಲ್ಕಿತ್ತು, ತನ್ನ ತವರು ಮನೆಯಲ್ಲೇ ಬಚ್ಚಿಟ್ಟುಕೊಂಡಿದ್ದರು. ಅಧಿಕಾರಿಗಳು ಮಗಳನ್ನು ಹುಡುಕಿಕೊಂಡು ಮನೆಗೆ ಬಂದಾಗ, ಆಕೆಯ ತಂದೆ ತಮ್ಮ ಮಗಳು ಬೆಂಗಳೂರಿಗೆ ಹೊರಟು ಹೋಗಿದ್ದಾಗಿ ಸುಳ್ಳು ಹೇಳಿದ್ದರು. ಹೀಗಾಗಿ, ಅವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆಎಂದು ಮೂಲಗಳು ತಿಳಿಸಿವೆ. ಈಜುಕೊಳ ಬಳಸದಂತೆ ಸೂಚನೆ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಶಾಲೆಗಳಿಗೆ ಅವಧಿಗೆ ಮುನ್ನವೇ ಬೇಸಿಗೆ ರಜೆ ಘೋಷಿಸಲಾಗಿದೆ. ಹೀಗಾಗಿ, ಮಕ್ಕಳು ಈಜುಕೊಳಗಳತ್ತ ಸುಳಿಯದಂತೆ ಎಚ್ಚರಿಕೆ ವಹಿಸುವಂತೆ ಪಾಲಿಕೆ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ಅವರು ಸೂಚನೆ ನೀಡಿದ್ದಾರೆ. ನಗರದ ಹಲವು ವಸತಿ ಸಮುತ್ಛಯಗಳಲ್ಲಿ ಈಜುಕೊಳಗಳಿದ್ದು, ಬೇಸಿಗೆಯ ಸಂದರ್ಭದಲ್ಲಿ ಇವನ್ನು ಮಕ್ಕಳು ಬಳಸುವ ಸಾಧ್ಯತೆ ಇದೆ. ಇದರಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದ್ದು, ತಾತ್ಕಾಲಿಕ ಅವಧಿಗೆ ಸ್ಥಗಿತಗೊಳಿಸುವಂತೆ ವಸತಿ ಸಮುತ್ಛಯಗಳಿಗೆ ನಿರ್ದೇಶ ಮಾಡಿದ್ದಾರೆ. ಉಳಿದ ಸೋಂಕು- ಕೊರೊನಾಗೆ ಇರುವ ವ್ಯತ್ಯಾಸ (ಡಾ.ನಾಗರಾಜ ಪ್ರಕಾರ)
-ಬೇರೆ ಸೋಂಕುಗಳು ವಾತಾವರಣದಲ್ಲಿ ಹೆಚ್ಚು ಇರುತ್ತವೆ. ಹೀಗಾಗಿ, ಬಿಸಿಲು ಹೆಚ್ಚಿರುವಾಗ ಉಲ್ಬಣ ಸಾಧ್ಯತೆ ಕಡಿಮೆ. -ಕೊರೊನಾ ಸೋಂಕು ಗಾಳಿಯಲ್ಲಿ ಶೇ.20 ಪ್ರಮಾಣ ಮಾತ್ರ. ಶೇ.80 ವೈರಸ್‌ಗಳು ಮನುಷ್ಯರ ದೇಹದ ಮೇಲೆ, ಒಳಗೆ ಹಾಗೂ ಮೊಬೈಲ್, ಟೇಬಲ್ ಸೇರಿ ಸಾಮಾನ್ಯವಾಗಿ ಬಳಸುವ ವಸ್ತುಗಳ ಮೇಲೆ ಇರುತ್ತವೆ. -ಬೇರೆ ಸೋಂಕುಗಳನ್ನು ಶೀಘ್ರವಾಗಿ ಪತ್ತೆ ಮಾಡಬಹುದು. -ಕೊರೊನಾ ದೇಹದ ಒಳಗೆ ಹರಡುವುದರಿಂದ ಇದರ ಪತ್ತೆ ಕಷ್ಟ. -ಕೊರೊನಾ ಸ್ಪರ್ಶದಿಂದ ಹರಡುತ್ತದೆ. ನೆಲ, ವಸ್ತುಗಳ ಮೇಲೆ ಕೊರೊನಾ ವೈರಾಣು ಕುಳಿತುಕೊಳ್ಳುವ ಸಾಧ್ಯತೆ ಹೆಚ್ಚು. * ಹಿತೇಶ್ ವೈ